ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಮರಗಳು
Team Udayavani, May 24, 2018, 1:40 PM IST
ಕರಂಬಾರು : ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ರಾಜ್ಯ ಹೆದ್ದಾರಿಯಲ್ಲಿ ಹಲವಾರು ಮರಗಳು ಗೆಲ್ಲುಗಳು ಬೀಳುವ ಸ್ಥಿತಿಯಲ್ಲಿದ್ದು, ಕೂಡಲೇ ತೆರವುಗೊಳಿಸದೇ ಇದ್ದರೆ ರಸ್ತೆಯಲ್ಲಿ ವಾಹನ, ಪಾದಚಾರಿಗಳ ಸಂಚಾರಕ್ಕೆ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ.
ಬಜಪೆ- ಕರಂಬಾರು ರಾಜ್ಯ ಹೆದ್ದಾರಿ ತಿರುವಿನಿಂದ ಕೂಡಿದೆ. ಮಾತ್ರವಲ್ಲದೇ ಅತ್ಯಂತ ಕಿರಿದಾಗಿದ್ದು ವಾಹನ ಸಂಚಾರವೇ ಇಲ್ಲಿ ಕಷ್ಟ ಕರ. ಹೆದ್ದಾರಿಯ ಬದಿಯಲ್ಲಿಯೇ ಹಲವು ಮರಗಳಿವೆ. ಹಲವೆಡೆ ಇದರ ಗೆಲ್ಲುಗಳು ಹೆದ್ದಾರಿಯನ್ನು ಅವರಿಸಿವೆ. ಇವು ಭಾರವಾಗಿ ಹೆದ್ದಾರಿಗೆ ಬೀಳುವ ಪರಿಸ್ಥಿತಿಯಲ್ಲಿವೆ.
ಕಳೆದ ನಾಲ್ಕು ದಿನಗಳ ಗಾಳಿ ಮಳೆಗೆ ಮರವೂರು ಮತ್ತು ಕರಂಬಾರಿನಲ್ಲಿ ಮರ ಹಾಗೂ ಗೆಲ್ಲುಗಳು ಬಿದ್ದು ಒಟ್ಟು 5 ವಿದ್ಯುತ್ ಕಂಬಗಳು ತುಂಡಾಗಿ ಹೆದ್ದಾರಿಗೆ ಉರುಳಿ ಬಿದ್ದಿವೆ.
ವಿದ್ಯುತ್ ತಂತಿಗಳು ತುಂಡಾಗಿ ಹೆದ್ದಾರಿಯಲ್ಲಿ ಜೋತು ಬಿದ್ದಿವೆ. ಇಷ್ಟೇ ಅಲ್ಲ ದೇ ಹೆದ್ದಾರಿ ಬದಿಯ ಗುಡ್ಡದಲ್ಲಿರುವ ಮರಗಳು ಹೆಮ್ಮರವಾಗಿದ್ದು, ಮಣ್ಣು ಕೊರೆದು ಹೆದ್ದಾರಿಯ ಕಡೆಗೆ ವಾಲುತ್ತಿದೆ. ಇವುಗಳು ಕೂಡ ಹೆದ್ದಾರಿ ಮೇಲೆ ಬೀಳುವ ಅಪಾಯವಿದೆ.
ಪ್ರಯಾಣಿಕರಿಗೆ ತೊಂದರೆ
ಬಜಪೆ -ಮರವೂರು ಹೆದ್ದಾರಿ 67 ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅತೀ ಮುಖ್ಯ ಹೆದ್ದಾರಿ. ಹೆಚ್ಚಾಗಿ ರಾತ್ರಿ ಪ್ರಯಾಣಿಕರು ಇದನ್ನೇ ಬಳಸುತ್ತಾರೆ. ಮಂಗಳೂರಿನಿಂದ ವಿಮಾನ ನಿಲ್ದಾಣ ಹಾಗೂ ಬಜಪೆಗೆ ಬರುವ ಹಾಗೂ ಹೋಗುವ ವಾಹನ ಸವಾರರು ಇದೇ ಮಾರ್ಗವನ್ನು ಬಳ ಸು ತ್ತಾರೆ. ಮೇ 20ರಂದು ಮುಂಜಾನೆ ಮರವೂರು ಜಂಕ್ಷನ್‌ನಲ್ಲಿ ಹೆದ್ದಾರಿಗೆ ಮರ ಬಿದ್ದ ಪರಿಣಾಮ ವಿಮಾನ ನಿಲ್ದಾಣಕ್ಕೆ ಬರುವ, ಹೋಗುವ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಬೇಕಾಯಿತು.
ಅರಣ್ಯ ಇಲಾಖೆಗೆ ಮನವಿ
ಕರಂಬಾರು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರ ಹಾಗೂ ಗೆಲ್ಲುಗಳನ್ನು ತೆರವುಗೊಳಿಸುವಂತೆ ಈಗಾಗಲೇಮಳವೂರು ಗ್ರಾಮ ಪಂಚಾಯತ್ ನಿಂದ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಬೃಹತ್ ಗಾತ್ರದ ಮರಗಳು ಇಲ್ಲಿದ್ದು, ತೆಗೆಯದೇ ಇದ್ದರೆ ತಗ್ಗು ಪ್ರದೇಶದಲ್ಲಿರುವ ಮನೆ, ವಿದ್ಯುತ್ ಕಂಬಗಳಿಗೂ ಅಪಾಯವಿದೆ ಎಂದು ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಅರ್ಬಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.