“ಗಾಡಿ ರಸ್ತೆ’ಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನವೇ ನಡೆದಿಲ್ಲ !
ಬಂಟ್ವಾಳ-ಸಿದ್ಧಕಟ್ಟೆ-ಮೂಡುಬಿದಿರೆ ರಸ್ತೆ
Team Udayavani, Nov 11, 2019, 5:31 AM IST
ಈ ಸರಣಿ ಆರಂಭಿಸಿರುವುದು ನಮ್ಮ ಪ್ರಮುಖ ರಸ್ತೆಗಳ ಸಚಿತ್ರ ದರ್ಶನ ನೀಡಲೆಂದೇ. ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಪಂಚಾಯತ್‌ನ ಹಲವು ರಸ್ತೆಗಳು ಇಂದು ಸಂಚಾರಕ್ಕೆ ಅಯೋಗ್ಯವಾಗಿವೆ. ಈ ಮಾತು ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಿಗೆ ಅನ್ವಯ. ಉದಯವಾಣಿಯ ವರದಿಗಾರರು ಈ ಹದಗೆಟ್ಟ ರಸ್ತೆಗಳಲ್ಲಿ ತಿರುಗಾಡಿ, ಸ್ಥಳೀಯರನ್ನು ಮಾತನಾಡಿಸಿ ರಸ್ತೆಗಳ ವಾಸ್ತವ ಸ್ಥಿತಿಯನ್ನು ಓದುಗರ ಎದುರು ತೆರೆದಿಡುವ ಪ್ರಯತ್ನವಿದು. ಲೋಕೋಪಯೋಗಿ ಇಲಾಖೆ ಕೂಡಲೇ ಜನರ ಗೋಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕೆಂಬುದು ಜನಾಗ್ರಹ.
ಬಂಟ್ವಾಳ: ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳ ಗ್ರಾಮೀಣ ಜನತೆಯನ್ನು ಬೆಸೆಯುವ ಬಂಟ್ವಾಳ-ಸಿದ್ಧಕಟ್ಟೆ- ಮೂಡುಬಿದಿರೆ ಲೋಕೋಪಯೋಗಿ ರಸ್ತೆಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ದಟ್ಟಣೆ ಹೆಚ್ಚು ತ್ತಿದೆಯೇ ವಿನಾ ಅದಕ್ಕೆ ಪೂರಕವಾಗಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆದಿಲ್ಲ.
ಬಿ.ಸಿ.ರೋಡು-ಕಡೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ಬೈಪಾಸ್‌ನಿಂದ ಕವ ಲೊಡೆಯುವ ಈ ರಸ್ತೆಯು ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಜನತೆಯನ್ನು ಮೂಡುಬಿದಿರೆ, ಕಾರ್ಕಳ, ಬಜಗೋಳಿ, ಶೃಂಗೇರಿ ಮೊದಲಾದ ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಎನಿಸಿಕೊಂಡಿದೆ.
25 ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಪ್ರಸ್ತುತ ಬಂಟ್ವಾಳ ಬೈಪಾಸ್-ಸೊರ್ನಾಡು ಪ್ರದೇಶದ 5 ಕಿ.ಮೀ.ಯನ್ನು ಸಿಆರ್‌ಎಫ್ ನಿಧಿಯ 5 ಕೋ.ರೂ. ಅನುದಾನದಲ್ಲಿ ಅಭಿ
ವೃದ್ಧಿ ಪಡಿಸಲಾಗುತ್ತಿದೆ. ಈ ಸಂದರ್ಭ ತಿರುವುಗಳನ್ನು ತೆರವುಗೊಳಿ ಸಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಸ್ಥಳೀಯರು ಹೇಳುವ ಪ್ರಕಾರ ಒಂದು
ಕಾಲದಲ್ಲಿ ಎತ್ತಿನ ಗಾಡಿಗಳು ಸಾಗುತ್ತಿದ್ದ ಈ ಮಾರ್ಗವನ್ನು ಸ್ವಲ್ಪ ಅಭಿವೃದ್ಧಿ ಪಡಿಸಿದ್ದಾ ರೆಯೇ ವಿನಾ ಪೂರ್ಣ ಪ್ರಮಾಣದಲ್ಲಿ ಹೆದ್ದಾರಿ ಯಾಗಿಸುವ ಪ್ರಯತ್ನಗಳಾಗಿಲ್ಲ. ಬಂಟ್ವಾಳದಿಂದ ಸಂಗಬೆಟ್ಟುವರೆಗೆ ರಸ್ತೆ ಪೂರ್ತಿ ಹದಗೆಟ್ಟಿದ್ದು, ಬಳಿಕ ಮೂಡುಬಿದಿರೆ ಪೇಪರ್ ಮಿಲ್ ವರೆಗೆ ಸಂಚಾರಕ್ಕೆ ಕೊಂಚ ಯೋಗ್ಯವಾಗಿದೆ.
ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ಕಳೆದೆರಡು ವರ್ಷಗಳಲ್ಲಿ ಮೂರ್‍ನಾಲ್ಕು ಜೀವಹಾನಿಯೂ ಆಗಿವೆ. ಕೆಲವು ವರ್ಷಗಳ ಹಿಂದೆ ಕುದೊRàಳಿಯಲ್ಲಿ ಬಸ್ಸೊಂದು ತೋಡಿಗೆ ಬಿದ್ದ ಘಟನೆಯೂ ನಡೆದಿತ್ತು. ಅಣ್ಣಳಿಕೆ ತಿರುವಿನಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ.
ಪ್ರತಿವರ್ಷ ರಸ್ತೆಗೆ ತೇಪೆಯ ಹೊರತು ಶಾಶ್ವತ ಪರಿಹಾರದ ಪ್ರಯತ್ನ ಗಳಾಗಿಲ್ಲ.ಚರಂಡಿ ಇಲ್ಲದ ಕಾರಣ ರಸ್ತೆ ಅಂಚಿನಲ್ಲೇ ಮಳೆ ನೀರು ಹರಿದು ಹೊಂಡಗಳು ಸೃಷ್ಟಿಯಾ ಗಿವೆ. ಕಿರಿದಾದ ರಸ್ತೆಯಲ್ಲಿ ವಾಹನಗಳು ಮುಖಾಮುಖೀಯಾದಾಗ ಹೊಂಡಕ್ಕೆ ಇಳಿದೇಮುಂದುವರಿಯಬೇಕಿದೆ. 30ಕ್ಕೂ ಅಧಿಕ ಕಡೆ ಅಪಾಯಕಾರಿ ತಿರುವುಗಳಿವೆ.
ಅತಿ ಹೆಚ್ಚು ಹಾಳಾಗಿರುವುದು
ಬಂಟ್ವಾಳ ಬೈಪಾಸ್, ವಿದ್ಯಾಗಿರಿ, ಲೊರೆಟ್ಟೊ, ಪೆದಮಲೆ, ಬಂಡಸಾಲೆ, ಸೊರ್ನಾಡು, ಅಣ್ಣಳಿಕೆ ತಿರುವು, ಅಣ್ಣಳಿಕೆ ಜಂಕ್ಷನ್, ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಬಳಿ, ಕೊಯಿಲ, ಕುದ್ಮಾಣಿ, ರಾಯಿ, ಕುದ್ಕೋಳಿ, ಮಾಡಮೆ, ಸಿದ್ಧಕಟ್ಟೆ.
ಎಚ್ಚರಿಕೆ ವಹಿಸಬೇಕಾದ ಅಂಶಗಳು
-ಮೂವತ್ತಕ್ಕೂ ಅಧಿಕ ಕಡೆ ಅಪಾಯಕಾರಿ ತಿರುವುಗಳು
-ಕುದ್ಕೋಳಿ ಬಳಿ ತೋಡೊಂದು ರಸ್ತೆಯ ಬದಿಯಲ್ಲೇ ಹರಿಯುತ್ತಿದೆ
-ಇಳಿಜಾರು ರಸ್ತೆಗಳು ಹೆಚ್ಚಿದ್ದು, ಚಾಲನೆಯ ವೇಳೆ ಎಚ್ಚರಿಕೆ ಅಗತ್ಯ
-ಸಂಚಾರದುದ್ದಕ್ಕೂ ರಸ್ತೆಯ ಬದಿಯಲ್ಲಿ ಪ್ರಪಾತಗಳಿವೆ
-ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳಿದ್ದು, ದ್ವಿಚಕ್ರ ಸವಾರರಿಗೆ ಹೆಚ್ಚಿನ ಅಪಾಯ
ಬಂಟ್ವಾಳದಿಂದ ಸೊರ್ನಾಡುವರೆಗೆ ಸಿಆರ್‌ಎಫ್ ನಿಧಿಯ 5 ಕೋ.ರೂ. ಅನುದಾನದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಸೊರ್ನಾಡು ಬಳಿಕದ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕುರಿತು ಪಿಡಬ್ಲ್ಯೂಡಿಯಲ್ಲಿ ಸದ್ಯ ಯೋಜನೆಗಳಿಲ್ಲ.
-ಷಣ್ಮುಗಂ, ಸ. ಕಾರ್ಯಪಾಲಕ
ಎಂಜಿನಿಯರ್, ಪಿಡಬ್ಲ್ಯೂ ಡಿ,
ಬಂಟ್ವಾಳ
ದೂರದೃಷ್ಟಿ ಇಲ್ಲದ ಅಭಿವೃದ್ಧಿ
ಕೆಲವು ದಶಕಗಳಿಂದ ಈ ರಸ್ತೆಯನ್ನು ನೋಡುತ್ತಾ ಬೆಳೆದವನು ನಾನು. ಅಂದಿಗೂ ಇಂದಿಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ. ದಿನನಿತ್ಯ ಇದೇ ರಸ್ತೆಯಲ್ಲಿ ಸಂಚರಿಸು ತ್ತಿದ್ದು, ದೂರದೃಷ್ಟಿ ಇಟ್ಟುಕೊಂಡು ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯ ಮಾಡಿಲ್ಲ.
– ರಾಮಚಂದ್ರ ಶೆಟ್ಟಿಗಾರ್, ಅಣ್ಣಳಿಕೆ
ತಿರುವುಗಳ ಬದಲು ನೇರ ರಸ್ತೆ
ಈ ರಸ್ತೆ ಅತಿ ಹೆಚ್ಚಿನ ತಿರುವುಗಳಿಂದ ಕೂಡಿದೆ. ಪ್ರಸ್ತುತ ಕಾಮಗಾರಿ ನಡೆಯುತ್ತಿದ್ದು ತಿರುವುಗಳನ್ನು ತೆಗೆದು ರಸ್ತೆಯನ್ನು ನೇರಗೊಳಿಸುವಂತೆ ಆಗ್ರಹಿಸಿದರೂ ಸ್ಪಂದನೆ ಸಿಕ್ಕಿಲ್ಲ. ರಸ್ತೆಯ ಅಭಿವೃದ್ಧಿಗೆ ಯಾರೂ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ.
– ಸುರೇಶ್ ಶೆಟ್ಟಿ , ಸಿದ್ಧಕಟ್ಟೆ, ನ್ಯಾಯವಾದಿ
ವೈಜ್ಞಾನಿಕವಾಗಿ ನಡೆಯಲಿ
ನಿತ್ಯ ಸಿದ್ಧಕಟ್ಟೆಯಿಂದ ಬಿ.ಸಿ.ರೋಡಿಗೆ ಸಂಚರಿಸು ತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕನಾಗಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದ್ದು, ಹೀಗಾಗಿ ವೈಜ್ಞಾನಿಕವಾಗಿ ನಡೆಯಲಿ ಎಂಬುದು ನಮ್ಮ ಆಗ್ರಹವಾಗಿದೆ.
– ರಿಚರ್ಡ್ ಡಿ’ಕೋಸ್ತಾ, ನ್ಯಾಯವಾದಿ
ಸೂಕ್ತ ರೀತಿ ಅಭಿವೃದ್ಧಿಯಾಗಲಿ
ಬಂಟ್ವಾಳ ಬೈಪಾಸ್‌ನಿಂದ ಸೊರ್ನಾಡು ವರೆಗೆ ರಸ್ತೆ ಸಾಕಷ್ಟು ಹೊಂಡಗುಂಡಿಗಳಿಂದ ತುಂಬಿದ್ದು, ಕಳೆದ 20 ವರ್ಷಗಳಿಂದ ನಾದುರಸ್ತಿಯಲ್ಲಿದೆ. ಅದನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಿ ಎಂಬುದು ನಮ್ಮ ಆಗ್ರಹವಾಗಿದೆ.
– ಸುರೇಶ್ ಪೂಜಾರಿ, ಸೊರ್ನಾಡು
ಚರಂಡಿ-ಮೋರಿ ವ್ಯವಸ್ಥೆ
ಬಂಟ್ವಾಳದಿಂದ ಸೊರ್ನಾಡು ವರೆಗಿನ ರಸ್ತೆಯನ್ನು ಅಗಲಗೊಳಿಸುವ ಕಾಮಗಾರಿ ನಡೆಯ ಬೇಕು. ಜತೆಗೆ ಸೂಕ್ತ ರೀತಿಯ ಚರಂಡಿ, ಮೋರಿ ಸೌಕರ್ಯಗಳನ್ನು ಕಲ್ಪಿಸಲಿ ಎಂಬುದು ನಿತ್ಯ ಪ್ರಯಾಣಿಕರಾದ ನಮ್ಮ ಆಗ್ರಹ.
-ಗಂಗಾಧರ, ಪಂಜಿಕಲ್ಲು
ಸಾಕಷ್ಟು ಅಪಘಾತಗಳಾಗಿವೆ
ರಸ್ತೆಯುದ್ದಕ್ಕೂ ತಿರುವುಗಳೇ ತುಂಬಿದ್ದು, ಸಂಚಾರಕ್ಕೆ ದುಸ್ಥರವಾದ ರಸ್ತೆಯಾಗಿದೆ. ಈಗಾಗಲೇ ಹಲವು ಅಪಘಾತಗಳು ಸಂಭವಿಸಿ ಜೀವಹಾನಿಯೂ ಸಂಭವಿ
ಸಿದೆ. ಆದ್ದರಿಂದ ಊರಿನವರು ಪ್ರತಿ ಬಾರಿಯೂ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಬೇಕಾದ ಸ್ಥಿತಿ ಇದೆ.
– ಗೋಪಾಲ ಸಾಲ್ಯಾನ್, ಸೊರ್ನಾಡು
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.