ಅಪಾಯಕಾರಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬ
Team Udayavani, Jun 18, 2019, 5:15 AM IST
ಬಜಪೆ: ಇಲ್ಲಿನ ಪೇಟೆಯ ಫುಟ್‌ಪಾತ್ ಸಮೀಪದಲ್ಲೇ ಇರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮಳೆಗಾಲದಲ್ಲಿ ಗಾಳಿ ಮಳೆಗೆ ವಿದ್ಯುತ್ ಅಪ ಘಾತ, ತಂತಿ ಕಡಿದು ಬೀಳುವ ಅಪಾಯ ಹೆಚ್ಚಾಗಿರುವುದರಿಂದ ಪಾದಚಾರಿಗಳ ಹಿತದೃಷ್ಟಿಯಿಂದ ಹಾಗೂ ಮುಂಜಾಗ್ರತ ಕ್ರಮವಾಗಿ ಈ ಟ್ರಾನ್ಸ್‌ಫಾರ್ಮರ್ ಕಂಬವನ್ನು ಇಲ್ಲಿಂದ ಸ್ಥಳಾಂತರಿಸುವುದು ಉತ್ತಮ. ಇಲ್ಲವಾದರೆ ಕನಿಷ್ಠ ಸೂಕ್ತ ರಕ್ಷಣಾ ಬೇಲಿ ಅಳವಡಿಸಬೇಕಿದೆ.
ಬಜಪೆ ಪೇಟೆಯ ಚರಂಡಿ ಬದಿಯಲ್ಲೇ ಇರುವ ಈ ಟ್ರಾನ್ಸ್‌ಫಾರ್ಮರ್ ಕಂಬದ ಸಮೀಪದಿಂದಲೇ ಕಾನ್ವೆಂಟ್ ಮೂಲಕ ಮುರ ನಗರಕ್ಕೆ ಹೋಗುವ ರಸ್ತೆ ಇದೆ. ಅಲ್ಲದೇ ಇಲ್ಲಿ ರಾಜ್ಯ ಹೆದ್ದಾರಿ 67 ಕೂಡ ಹಾದು ಹೋಗಿದೆ. ಹೀಗಾಗಿ ಇಲ್ಲಿ ವಾಹನ, ಜನ ಸಂಚಾರ ಅಧಿಕವಾಗಿರುತ್ತದೆ.
ಹೆಚ್ಚು ಅಪಾಯಕಾರಿ
ಈ ಟ್ರಾನ್ಸ್‌ಫಾರ್ಮರ್ ಕಂಬದ ಕೆಳಗೆ ಜನರ ಓಡಾಟಕ್ಕೆ ಸಾಕಾಗುವಷ್ಟು ಜಾಗವಿದೆ. ಅಲ್ಲದೇ ಕೆಲವರು ವಾಹನಗಳನ್ನೂ ಇದರ ಸಮೀಪದಲ್ಲೇ ನಿಲ್ಲಿಸಿ ಹೋಗುತ್ತಾರೆ. ಫುಟ್‌ಪಾತ್ ಸಮೀಪದಲ್ಲೇ ಇರುವುದರಿಂದ ಶಾಲಾ ಮಕ್ಕಳು, ವಾಹನಗಳು ಇಲ್ಲೇ ನಿಲ್ಲುತ್ತವೆ. ರಸ್ತೆ ಕಿರಿದಾಗಿರುವುದರಿಂದ ಬೇರೆ ಜಾಗವೂ ಇಲ್ಲದೆ ಟ್ರಾನ್ಸ್ ಫಾರ್ಮರ್‌ನ ಕೆಳಗಿನಿಂದ ಸಂಚಾರ ಮಾಡುವ ಅನಿವಾರ್ಯತೆ ಪಾದಚಾರಿಗಳದ್ದು. ಅಲ್ಲದೇ ಮಳೆ, ಬಿಸಿಲಿಗೆ ಕೊಡೆ ಹಿಡಿದು ಕೊಂಡು ಹೋಗುವ ವೇಳೆ ಟ್ರಾನ್ಸ್ ಫಾರ್ಮರ್ ತಂತಿಗೆ ಸ್ಪರ್ಶವಾದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಸುರಕ್ಷೆಯ ದೃಷ್ಟಿಯಿಂದ ಇದಕ್ಕೆ ಸೂಕ್ತ ರಕ್ಷಣಾ ಬೇಲಿ ಅಳವಡಿಸಲು ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಜನರಿಂದ ವಿರೋಧ ಬಂದರೆ ಸಮಸ್ಯೆ
ಬಜಪೆ ಪೇಟೆಯ ರಸ್ತೆಯ ಬದಿ ಇರುವ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ರಕ್ಷಣಾ ಬೇಲಿಯನ್ನು ಶೀಘ್ರದಲ್ಲೇ ಹಾಕಲಾಗುವುದು. ಆದರೆ ಪೇಟೆಯ ರಸ್ತೆಯ ಬದಿಯಲ್ಲಿ ಇರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗಿ ವಿರೋಧ ಬರಬಹುದು. ಹೆಚ್ಚಿನ ಟ್ರಾನ್ಸ್‌ಫಾರ್ಮರ್ ಇದ್ದಲ್ಲಿ ರಕ್ಷಣಾ ಬೇಲಿ ಹಾಕುವಾಗ ಖಾಸಗಿ ಜಾಗದವರ ವಿರೋಧ ಬಂದಿದೆ. ಇದರಿಂದ ಸಮಸ್ಯೆಯಾಗುತ್ತದೆ.
- ಅರುಣ್, ಬಜಪೆ ಮೆಸ್ಕಾಂ ಅಧಿಕಾರಿ
ಮೆಸ್ಕಾಂಗೆ ಮನವಿ ಮಾಡಲಾಗುವುದು
ಬಜಪೆ ಪೇಟೆಯ ರಾಜ್ಯ ಹೆದ್ದಾರಿಯ 67 ಹಾಗೂ ಕಾನ್ವೆಂಟ್ ರಸ್ತೆಯ ಬದಿಯಲ್ಲಿರುವ ಟ್ರಾನ್ಸ್‌ಫಾರ್ಮರ್ ಅಪಾಯಕಾರಿಯಾಗಿದ್ದು, ಇದನ್ನು ಸ್ಥಳಾಂತರ ಮಾಡುವ ಅಥವಾ ತಡೆ ಬೇಲಿ ಅಳ ವ ಡಿ ಸುವ ಬಗ್ಗೆ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡು ಮೆಸ್ಕಾಂ ಇಲಾಖೆಗೆ ಮನವಿ ಮಾಡಲಾಗುವುದು.
– ರೋಝಿ ಮಥಾಯಸ್, ಅಧ್ಯಕ್ಷೆ, ಬಜಪೆ ಗ್ರಾಮ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.