ವಿವಿಧೆಡೆ ಮರ, ತಡೆಗೋಡೆ ಬಿದ್ದು ಹಾನಿ
ಚುರುಕುಗೊಂಡ ಮುಂಗಾರು ಮಳೆ
Team Udayavani, Jul 11, 2019, 5:14 AM IST
ಕೋಟೆಕಾರ್ ಬೀರಿಯ ಡಾ| ಬಿ.ಆರ್. ಅಂಬೇಡ್ಕರ್ ಕೈಗಾರಿಕಾ ಸಂಘದ ಕಟ್ಟಡದ ಛಾವಣಿಯ ಶೀಟ್‌ಗಳು ಸುಂಟರ ಗಾಳಿಗೆ ಹಾನಿಯಾಗಿರುವುದು.
ಮಹಾನಗರ: ನಗರದ ಜನರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಧಾರಾಕಾರ ಮಳೆ ಮಂಗಳವಾರ ರಾತ್ರಿಯಿಂದ ಆರಂಭವಾಗಿದ್ದು, ಪರಿಣಾಮವಾಗಿ ನಗರದ ಕೆಲವು ಪ್ರದೇಶಗಳಲ್ಲಿ ಮರ ಬಿದ್ದು ಮನೆಗೆ ಹಾನಿ, ತಡೆ ಗೋಡೆ ಕುಸಿದು ಕೆಳ ಭಾಗದ ಮನೆಯ ಕೊಠಡಿಗೆ ಹಾನಿ, ರಸ್ತೆಗೆ ಮಣ್ಣು ಬಿದ್ದು ಟ್ರಾಫಿಕ್ ಜಾಮ್, ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ ಮತ್ತಿತರ ಹಲವು ಅಹಿತಕರ ಘಟನೆಗಳು ಸಂಭವಿಸಿವೆ.
ಆಕಾಶಭವನದ ಆನಂದನಗರದಲ್ಲಿ ಮಂಗಳ ವಾರ ರಾತ್ರಿ ಜಯಶ್ರೀ ಅವರ ಮನೆ ಮೇಲೆ ಪಕ್ಕದ ಮನೆಯ ಆವರಣದಲ್ಲಿದ್ದ ಮರ ಬಿದ್ದು, ಅಡುಗೆ ಕೋಣೆ, ಬೆಡ್ ರೂಂಗಳಿಗೆ ಹಾನಿಯಾಗಿದೆ. ಯಾರಿಗೂ ಅಪಾಯ ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ತೆರಳಿ ಮರವನ್ನು ತೆರವುಗೊಳಿಸಿದರು.
ಬುಧವಾರ ಬೆಳಗ್ಗೆ ಆಕಾಶಭವನದ ಪರಪಾದೆಯಲ್ಲಿ ಶುಭಾ ಅವರ ಮನೆಗೆ ಪಕ್ಕದ (ಹಿಂಬದಿ) ಗುಡಿಯೊಂದರ ತಡೆಗೋಡೆ ಕುಸಿದು ಬಿದ್ದು, ಶೌಚಾಲಯ ಕೊಠಡಿ ಮತ್ತು ಬೆಡ್‌ರೂಂಗೆ ಹಾನಿಯಾಗಿದೆ. ಈ ಎರಡೂ ಘಟನೆಗಳ ಸುದ್ದಿ ತಿಳಿದು ಸ್ಥಳೀಯ ಮಾಜಿ ಕಾರ್ಪೊರೇಟರ್ ದೀಪಕ್ ಪೂಜಾರಿ ಸ್ಥಳಕ್ಕೆ ತೆರಳಿ ಪಾಲಿಕೆಯ ಅಧಿಕಾ ರಿಗಳನ್ನು ಕರೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನೆರವಾದರು. ಅಗ್ನಿಶಾಮಕ ದಳದವರೂ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಎನ್‌ಡಿಆರ್‌ಎಫ್ ತಂಡ, ಪಾಲಿಕೆ ಕಂದಾಯ ಅಧಿಕಾರಿಗಳು, ಜೂ. ಎಂಜಿನಿಯರ್ ಯಶವಂತ್ ಸ್ಥಳಕ್ಕೆ ತೆರಳಿದ್ದರು.
ಪಡೀಲ್ ರಸ್ತೆಯಲ್ಲಿ ಕೆಸರು
ಪಡೀಲ್ ರೈಲ್ವೇ ಮೇಲ್ಸೇತುವೆ ಇರುವ ತಾಣ ದಲ್ಲಿ ಮಳೆಯಿಂದಾಗಿ ಮೇಲ್ಭಾಗದ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಬುಧವಾರ ಬೆಳಗ್ಗೆ ಸೇತುವೆಯ ಒಳ ಭಾಗದ ರಸ್ತೆಯಲ್ಲಿ ಕೆಸರು ತುಂಬಿತ್ತು.ಇದರಿಂದ ಸೇತುವೆಯ ಒಳಭಾಗದಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಪರದಾಡಿದರು.
ಬೈಕ್ ಸವಾರನಿಗೆ ಗಾಯ
ಪಡೀಲ್ ಸಮೀಪದ ಕಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಳೆ ನೀರು ಹರಿದು ಹೋಗಲು ಅವಕಾಶ ಇಲ್ಲದೆ ರಸ್ತೆಯಲ್ಲಿ ನೀರು ನಿಂತ ಕಾರಣ ಲಾರಿಯೊಂದಕ್ಕೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡಿದ್ದಾರೆ.
ಟ್ರಾಫಿಕ್ ಜಾಮ್
ಬೆಳಗ್ಗಿನ ಹೊತ್ತು ಎಡೆಬಿಡದೆ ಮಳೆ ಬಂದ ಕಾರಣ ವಾಹನಗಳು ಅಧಿಕ ಸಂಖ್ಯೆಯಲ್ಲಿ ರಸ್ತೆಗಿಳಿದ ಹಿನ್ನೆಲೆಯಲ್ಲಿ ಕಂಕನಾಡಿ ಕರಾವಳಿ ವೃತ್ತ ಮತ್ತು ಜ್ಯೋತಿ ಜಂಕ್ಷನ್ ಬಳಿ ಟ್ರಾಫಿಕ್ ಜಾಮ್ ಕಂಡು ಬಂದಿತ್ತು. ಇದರಿಂದಾಗಿ ಪಂಪ್‌ವೆಲ್‌ನಿಂದ ಕಂಕನಾಡಿ ಕರಾವಳಿ ವೃತ್ತದ ಕಡೆಗೆ ಸಂಚರಿಸ ಬೇಕಾದ ಕೆಲವು ಬಸ್ಸುಗಳನ್ನು ಚಾಲಕರು ನಂತೂರು – ಕದ್ರಿ ಮಲ್ಲಿಕಟ್ಟೆ – ಬೆಂದೂರು ಮಾರ್ಗ ದಲ್ಲಿ ಚಲಾಯಿಸಿದರು. ಮಳೆ ತೀವ್ರವಾದಾಗ ಇನ್ನಷ್ಟು ಅನಾಹುತಗಳು ಸಂಭವಿಸಿಸುವ ಎಲ್ಲ ಸಾಧ್ಯತೆಗಳಿವೆ.
ವಿದ್ಯುತ್ ವ್ಯತ್ಯಯ
ವಾಮಂಜೂರು ಸಮೀಪದ ಪಚ್ಚನಾ ಡಿಯ ಮಂಗಳ ಜ್ಯೋತಿ ಬಳಿ ಮಂಗಳವಾರ ಎರಡು ಮರಗಳು ಉರುಳಿ ವಿದ್ಯುತ್ ಕಂಬಗಳ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಗಳೂ ಧರಾಶಾಯಿಯಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.