ಧರ್ಮಸ್ಥಳ-ಬೆಂಗಳೂರು ಓಡಾಟಕ್ಕೆ 6 ಹೆಚ್ಚುವರಿ ಸ್ಲೀಪರ್‌ ಕೋಚ್‌

ದಸರ ಸಂದರ್ಭ ಓಡಾಟ ನಿರೀಕ್ಷೆ; 1.50 ಕೋ.ರೂ. ವೆಚ್ಚದಲ್ಲಿ ಡಿಪ್ಪೊ ನವೀಕರಣ

Team Udayavani, Sep 7, 2019, 5:23 AM IST

k-2

ಬೆಳ್ತಂಗಡಿ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ ಹೊರರಾಜ್ಯಗಳಿಂದಲೂ ಅಪಾರ ಸಂಖ್ಯೆ ಭಕ್ತರು ಭೇಟಿ ನೀಡುವುದರಿಂದ ಕೆಎಸ್‌ಆರ್‌ಟಿಸಿಗೆ ಅತೀ ಹೆಚ್ಚು ಆದಾಯ ತರುವ ಪ್ರವಾಸಿ ತಾಣವಾಗಿ ಕೈಹಿಡಿದಿದೆ.

ಇದೀಗ ಪ್ರಯಾಣಿಕರ ಅನುಕೂಲಕ್ಕೆಂದು ಧರ್ಮಸ್ಥಳ ಕೆಎಸ್‌ಟರ್‌ಟಿಸಿ ಘಟಕಕ್ಕೆ ಹೆಚ್ಚುವರಿ 6 ಸ್ಲೀಪರ್‌ ಕೋಚ್‌ ಬಸ್‌ಗಳು ಮಂಜೂರಾಗಿದ್ದು, ದಸರಾ ಸಂದರ್ಭ ಓಡಾಟ ನಡೆಸುವ ನಿರೀಕ್ಷೆಯಲ್ಲಿದೆ.

ರಾಜ್ಯ ಕೆಸ್‌ಆರ್‌ಟಿಸಿ ವಿಭಾಗಕ್ಕೆ ಅತ್ಯಾಧುನಿಕ ಸೌಲಭ್ಯವುಳ್ಳ ಒಟ್ಟು 12 ಸ್ಲೀಪರ್‌ ಕೋಚ್‌ ಬಸ್‌ಗಳು ಮಂಜೂರಾಗಿದ್ದು, ಈ ಪೈಕಿ 6 ಸ್ಲೀಪರ್‌ ಕೋಚ್‌ ಬಸ್‌ಗಳು ಧರ್ಮಸ್ಥಳ ಘಟಕಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕರ್ನಾಟಕ ಸಾರಿಗೆ ಪ್ರಯಾಣಿಕರಿಗೆ ಮತ್ತಷ್ಟು ಸೇವೆ ವಿಸ್ತರಿಸಿದೆ.

ಪ್ರತಿನಿತ್ಯ 72 ಬಸ್‌ ಓಡಾಟ
ಸದ್ಯ ಧರ್ಮಸ್ಥಳ ಹಾಸನ ಮಾರ್ಗವಾಗಿ ಪ್ರತಿನಿತ್ಯ ಪ್ರತಿ 15 ನಿಮಿಷಕ್ಕೊಂದರಂತೆ ಬೆಳಿಗ್ಗೆ 4.30ರಿಂದ ರಾತ್ರಿ 11ರವರೆಗೆ 72 ಬಸ್‌ ಓಡಾಟ ನಡೆಸುತ್ತಿದೆ. 4 ನಾನ್‌ ಎಸಿ ಸ್ಲೀಪರ್‌, 5 ರಾಜಹಂಸ, 1 ಐರಾವತ ಕ್ಲಬ್‌ ಕ್ಲಾಸ್‌ ಸೇರಿದಂತೆ 64 ಕರ್ನಾಟಕ ಸುವರ್ಣ ಸಾರಿಗೆ ಟ್ರಿಪ್‌ಗ್ಳು ದಿನನಿತ್ಯ ಪ್ರಯಾಣಿಕರ ಅನುಕೂಲಕ್ಕೆ ಲಭ್ಯವಿದೆ. ವಾರಾಂತ್ಯ ರಜಾ ದಿನ ಹಾಗೂ ಶಿವರಾತ್ರಿ, ಲಕ್ಷ ದೀಪೋತ್ಸವ ಸೇರಿದಂತೆ ವಿಶೇಷ ಹಬ್ಬಗಳಂದು ಹೆಚ್ಚುವರಿ ಬಸ್‌ ನಿಯೋಜಿಸಲಾಗುತ್ತಿದೆ. ಇದರ ಜತೆಗೆ ಹೆಚ್ಚುವರಿ 6 ಸ್ಲೀಪರ್‌ ಬಸ್‌ ಸೇವೆ ಲಭ್ಯವಾಗಿರುವುದರಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್‌ ಶಿವರಾಂ ನಾಯ್ಕ ತಿಳಿಸಿದ್ದಾರೆ.

1.50 ಕೊ.ರೂ.ವೆಚ್ಚದಲ್ಲಿ ಡಿಪ್ಪೊ ನವೀಕರಣ
ಧರ್ಮಸ್ಥಳ, ಮಂಗಳೂರು, ಕುಂದಾಪುರ ಡಿಪ್ಪೊಗಳು 1984, 85ರಲ್ಲಿ ನಿರ್ಮಿಸಿದ್ದರಿಂದ 35ವರ್ಷಕ್ಕೂ ಹಳೆಯದ್ದಾಗಿವೆ. ಧರ್ಮಸ್ಥಳ ಡಿಪ್ಪೊ ಕಾರ್ಯಕ್ಷಮತೆ ಅಧಿಕವಾಗಿರುವುದರಿಂದ ಮೊದಲ ಹಂತದಲ್ಲಿ 1.50 ಕೋ.ರೂ. ವೆಚ್ಚದಲ್ಲಿ ಡಿಪ್ಪೋ ನವೀಕರಣಕ್ಕೆ ಇ-ಟೆಂಡರ್‌ ಕರೆಯಲಾಗಿದೆ. ಈ ಮೂಲಕ ಪೆಟ್ರೋಲ್‌ ಬಂಕ್‌, ವಿದ್ಯುತ್‌ ಸಂಪರ್ಕ, ಬಸ್‌ ಗರಾಜ್‌ ಸ್ಥಳ ವಿಸ್ತರಣೆ ನಡೆಯಲಿದ್ದು, ಆಧುನಿಕ ಟಚ್‌ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.

1.39 ಕೋ.ರೂ.ವೆಚ್ಚದಲ್ಲಿ ನೌಕರರಿಗೆ ವಸತಿಗೃಹ
ಧರ್ಮಸ್ಥಳ ಕರ್ನಾಟಕ ಸಾರಿಗೆ ನೌಕರರಿಗಾಗಿ 12 ಕೊಠಡಿ ಹೊಂದಿರುವ 1.35 ಕೋ.ರೂ.ನ ನೂತನ ವಸತಿ ಗೃಹ ಪ್ರಸಕ್ತ ಡಿಪ್ಪೋ ಮುಂಭಾಗ ನಿರ್ಮಾಣವಾಗುತ್ತಿದೆ. ಜನವರಿಯಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ನೌಕರರ ಬಳಕೆಗೆ ಲಭ್ಯವಾಗಲಿದೆ. ಸಮೀಪದಲ್ಲೆ ಇರುವ 32 ಕೊಠಡಿಯುಳ್ಳ ಹಳೇ ವಸತಿಗೃಹ ನವೀಕರಣಕ್ಕೂ 81 ಲಕ್ಷ ರೂ. ಮಂಜೂರಾಗಿದ್ದು, ನೀರಿನ ಸಂಪರ್ಕ, ರಸ್ತೆ, ಡ್ರೈನೇಜ್‌, ವಿದ್ಯುತ್‌ ಸಲಕರಣೆ ಜೋಡೆಣೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಿದೆ.

ರಾಜ್ಯ ಹಾಗೂ ಹೊರರಾಜ್ಯದ ಯಾತ್ರಾರ್ಥಿಗಳು ಹಾಗೂ ಪ್ರಯಾಣಿಕರ ಬೇಡಿಕೆಗಣುಗುಣವಾಗಿ ಧರ್ಮಸ್ಥಳ ಘಟಕಕ್ಕೆ 6ಹೊಸ ಸ್ಲಿàಪರ್‌ ಕೋಚ್‌ ಬಸ್‌ಗಳು ಮಂಜೂರಾಗಿವೆ. ದಸರ ಮುನ್ನವೇ ಬಸ್‌ ಓಡಾಟ ನಡೆಸುವ ನಿರೀಕ್ಷೆಯಿದೆ.
ನಾಗೇಂದ್ರ, ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ

ಧರ್ಮಸ್ಥಳ ಘಟಕದಿಂದ ಅತೀ ಹೆಚ್ಚು ಬಸ್‌ ಓಡಾಟ ನಡೆಸುತ್ತಿರುವುದರಿಂದ ಸುಧಾರಿತ ತಂತ್ರಜ್ಞಾನವುಳ್ಳ ಡಿಪ್ಪೊಗಳು ಅವಶ್ಯವಾಗಿವೆ. ನೂತನ ವಸತಿ ಗೃಹ ನಿರ್ಮಾಣ ಹಂತದಲ್ಲಿದ್ದು, ಡಿಪ್ಪೊ ಹಾಗೂ ಹಳೇ ವಸತಿಗೃಹ ನವೀಕರಣ ಟೆಂಡರ್‌ ಕರೆಯಲಾಗಿದ್ದು, ಒಪ್ಪಂದ ಪತ್ರ ಲಭಿಸಿದಲ್ಲಿ ಕಾಮಗಾರಿ ಆರಂಭಿಸಲಾಗುವುದು.
ಶರತ್‌ ಕುಮಾರ್‌ ಎನ್‌., ವಿಭಾಗ ಇಂಜಿನಿಯರ್‌

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.