ಗಾಯಾಳು ಒಂಟಿ ಸಲಗ ಸಾವು
ಬಾಳುಗೋಡು: ಕಾಡಾನೆ ಸಾವಿಗೆ ಕಣ್ಣೀರಿಟ್ಟ ಗ್ರಾಮಸ್ಥರು!
Team Udayavani, May 30, 2019, 9:34 AM IST
ಸುಬ್ರಹ್ಮಣ್ಯ,: ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಮೀಸಲು ಅರಣ್ಯದಲ್ಲಿ ಇತ್ತೀಚೆಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಸುಮಾರು 16 ವರ್ಷದ ಒಂಟಿ ಸಲಗ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದೆ. ಸಮೀಪದ ಅರಣ್ಯದ ಏಲಕ್ಕಿತೋಟ ಎಂಬಲ್ಲಿ ಆನೆಯ ಶವ ಕಂಡುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆಭೇಟಿ ನೀಡಿ ತಪಾಸಣೆ ನಡೆಸಿದರು.
ಪಶ್ಚಿಮ ಘಟ್ಟ ಸಾಲಿನಲ್ಲಿ ಬರುವ ಸುಬ್ರಹ್ಮಣ್ಯ ಅರಣ್ಯ ಇಲಾಖೆ ವಿಭಾಗದ ಬಾಳುಗೋಡು ಮೀಸಲು ಅರಣ್ಯದಲ್ಲಿ ಎ. 7ರಂದು ಕಾಡಾನೆಯೊಂದು ಗಾಯಗೊಂಡು ನರಳಾಡುತ್ತಿರುವ ಸ್ಥಿತಿಯಲ್ಲಿ ಇದ್ದುದನ್ನು ಸ್ಥಳೀಯರು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಎರಡು ದಿನದ ಬಳಿಕ ರಾಷ್ಟ್ರೀಯ ಅಭಯಾರಣ್ಯ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಹಾಗೂ ಸ್ಥಳಿಯ ಪಶುವೈದ್ಯಾಧಿಕಾರಿಗಳ ಮೂಲಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಗಾಯ ಗುಣವಾಗುತ್ತದೆ ಎಂದು ಇಲಾಖೆ ಹೇಳಿತ್ತು.
ಜನರ ಕಾಳಜಿ; ಇಲಾಖೆ ನಿರ್ಲಲಕ್ಷ್ಯ
ಇಲಾಖೆ ಚಿಕಿತ್ಸೆ ನೀಡಿ ಕೈತೊಳೆದುಕೊಂಡಿದ್ದರೂ ಆನೆ ಯೊಂದಿಗಿನ ಜನರ ಭಾವನಾತ್ಮಕ ನಂಟು ಮುಂದುವರಿದಿತ್ತು. ಚಿಕಿತ್ಸೆಯ ಬಳಿಕವೂ ಗಾಯ ವಾಸಿಯಾಗದೆ ಇರುವುದನ್ನು ಗಮನಿಸಿ ಇಲಾಖೆಯ ಕಮನಕ್ಕೆ ತಂದಿದ್ದರು. ಇದೇ ಸಂದರ್ಭದಲ್ಲಿ ಬೇರೊಂದು ಆನೆಯ ತಿವಿತಕ್ಕೆ ಒಳಗಾಗಿ ಈ ಆನೆ ಮತ್ತೆ ಜರ್ಝರಿತವಾಗಿತ್ತು. ನಿತ್ರಾಣಗೊಂಡಿದ್ದ ಆನೆ ಕಾಡಿಗೆ ಹೋಗಿಲ್ಲ. ಆದರೆ ಸ್ಥಳೀಯರು ಆಹಾರ ನೀಡುತ್ತಿದ್ದರಿಂದ ಅದು ಕಾಡಿಗೆ ಹೋಗಿಲ್ಲ. ಅದನ್ನು ಬಿಟ್ಟು ಬಿಡುವಂತೆ ಅಧಿಕಾರಿಗಳು ಹೇಳಿದ್ದರು. ಅಂದಿನಿಂದ ಜನರು ಆನೆಗೆ ಆಹಾರ ಒದಗಿಸುವುದನ್ನು ಸ್ಥಗಿತಗೊಳಿಸಿದ್ದರು. ಬಳಿಕ ಆನೆ ಬುಧವಾರ ಸಮೀಪದ ಕಾಡಿನ ಏಲಕ್ಕಿ ತೋಟ ಎಂಬ ಸ್ಥಳದಲ್ಲಿ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.
ಶವ ಮಹಜರಿನ ಶಂಕೆ!
ರಾತ್ರಿಯಾದ್ದರಿಂದ ಶವ ಮಹಜರು ಗುರುವಾರ ನಡೆಸುವುದಾಗಿ ಹೇಳಲಾಗಿತ್ತು. ಆದರೆ ಇಲಾಖೆ ಅಧಿಕಾರಿಗಳು ವೈದ್ಯರನ್ನು ರಾತ್ರಿ ಕಾಡಿಗೆ ಕರೆದೊಯ್ದು ಮಹಜರಿಗೆ ಮುಂದಾಗಿದ್ದು ಇದಕ್ಕೆ ಸ್ಥಳೀಯರು ಆಕ್ಷೇಪಿಸಿದ್ದಾರೆ. ಅಧಿಕಾರಿಗಳ ತರಾತುರಿಯ ಈ ಮಹಜರಿನ ನಿರ್ಧಾರದ ಬಗ್ಗೆ ಸ್ಥಳೀಯರಿಗೆ ನಾನಾ ಸಂಶಯಗಳು ಕಾಡಿವೆ.
ಫಲಿಸದ ಹರಕೆ; ಸ್ಥಳೀಯರ ಕಣ್ಣೀರು
ಗಾಯಾಳು ಆನೆಯ ಮೇಲೆ ಸ್ಥಳೀಯರಿಗೆ ಭಾರೀ ಪ್ರೀತಿ, ಕಾಳಜಿ ಮೂಡಿತ್ತು. ಅದರ ಆರೋಗ್ಯ ಸುಧಾರಿಸಲಿ ಎಂದು ಚಾಮುಂಡಿ ದೇವಿಗೆ, ಅಯ್ಯಪ್ಪನಿಗೆ ಹರಕೆ ಹೊತ್ತಿದ್ದರು. ಪ್ರತಿನಿತ್ಯ ಯುವಕರ ತಂಡ ಆನೆಯನ್ನು ಹತ್ತಾರು ಕಿ.ಮೀ. ಹಿಂಬಾಲಿಸಿ ಚಲನವಲನ ಗಮನಿಸುತ್ತಿತ್ತು. ಮಂಗಳವಾರವೂ ಆನೆ ಕಾಡಿನಲ್ಲಿ ಜೀವಂತ ಇರುವುದನ್ನು ಕಂಡು ಬಂದಿದ್ದ ಅವರಿಗೆ ಮರುದಿನ ಆನೆ ಸತ್ತಿರುವುದನ್ನು ನಂಬಲು ಅಸಾಧ್ಯವಾಗಿತ್ತು. ಸಾಕು ಪ್ರಾಣಿಯಂತೆ ಪ್ರೀತಿ ತೋರಿದ್ದ ಮಂದಿ ಅದರ ಸಾವಿನ ನೋವು ಸಹಿಸಲಾರದೆ ಕಣ್ಣೀರಿಟ್ಟರು. ಆನೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲು ಇಲಾಖೆ ಉದಾಸೀನ ತೋರಿದ್ದರಿಂದ ಅಮಾಯಕ ಆನೆ ಸಾವನ್ನಪ್ಪಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.