ಇಂದಿನಿಂದ ದಕ್ಷಿಣ ಕನ್ನಡದಲ್ಲಿ ದಸರಾ ಕ್ರೀಡಾಕೂಟ
ಖಾಲಿ ಹುದ್ದೆಗಳ ಇಲಾಖೆಯಿಂದ ಆಯೋಜನೆ!
Team Udayavani, Sep 14, 2019, 5:35 AM IST
ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ಕ್ರೀಡಾಕೂಟ ಸೆ.14ರಿಂದ ಆರಂಭವಾಗುತ್ತಿದೆ. ಆದರೆ ಕೂಟ ಆಯೋಜಿಸುವ ಯುವ ಸಬಲೀಕರಣ-ಕ್ರೀಡಾ ಇಲಾಖೆಯ ಜಿಲ್ಲಾ ವಿಭಾಗದಲ್ಲಿ ಉಪನಿರ್ದೇಶಕರದ್ದೂ ಸೇರಿಸಿ ಹುದ್ದೆಗಳೆಲ್ಲ ಖಾಲಿ!
ಇಲಾಖೆ ತಾ. ಮಟ್ಟದಲ್ಲಿ ದಸರಾ ಕ್ರೀಡಾಕೂಟಗಳನ್ನು ನಡೆಸುತ್ತದೆ. ತಾ. ಮಟ್ಟದಲ್ಲಿ ಅಧಿಕಾರಿಗಳು ಇಲ್ಲದಿದ್ದರೂ ಶಿಕ್ಷಣ ಇಲಾಖೆಯಿಂದ ನೇಮಕಗೊಂಡಿ ರುವ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಒಬ್ಬರೇಓಡಾಡಿ ಸಂಯೋಜಿಸಬೇಕಿದೆ. ಜತೆಗೆ ಅವರಿಗೆ ತಮ್ಮ ಶಾಲೆಯ ಜವಾಬ್ದಾರಿಯೂ ಇರುತ್ತದೆ.
ಮಂಗಳೂರು, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಸೆ. 14ರಂದು ತಾ. ಮಟ್ಟದ ಕ್ರೀಡಾಕೂಟ ನಡೆಯಲಿದೆ. ಪುತ್ತೂರು ಮತ್ತು ಸುಳ್ಯದಲ್ಲಿ ಸೆ. 15ರಂದು ನಡೆಯುತ್ತದೆ. ಆದರೆ ಕ್ರೀಡಾಂಗಣ ಹೊಂದಿಸುವ ದೃಷ್ಟಿಯಿಂದ ಸುಳ್ಯದಲ್ಲಿ ಫುಟ್ಬಾಲ್ ಸ್ಪರ್ಧೆ ಮಾತ್ರ ಸೆ. 14ರಂದೇ ನಡೆಯಲಿದೆ.
ದಸರಾ ಕ್ರೀಡಾಕೂಟಗಳಿದ್ದಾಗ ಮಾಹಿತಿ ಹೆಚ್ಚು ಜನರಿಗೆ ತಲುಪಬೇಕು. ಸಿಬಂದಿಯಿದ್ದಾಗ ಮಾತ್ರ ಇದೆಲ್ಲ ಸಾಧ್ಯ. ಸರಕಾರ ಕೂಡ ಕೊನೆ ಗಳಿಗೆಯಲ್ಲಿ ಆದೇಶ ಹೊರಡಿಸುವುದರಿಂದ ಕ್ರೀಡಾಕೂಟ ಸುಸೂತ್ರ ನಿರ್ವಹಣೆಗೆ ಕಷ್ಟವಾಗುತ್ತಿದೆ.
ಹುದ್ದೆಗಳೆಲ್ಲ ಖಾಲಿ
ದಸರಾ ಕ್ರೀಡಾಕೂಟ ಸಹಿತ ಯುವಕ/ಯುವತಿ ಮಂಡಲಗಳಿಗೆ ವಿವಿಧ ಯೋಜನೆಗಳನ್ನು ತಲುಪಿಸಬೇಕಾದ ಜವಾಬ್ದಾರಿ ನಿರ್ವಹಿಸುತ್ತಿರುವ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಂಜೂರಾಗಿರುವ ಉಪನಿರ್ದೇಶಕರು, ದ್ವಿತೀಯ ದರ್ಜೆ ಸಹಾಯಕ, ಅಧೀಕ್ಷಕರು ಮತ್ತು ಅಟೆಂಡರ್ (ಗ್ರೂಪ್ ಡಿ) – ಎಲ್ಲವೂ ಖಾಲಿ ಇವೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿರುವ ಪ್ರದೀಪ್ ಡಿ’ಸೋಜಾ ಪ್ರಸ್ತುತ ಉಪನಿರ್ದೇ ಶಕ ಹುದ್ದೆಯನ್ನು ಹೆಚ್ಚುವರಿ ಯಾಗಿ ನಿರ್ವ ಹಿಸುತ್ತಿದ್ದಾರೆ. ಉಳಿದಂತೆ ಮಂಗಳಾ ಸ್ಟೇಡಿಯಂ ಕಮಿಟಿಯ ಬಾಡಿಗೆಯ ಮೂಲಕ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಿ ಕೆಲಸ ನಿರ್ವಹಿಸಲಾಗುತ್ತಿದೆ.
ದೈಹಿಕ ಶಿಕ್ಷಣ ಶಿಕ್ಷಕರಿಗೆ ಜವಾಬ್ದಾರಿ
ತಾಲೂಕುಗಳಲ್ಲಿ ಇಲಾಖೆಯ ಜವಾಬ್ದಾರಿ ನಿರ್ವ ಹಿಸಲು ಪ್ರತಿ ತಾಲೂಕಿನಿಂದ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗಿದ್ದು, ಅವರು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಹುದ್ದೆಯನ್ನು ನಿರ್ವಹಿಸಬೇಕಿದೆ. 1994ಕ್ಕೆ ಮೊದಲು ಈ ಹುದ್ದೆಗಳಿಗೆ ಪ್ರತ್ಯೇಕ ಸಿಬಂದಿ ಇದ್ದರು, ಬಳಿಕ ಸರಕಾರ ಆ ಹುದ್ದೆಯನ್ನು ತೆಗೆದು ಹಾಕಿತ್ತು.
ಮಂಗಳೂರು ತಾಲೂಕಿನಲ್ಲಿ ಲಿಲ್ಲಿ ಪಾಸ್, ಪುತ್ತೂರಿನಲ್ಲಿ ಮಾಮಚ್ಚನ್, ಸುಳ್ಯದಲ್ಲಿ ದೇವರಾಜ್ ಮುತ್ಲಾಜೆ, ಬಂಟ್ವಾಳದಲ್ಲಿ ನವೀನ್ ಪಿ.ಎಸ್. ಮತ್ತು ಬೆಳ್ತಂಗಡಿಯಲ್ಲಿ ಪ್ರಭಾಕರ ನಾರಾವಿ ಅವರು ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.
ತೊಂದರೆಯಾಗದಂತೆ ನಿರ್ವಹಣೆ
ಸೆ. 14ರಂದು ಜಿಲ್ಲೆಯಲ್ಲಿ ದಸರಾ ಕ್ರೀಡಾಕೂಟ ಆರಂಭವಾಗಲಿದ್ದು, ಹುದ್ದೆಗಳು ಖಾಲಿಯಿದ್ದರೂ ನಿರ್ವಹಿಸಲಾಗುತ್ತಿದೆ. ತಾಲೂಕು ಮಟ್ಟದ ಅಧಿಕಾರಿ ಹುದ್ದೆಗಳನ್ನು ನಿಯೋಜಿತ ದೈಹಿಕ ಶಿಕ್ಷಣ ಶಿಕ್ಷಕರು ನಿರ್ವಹಿಸುತ್ತಿದ್ದಾರೆ.
– ಪ್ರದೀಪ್ ಡಿ’ಸೋಜಾ
ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.