ಪುತ್ತೂರು ಡಿಪೋಗೆ ಇನ್ನೂ ಬಾರದ ಡಲ್ಟ್ ಮಾದರಿ ಸಾರಿಗೆ ಬಸ್‌!


Team Udayavani, Feb 24, 2017, 2:44 PM IST

2102kpk2.jpg

ಪುತ್ತೂರು: ಆರು ತಿಂಗಳ ಹಿಂದೆ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋಗೆ ಮಂಜೂರುಗೊಂಡ 26 ಹೊಸ ಡಲ್ಟ್ ಮಾದರಿ ಬಸ್‌ಗಳು ಇನ್ನೂ ಬಂದಿಲ್ಲ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಗರಗಳ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್‌ ಓಡಾಟಕ್ಕೆ ಕಳೆದ ವರ್ಷ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಬಸ್‌ ಲೋಕಾರ್ಪಣೆಗೆ ಚಾಲನೆ ನೀಡಿತ್ತು. ಡಿಸೆಂಬರ್‌ ವೇಳೆಗೆ ಪುತ್ತೂರು ಡಿಪೋಗೆ ಬಸ್‌ ಬರುವ ಭರವಸೆ ನೀಡಲಾಗಿತ್ತು. ಆದರೆ ಇನ್ನೂ ಬಸ್‌ ಪುತ್ತೂರು ಡಿಪೋದತ್ತ ಮುಖ ಮಾಡಿಲ್ಲ.

ಜಿಲ್ಲೆಯ ವಿವರ
ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರಿಗೆ ಹೊಸ ಮಾದರಿಯ ಬಸ್‌ ಘೋಷಿಸಲಾಗಿತ್ತು.  ಪುತ್ತೂರು ವಿಭಾಗೀಯ ಕೇಂದ್ರದ ಪುತ್ತೂರು ಡಿಪೋ ಮತ್ತು ಮಡಿಕೇರಿ ಡಿಪೋಗಳಿಗೆ ಒಟ್ಟು 44 ಬಸ್‌ಗಳು ಮಂಜೂರುಗೊಂಡಿತ್ತು. ಅದರಲ್ಲಿ ಪುತ್ತೂರು ಡಿಪೋಗೆ 26 ಬಸ್‌ಗಳು ಸೇರಿವೆ. ಹಸಿರು ಬಣ್ಣದ ಅತ್ಯಾಧುನಿಕ ಬಸ್‌ ಪುತ್ತೂರಿನಲ್ಲಿ ನಗರ ಮಾರ್ಗಗಳಲ್ಲಿ ಓಡಾಟ ನಡೆಸಲು ಬಳಸಲು ನಿರ್ಧರಿಸಲಾಗಿತ್ತು.

ಪುತ್ತೂರು ಡಿಪೋ
ಸುಳ್ಯ ಮತ್ತು ಪುತ್ತೂರು ತಾಲೂಕು ಒಳಗೊಂಡ ಪುತ್ತೂರು ಡಿಪೋದಲ್ಲಿ 165 ಶೆಡ್ನೂಲ್‌ಗ‌ಳಿವೆ. ಈಗ 168 ಬಸ್‌ಗಳು ಇವೆ. ಅದರಲ್ಲಿ ಹೆಚ್ಚಿನವು ಹಳೆ ಬಸ್‌ಗಳಾಗಿವೆ. ಓಡಾಟಕ್ಕೆ ಕಷ್ಟ ಎಂದು ಚಾಲಕರು ಈ ಹಿಂದೆಯೇ ಸಂಬಂಧಪಟ್ಟವರಿಗೆ ಮನವಿ ನೀಡಿದ್ದರು. ಮಳೆಗಾಲದಲ್ಲಿ ಸೋರುವ ಬಸ್‌ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಸಮಸ್ಯೆ ತೋಡಿಕೊಂಡಿದ್ದರು. ಕೆಲ ಬಸ್‌ಗಳು ಸೂಚಿತ ಕಿ.ಮೀ. ದಾಟಿ ಓಡಾಟಕ್ಕೆ ಅನರ್ಹವಾಗಿದ್ದರೂ ಸಂಚಾರ ನಡೆಸುತ್ತಿದ್ದ ಕಾರಣ ಕಪ್ಪು ಹೊಗೆಯೇಳುವ ಸಮಸ್ಯೆ ಕೂಡ ಇತ್ತು. ಈ ಮಧ್ಯೆ ಕಳೆದ  ಸೆ. 27ರಂದು ಪುತ್ತೂರು ಡಿಪೋಗೆ 12 ಬಸ್‌ ಸೇರ್ಪಡೆಗೊಂಡಿದೆ. ಅದಕ್ಕೆ ಮೊದಲೇ 2016 ಆ. 26ರಂದು ಮಂಜೂರಾಗಿದ್ದ ಡಲ್ಟ್ ಮಾದರಿ ಬಸ್‌ ಇನ್ನೂ ಬಂದಿಲ್ಲ..!

ರಾಜ್ಯದಲ್ಲೇ ಗರಿಷ್ಠ ಬಸ್‌ಪಾಸ್‌
ವಿದ್ಯಾರ್ಥಿಗಳಿಗೆ ಗರಿಷ್ಠ ಬಸ್‌ ವಿತರಿಸಿರುವ ಪುತ್ತೂರು ಡಿಪೋ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪುತ್ತೂರು ವಿಭಾಗದಲ್ಲಿ 44,564 ಪಾಸ್‌ ವಿತರಿಸಿದ್ದು, ಇದರಲ್ಲಿ 20,861 ಪಾಸ್‌ಗಳನ್ನು ಪುತ್ತೂರಿನಲ್ಲೇ ನೀಡಲಾಗಿದೆ. ಉಳಿದಂತೆ ಧರ್ಮಸ್ಥಳ 9,118, ಬಿ.ಸಿ. ರೋಡ್‌-5,560., ಮಡಿಕೇರಿ-9,925 ವಿದ್ಯಾರ್ಥಿಗಳು ಬಸ್‌ ಪಾಸ್‌ ಹೊಂದಿದ್ದಾರೆ. ವಿಭಾಗದ ಪುತ್ತೂರು, ಬೆಳ್ತಂಗಡಿ, ಬಿ.ಸಿ.ರೋಡ್‌ ಮತ್ತು ಮಡಿಕೇರಿ ಡಿಪೋಗಳಲ್ಲಿ 1,664 ಚಾಲಕ-ನಿರ್ವಾಹಕರು, 357 ಮೆಕ್ಯಾನಿಕ್‌ಗಳು ಇದ್ದಾರೆ. ವಿಭಾಗ ವ್ಯಾಪ್ತಿಯಲ್ಲಿ 538 ಬಸ್‌ ಇದ್ದು, ಬಿ.ಸಿ. ರೋಡ್‌-108., ಧರ್ಮಸ್ಥಳ-159 ಮತ್ತು ಮಡಿಕೇರಿ ಡಿಪೋದಲ್ಲಿ 103 ಬಸ್‌ಗಳು ಇವೆ.

ಏನಿದು ಡಲ್ಟ್ ಮಾದರಿ
ನಗರ ಸಾರಿಗೆ ಬಸ್‌ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ,  ಬಸ್‌ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಿ.ಸಿ ಟಿವಿ ಕ್ಯಾಮರಗಳು, ವಿದ್ಯುತ್‌ ಸ್ವಯಂಚಾಲಿತ ಬಾಗಿಲು, ಬಾಗಿಲು ತೆರೆದಿರುವಾಗ ವಾಹನ ಚಾಲನೆಯಾಗದೆ, ಬಾಗಿಲು ಮುಚ್ಚಿದಾಗ ಮಾತ್ರ ಚಾಲನೆಯಾಗುವ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ಆಪಾಯದ ಸಂದೇಶವನ್ನು ನಿಯಂತ್ರಣ ಕೇಂದ್ರಕ್ಕೆ ಕಳುಹಿಸಲು ಅನುಕೂಲವಾಗುವಂತೆ ಚಾಲಕರು ಬಳಸಬಹುದಾದ ಅಪಾಯ ಗುಂಡಿ, ಚಾಲನಾ ಸುರಕ್ಷತೆಗಾಗಿ ಹಿಂಬದಿ ನೋಟದ ಕ್ಯಾಮರ, ಧ್ವನಿ ಪ್ರಸರಣ ಮತ್ತು ಎಲ್‌ಇಡಿ  ಪ್ರದರ್ಶನ ವ್ಯವಸ್ಥೆ,  ಪ್ರಯಾಣಿಕರಿಗೆ ಮುಂಬರುವ ನಿಲುಗಡೆಗಳ ಮಾಹಿತಿ, ಆಸರೆ ಕಂಬಗಳಲ್ಲಿ ಪ್ರಯಾಣಿಕರು ಕೋರಿಕೆ ನಿಲುಗಡೆ ಪಡೆಯಲು ನಿಲುಗಡೆ ಗುಂಡಿ, ವಿಶೇಷಚೇತನರು ಹತ್ತಲು ಮತ್ತು ಇಳಿಯಲು ರ್‍ಯಾಂಪ್‌ ವ್ಯವಸ್ಥೆ ಮೊದಲಾದ ಸೌಲಭ್ಯಗಳು ಡಲ್ಟ್ ಮಾದರಿ ಬಸ್‌ನಲ್ಲಿ ಇರಲಿದೆ ಎಂದು ಸಾರಿಗೆ ಇಲಾಖೆ ಹೇಳಿತ್ತು.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.