ಮಂಗಳೂರು : ಮಕ್ಕಳಲ್ಲಿ ವೈರಲ್ ಜ್ವರ, ಜಾಗ್ರತಾ ಕ್ರಮಕ್ಕೆ ಸೂಚನೆ
Team Udayavani, Aug 9, 2022, 8:48 AM IST
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಕ್ಕಳಿಗೆ ವೈರಲ್ ಜ್ವರ ಮತ್ತು ದೇಹದ ಮೇಲೆ ಗುಳ್ಳೆಗಳು ಜಾಸ್ತಿ ಕಂಡುಬರುತ್ತಿದ್ದು ಇದು ಸಾಂಕ್ರಾಮಿಕವಾಗಿರುವುದರಿಂದ ಸೋಂಕಿತ ಮಕ್ಕಳು ಗುಣಮುಖವಾಗುವವರೆಗೆ ಮನೆಯಲ್ಲೇ ಇರಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ಸಲಹೆ ಮಾಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಅವರು ಇಂಥ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರದಂತೆ ನೋಡಿಕೊಳ್ಳಬೇಕು. ನಿರ್ದಿಷ್ಟ ಚಿಕಿತ್ಸೆ ಇಲ್ಲವಾದರೂ ಕೆಲವು ದಿನಗಳಲ್ಲಿ ಇದು ಗುಣವಾಗುತ್ತದೆ. ಅದುದರಿಂದ ಗಾಬರಿಪಡುವ ಆವಶ್ಯಕತೆ ಇಲ್ಲ ಎಂದರು.
203 ಡೆಂಘಿ ಪ್ರಕರಣಗಳು
ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ ಒಟ್ಟು 203 ಡೆಂಘಿ ಪ್ರಕರಣಗಳು ವರದಿಯಾಗಿವೆ. ಬೆಳ್ತಂಗಡಿಯಲ್ಲಿ ಅತಿ ಹೆಚ್ಚು 71 ಪ್ರಕರಣಗಳು ಕಂಡುಬಂದಿದ್ದು ನೆರಿಯ ಮತ್ತು ನಾರಾವಿಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದೆ.
93 ಮಲೇರಿಯಾ ಪ್ರಕರಣ
ದ.ಕ. ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 93 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, ಮಂಗಳೂರು ನಗರದಲ್ಲೇ ಅತಿ ಹೆಚ್ಚು 79 ಪ್ರಕರಣಗಳು ದಾಖಲಾಗಿವೆ. ಸುಳ್ಯದಲ್ಲಿ ಈ ವರ್ಷ ಮಲೇರಿಯಾ ಪ್ರಕರಣ ವರದಿಯಾಗಿಲ್ಲ. ಕೆಲವು ವರ್ಷಗಳಿಂದ ಸುಳ್ಯ ತಾಲೂಕು ಮಲೇರಿಯಾ ಮುಕ್ತವಾಗಿದೆ ಎಂದರು.
ಇದನ್ನೂ ಓದಿ : ತೆಲಂಗಾಣ : ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ನಾಯಕನ ಶವ ಪತ್ತೆ, ಕಾರಣ ನಿಗೂಢ
ಮಂಕಿಪಾಕ್ಸ್ ತಪಾಸಣೆ
ಮಂಕಿಪಾಕ್ಸ್ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದೆ. ಮಂಕಿಪಾಕ್ಸ್ ಲಕ್ಷಣ ಯಾರಲ್ಲಾದರೂ ಕಂಡುಬಂದರೆ ಅವರ ಮಾದರಿ ಸಂಗ್ರಹಿಸಿ, ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗುವುದು. ಸದ್ಯಕ್ಕೆ ಮಂಕಿ ಪಾಕ್ಸ್ ಪರೀಕ್ಷೆ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರವೇ ಇದೆ ಎಂದರು.
ಬೂಸ್ಟರ್ ಡೋಸ್ ಪಡೆಯಲು ಮನವಿ
ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಉಚಿತವಾಗಿ ಲಭ್ಯವಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರು ಮನವಿ ಮಾಡಿದರು. 18ರಿಂದ 59 ವರ್ಷ ವ¿ೋಮಾನದಲ್ಲಿ ಕೇವಲ ಶೇ. 9.5 ಮಂದಿ ಮಾತ್ರ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.