ಪಟ್ಟೆ: ಶ್ರಮದಾನದ ಮೂಲಕ ಅಣೆಕಟ್ಟೆ ಕಸ ತೆರವು
Team Udayavani, Jun 20, 2018, 2:55 AM IST
ಬಡಗನ್ನೂರು: ಪಟ್ಟೆ – ಈಶ್ವರಮಂಗಲ ರಸ್ತೆಯ ಮುಂಡೋಳೆ ಬಳಿ ಹೊಳೆಯ ಮಧ್ಯೆ ರಸ್ತೆ ಕುಸಿತಕ್ಕೆ ಕಾರಣವಾದ ಕಿರು ಅಣೆಕಟ್ಟಿನಲ್ಲಿ ತುಂಬಿದ್ದ ಕಸ, ಮರದ ತುಂಡುಗಳನ್ನು ಶ್ರೀಕೃಷ್ಣ ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ತೆರವುಗೊಳಿಸಿದರು. ಅಣೆಕಟ್ಟಿನಲ್ಲಿ ದೊಡ್ಡ ಗಾತ್ರದ ಮರದ ತುಂಡುಗಳು, ಕಸ, ಪೊದೆಗಳು ತುಂಬಿದ್ದ ಕಾರಣ ಕಳೆದ ಬುಧವಾರ ಹೊಳೆ ತುಂಬಿ ಹರಿದು ಸಂಗಮವಾಗಿದ್ದು, ಮಧ್ಯೆ ಸಾಗುವ ರಸ್ತೆಯ ಮಣ್ಣು ಕುಸಿತ ಉಂಟಾಗಿ ಸಂಪರ್ಕ ಕಡಿತವಾಗಿತ್ತು.
ರಸ್ತೆ ಕುಸಿತ ಉಂಟಾದಲ್ಲಿಗೆ ಬಡಗನ್ನೂರು ಗ್ರಾ.ಪಂ. ವತಿಯಿಂದ ಅಧ್ಯಕ್ಷ ಕೇಶವ ಗೌಡ ಕನ್ನಾಯ ಅವರ ನೇತೃತ್ವದಲ್ಲಿ ಹಲವು ಲೋಡು ಕಲ್ಲುಗಳನ್ನು ತರಿಸಿ ಹಾಕಲಾಗಿದೆ. ಅಣೆಕಟ್ಟಿನಲ್ಲಿ ಉಂಟಾಗಿದ್ದ ತಡೆಯನ್ನು ಶ್ರೀಕೃಷ್ಣ ಯುವಕ ಮಂಡಲದ 30 ಸದಸ್ಯರು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ. ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಾಯ ಹಾಗೂ ಶ್ರೀಕೃಷ್ಣ ಯುವಕಮಂಡಲದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ ಶ್ರಮದಾನದ ನೇತೃತ್ವ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.