10 ವರ್ಷ ಸಂದರೂ ಅಣೆಕಟ್ಟು ಕಾಮಗಾರಿ ಅಪೂರ್ಣ
Team Udayavani, Oct 21, 2018, 12:19 PM IST
ವಿಟ್ಲ: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಮೈ ಎಂಬಲ್ಲಿ ತೋಡಿಗೆ ನಿರ್ಮಿಸಿದಕಿಂಡಿ ಅಣೆಕಟ್ಟು ಅಪೂರ್ಣವಾಗಿದ್ದು, ಬಳಸಲು ಯೋಗ್ಯವಾಗಿಲ್ಲ. ನೀರಿಗೆ ಬರ ಎದುರಾದಾಗ ಪದೇ ಪದೇ ಅಣೆಕಟ್ಟಿನ ಅಪೂರ್ಣ ಕಾಮಗಾರಿ ನೆನಪಾಗುತ್ತದೆ. 2008 – 09ರಲ್ಲಿ ಬಂಟ್ವಾಳ ತಾ.ಪಂ.ನ ಯೋಜನೆಯಂತೆ ಸುಮಾರು 1.41 ಲಕ್ಷ ರೂ. ವೆಚ್ಚದಲ್ಲಿ ಯೋಜನ ಗಾತ್ರವು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಿದ್ಧವಾಯಿತು. ಮಂಜೂರಾದ ಅನುದಾನದಂತೆ ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಿದ್ದಾರೆ ಎಂಬ ಮಾಹಿತಿಯು ಮಾಹಿತಿ ಹಕ್ಕಿನ ಮುಖಾಂತರ ಲಭಿಸಿದೆ.
ಸರಕಾರದಿಂದ ಮಂಜೂರುಗೊಂಡ ಅನುದಾನದಲ್ಲಿ ಅಣೆಕಟ್ಟಿನ ಅರ್ಧ ಕೆಲಸ ಆಗಿ 10 ವರ್ಷಗಳು ಸಂದಿವೆ. ಇನ್ನು ಇದರ ಕೆಲಸ ಪೂರ್ಣವಾಗಿ ನೀರಿಂಗಿಸುವಿಕೆ ಪ್ರಾರಂಭವಾಗಬೇಕಾದರೆ ಬಿಡುಗಡೆಗೊಂಡಿದ್ದ ಅನುದಾನದ 3 ಪಟ್ಟು ಬೇಕಾಗಬಹುದು.
ಅವೈಜ್ಞಾನಿಕ ಯೋಜನೆ
ಈ ಅಪೂರ್ಣ ಅನೆಕಟ್ಟು ನಿರ್ಮಾಣವಾದ ಸ್ಥಳ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹಳೆಯ ಅಣೆಕಟ್ಟು ಇದ್ದ ಸ್ಥಳದಲ್ಲಿ ನಿರ್ಮಿ ಸುವ ಪ್ರಸ್ತಾವನೆ ಇತ್ತು. ಆದರೆ ಬಾಹ್ಯ ಒತ್ತಡದಿಂದ ಸೂಕ್ತವಲ್ಲದ ಸ್ಥಳದಲ್ಲಿ ಅಪೂರ್ಣ ಕಾಮಗಾರಿ ಆಗಿದೆ. ಹಳೆಯ ಅಣೆಕಟ್ಟು ಇದ್ದ ಸ್ಥಳದಲ್ಲೇ ನಿರ್ಮಾಣವಾಗುತ್ತಿದ್ದರೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು.
ಮಳೆಗಾಲದಲ್ಲಿ ಜಲಾವೃತ
ಅಣೆಕಟ್ಟಿನ ಎರಡೂ ಬದಿಗಳಲ್ಲಿ ತಡೆಗಡೆ ಮತ್ತು ಸಂಪರ್ಕ ಕಾಲುವೆ ನಿರ್ಮಾಣವಾಗಿಲ್ಲ. ಮಳೆಗಾಲದಲ್ಲಿ ಪಕ್ಕದ ಅಡಿಕೆ ತೋಟಗಳು ಜಲಾವೃತವಾಗುತ್ತವೆ. ಈ ವರ್ಷ ಭಾರೀ ಪ್ರಮಾಣದ ಮಳೆಯಾಗದ ಕಾರಣ ನೀರು ತೋಡು ತುಂಬ ಹರಿದರೂ ಕೃಷಿ ತೋಟಕ್ಕೆ ಹಾನಿಯಾಗಿಲ್ಲ. ಈ ಹಿಂದಿನ ಬಾರಿ ಸತತವಾಗಿ ಕೃಷಿ ತೋಟಗಳು ಜಲಾವೃತ ವಾಗಿದ್ದವು. ಈ ಮಹತ್ವದ ಯೋಜನೆ ಒಂದು ವೇಳೆ ಪೂರ್ಣಗೊಂಡಿದ್ದೇ ಆದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಗಳು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದವು.
ಅಂತರ್ಜಲ ಮಟ್ಟ ಕುಸಿತ
ಕಳೆದ ಮೂರು ವರ್ಷಗಳಲ್ಲಿ ಆಸುಪಾಸಿನಲ್ಲಿ ಕೊರೆದ ಬೋರ್ ವೆಲ್‌ಗಳಲ್ಲಿ ನೀರು ತಳ ಹಿಡಿದಿದ್ದು, ಕುಡಿಯುವ ನೀರಿಗೋಸ್ಕರ ಮಾತ್ರವೇ ಬಳಕೆಯಾಗುವಷ್ಟು ನೀರು ಇದೆ. ಇದು ಈ ಭಾಗದ ಜಲ ಲಭ್ಯತೆಯನ್ನು ತೋರಿಸುತ್ತದೆ. ಇನ್ನು ವ್ಯವಸಾಯಕ್ಕೆ ಬೇಕಾದ ನೀರು ತಳ ಹಿಡಿದಿದೆ. ಈ ಭಾಗದ ಜನ ಅಣೆಕಟ್ಟಿನ ಕೆಲಸ ನಡೆಯುವ ಸಂದರ್ಭ ಆಶಾದಾಯಕವಾಗಿದ್ದರು. ಜನರ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ.
ಮಂಜೂರಾದ 1.41 ಲಕ್ಷ ರೂ. ಹಣದಲ್ಲಿ 1.40 ಲಕ್ಷ ರೂ. ಖರ್ಚಾಗಿದೆ. ಅರ್ಧದಷ್ಟು ಕಾಮಗಾರಿ ಪೂರ್ಣವಾಗಿಲ್ಲ. ಕೆಲಸ ಸ್ಥಗಿತಗೊಂಡು ಸುಮಾರು 10 ವರ್ಷ ಗಳಾದರೂ ಈ ವರ್ಷ, ಮುಂದಿನ ವರ್ಷ ಕೆಲಸ ಪೂರ್ಣಗೊಳ್ಳಬಹುದು ಎಂಬ ಈ ಭಾಗದ ಜನರ ಆಶಾವಾದ ಹುಸಿಯಾಗಿದೆ. ಸರಕಾರದ ಯೋಜನೆಯ ಮೊತ್ತ ಖರ್ಚಾಗಿದ್ದರೂ ಪ್ರಯೋಜನಕ್ಕೆ ಬರಲಾರದ ವ್ಯಥೆ ಈ ಭಾಗದ ಜನರದ್ದು.
ಬೇಕಿದೆ ಹೆಚ್ಚಿನ ಅನುದಾನ
ಈ ಕಾಮಗಾರಿ ಬಂಟ್ವಾಳ ತಾ.ಪಂ. ವ್ಯಾಪ್ತಿಗೆ ಬರುವುದರಿಂದ ಗ್ರಾ.ಪಂ. ಪಾಲು ಕಡಿಮೆ ಇದೆ. ಆದರೆ ಈ ಸಮಸ್ಯೆಗಳ ಕುರಿತು ತಾ.ಪಂ. ಗಮನಕ್ಕೆ ತರುವಂತಹ ಕೆಲಸ ಸ್ಥಳೀಯ ಗ್ರಾ.ಪಂ. ಕಡೆಯಿಂದ ಆಗಬೇಕಿದೆ.
ನಿರೀಕ್ಷೆ ಇಲ್ಲ
ಸರಕಾರದ ಅನುದಾನದಂತೆ ಯೋಜನೆ ನಡೆದಿದೆ ಎಂಬುದು ಮೇಲ್ನೋಟದ ಸತ್ಯ. ಮಂಜೂರಾದ ಅನುದಾನ ಖರ್ಚಾಗಿರುವ ಬಗ್ಗೆವಿಶ್ವಾಸ ಇಲ್ಲ. ಪ್ರತಿ ಬಾರಿಯೂ ಈ ಅಪೂರ್ಣ ಸ್ಥಿತಿಯನ್ನು ಕಂಡು ಬೇಸತ್ತಿದ್ದೇವೆ. ಇಂದಲ್ಲ ನಾಳೆಯಾದರೂ ಕಾಮಗಾರಿ ಪೂರ್ಣವಾದೀತು ಎಂಬ ನಿರೀಕ್ಷೆ ನಮ್ಮದು. ಆದರೆ ಅದು ಬರೀ ನಿರೀಕ್ಷೆಯಾಗಿ ಉಳಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕ್ರಮಕ್ಕೆ ಸೂಚನೆ
ಕಾಮಗಾರಿ ಕೆಲಸ ಅರ್ಧದಲ್ಲಿರುವ ಕುರಿತು ಈ ತನಕ ಯಾವುದೇ ದೂರುಗಳು ಬಂದಿಲ್ಲ. ಮುಂದಿನ ದಿನಗಳಲ್ಲಿ ದೂರುಗಳು ಸಲ್ಲಿಕೆಯಾದರೆ ಪರಿಶೀಲಿಸಿ, ಸ್ಥಳೀಯ ಪಂ.ಗೆ ಸೂಚನೆ ನೀಡಲಾಗುವುದು.
– ರಾಜಣ್ಣ ಕಾರ್ಯ ನಿರ್ವಣಾಧಿಕಾರಿ,
ಬಂಟ್ವಾಳ ತಾ.ಪಂ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.