“ಭೂತಕೋಲ’ : ನಟ ಚೇತನ್ ಹೇಳಿಕೆಗೆ ದಯಾನಂದ ಕತ್ತಲಸಾರ್ ತೀವ್ರ ಆಕ್ಷೇಪ
Team Udayavani, Oct 20, 2022, 8:45 AM IST
ಮಂಗಳೂರು : “ಕಾಂತಾರ’ ಸಿನೆಮಾದ ಬಗ್ಗೆ ಮಾತನಾಡುತ್ತ ನಟ ಚೇತನ್ ಕುಮಾರ್ ಅವರು, “ಭೂತಕೋಲ ಹಿಂದೂ ಧರ್ಮಕ್ಕೆ ಸೇರಿದ್ದಲ್ಲ’ ಎಂಬುದಾಗಿ ನೀಡಿರುವ ಹೇಳಿಕೆಗೆ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲಸಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಟನ ಹೇಳಿಕೆಯನ್ನು ವಿರೋಧಿಸುತ್ತೇನೆ. ನಮಗೆ ಇಂಥವರ ಪ್ರಮಾಣಪತ್ರ ಬೇಕಾಗಿಲ್ಲ. ಬ್ರಾಹ್ಮಣರಿಂದ ಹಿಡಿದು ಕೊರಗರ ವರೆಗೆ 16 ವರ್ಗಗಳು ದೈವರಾಧನೆ ಮಾಡುತ್ತಿವೆ. ಅವರೆಲ್ಲರೂ ಹಿಂದೂಗಳೇ. ಅವರು ಹಿಂದೂಗಳಲ್ಲ ಎಂದು ಹೇಳುವುದು ಅಕ್ಷಮ್ಯ. ಸಂಧಿ ಪಾಡ್ದನಗಳಲ್ಲಿಯೂ ಶಿವ, ಪಾರ್ವತಿ, ಸಿರಿ, ವಿಷ್ಣುವಿನ ಉಲ್ಲೇಖವಿದೆ. ನಾನು ಕಳೆದ 37 ವರ್ಷಗಳಿಂದ ಸಂಶೋಧನಾತ್ಮಕವಾಗಿ ಅಧ್ಯಯನ ಶೀಲನಾಗಿ ದೈವರಾಧನೆ ಮಾಡಿಕೊಂಡು ಬಂದಿದ್ದೇನೆ. ಬ್ರಾಹ್ಮಣರು, ಜೈನರು, ನಾಥ ಪಂಥದವರು ಕೂಡ ದೈವಾರಾಧನೆ ಮಾಡುತ್ತಾರೆ. ಬ್ರಾಹ್ಮಣರ ಮನೆಗಳಲ್ಲೂ ದೈವಗಳಿವೆ. ಕೆಲವು ದೈವಗಳ ಮೂಲವೇ ಬ್ರಾಹ್ಮಣರ ಮನೆ. ಇದಕ್ಕೆ ಸಂಬಂಧಿಸಿ ಸಾಕಷ್ಟು ದಾಖಲೆಗಳಿವೆ. ಹಿಂದೂ ಧರ್ಮ ಒಡೆಯುವ ಪ್ರಯತ್ನ ಒಳ್ಳೆಯದಲ್ಲ ಎಂದು ದಯಾನಂದ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.