ಶೇ. 70 ಫಲಾನುಭವಿಗಳಿಗೆ ಮತ್ತೆ ಸಂಕಷ್ಟ?

ಸಾಲ ಮನ್ನಾ ಅಪ್‌ಡೇಟ್‌ ಸಾಫ್ಟ್ವೇರ್‌ ಮೂರೇ ದಿನಗಳಲ್ಲಿ ಸ್ಥಗಿತ

Team Udayavani, Oct 29, 2019, 5:19 AM IST

e-30

ಸುಳ್ಯ: ಸಾಲಮನ್ನಾಕ್ಕೆ ಸಂಬಂಧಿಸಿ ಕಿಸಾನ್‌ ಕ್ರೆಡಿಟ್‌ಕಾರ್ಡ್‌ ಉಳಿತಾಯ ಖಾತೆ ಸಮರ್ಪಕವಾಗಿಲ್ಲದೆ ಹಣ ವಾಪಸಾಗಿರುವ ಫಲಾನುಭವಿಗಳ ಖಾತೆಗೆ ಅಗತ್ಯ ಮಾಹಿತಿ ಸೇರ್ಪಡೆಗೊಳಿಸಲು ತೆರೆಯಲಾಗಿದ್ದ ಸುಧಾರಿತ ಆನ್‌ಲೈನ್‌ ಸಾಫ್ಟ್ವೇರ್‌ ಆ್ಯಪ್ಶನ್‌ ಮೂರೇ ದಿನದಲ್ಲಿ ಸ್ಥಗಿತಗೊಂಡ ಕಾರಣ ಶೇ. 70ರಷ್ಟು ಫಲಾನುಭವಿಗಳು ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸಾಲಮನ್ನಾ ಹಣ ಬಿಡುಗಡೆಗೊಂಡರೂ ಉಳಿತಾಯ ಖಾತೆಗೆ ಬಾರದೆ ಉಭಯ ಜಿಲ್ಲೆಯ 22,687 ಫಲಾನುಭವಿಗಳಿಗೆ ತೊಂದರೆಯಾಗಿತ್ತು. ಮೊದಲ ಹಂತದಲ್ಲಿ ಬ್ಯಾಂಕ್‌ ಖಾತೆ ಸರಿಪಡಿಸುವ ನಿಟ್ಟಿನಲ್ಲಿ ಸುಧಾರಿತ ಸಾಫ್ಟ್ವೇರ್‌ ತೆರೆದು ಸಮರ್ಪಕ ಮಾಹಿತಿ ದಾಖಲಾತಿಗೆ ಸರಕಾರ ಅವಕಾಶ ನೀಡಿತ್ತು.

ಶೇ. 30 ಮಾತ್ರ ಪೂರ್ಣ
ಫಲಾನುಭವಿಗಳಿಗೆ ಸಂಬಂಧಿಸಿ 18 ಪಟ್ಟಿ ರಚಿಸಲಾಗಿತ್ತು. ಆ ಪೈಕಿ 14 ಪಟ್ಟಿಗಳ ಫಲಾನುಭವಿಗಳದ್ದು ಮಾತ್ರ ಅಪ್‌ಡೇಟ್‌ ಅವಕಾಶ ದೊರೆಯಿತು. ಉಳಿದ 4 ಪಟ್ಟಿಗಳ ಫಲಾನುಭವಿಗಳ ಉಳಿತಾಯ ಖಾತೆ ಅಪ್‌ಡೇಟ್‌ ಮಾಡಲು ಅವಕಾಶ ಸಿಕ್ಕಿಲ್ಲ. 14 ಪಟ್ಟಿಯಲ್ಲಿ ಕೇವಲ ಶೇ. 30ರಷ್ಟು ಮಾತ್ರ ಫಲಾನುಭವಿಗಳಿದ್ದು, ಉಳಿದ ಶೇ.70ರಷ್ಟು ಫಲಾನುಭವಿಗಳ ಕೊನೆಯ ನಾಲ್ಕು ಪಟ್ಟಿಯೊಳಗಿದ್ದಾರೆ. ಹೀಗಾಗಿ ಅಪ್‌ಡೇಟ್‌ನಲ್ಲಿ ಅವಕಾಶ ವಂಚಿತರ ಪಟ್ಟಿಯೇ ಗರಿಷ್ಠ ಮಟ್ಟದಲ್ಲಿದ್ದು, ಆ್ಯಪ್ಶನ್‌ ತೆರೆದರೂ ಪ್ರಯೋಜನ ಇಲ್ಲವಾಗಿದೆ.

ಮೂರು ದಿನವಷ್ಟೇ ಕಾಲಾವಕಾಶ
ಆಯಾ ಸಹಕಾರ ಬ್ಯಾಂಕ್‌ ವ್ಯಾಪ್ತಿಯ ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಅ. 23ರಿಂದ ಅ. 25ರ ತನಕ ಅಪ್‌ಡೇಟ್‌ಗೆ ಅವಕಾಶ ನೀಡಲಾಗಿತ್ತು. ಬ್ಯಾಂಕಿನಿಂದ ನಿಗದಿಪಡಿಸಿದ ನಿಯೋಜಿತ ಅಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಸಂಘದ ಸಿಬಂದಿಗಳು ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ರೈತರ ಕೆಸಿಸಿ ಉಳಿತಾಯ ಖಾತೆಯ ವಿವರವನ್ನು ಅಪ್‌ಲೋಡ್‌ ಮಾಡಿ ದೃಢೀಕರಿಸುವಂತೆ ತಿಳಿಸಲಾಗಿತ್ತು.

ಲಾಕ್‌ ಆದರೆ ಕ್ರಮ
ಸುತ್ತೋಲೆಯಲ್ಲಿ ಮೂರು ದಿನದೊಳಗೆ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ ಆ್ಯಪ್ಶನ್‌ನಲ್ಲಿ ಕೊನೆಯ ನಾಲ್ಕು ಪಟ್ಟಿ ನೀಡದ ಕಾರಣ ಪೂರ್ಣ ಅಪ್‌ಲೋಡ್‌ ಸಾಧ್ಯವಾಗಿಲ್ಲ ಅನ್ನುವುದು ಸಹಕಾರ ಸಂಘಗಳ ಅಧಿಕಾರಿಗಳ ಅಳಲು. ಆದರೆ ಸುತ್ತೋಲೆಯಲ್ಲಿ ಮೂರು ದಿನಗಳಲ್ಲಿ ಪೂರ್ಣಗೊಳ್ಳದೆ ಸಾಫ್ಟ್ವೇರ್‌ ಲಾಕ್‌ ಆದಲ್ಲಿ ಆಯಾ ಸಹಕಾರ ಸಂಘಗಳ ಮತ್ತು ಸಂಬಂಧಿಸಿದ ತಾಲೂಕು ಸಹಕಾರ ಇಲಾಖಾಧಿಕಾರಿಗಳ ಮತ್ತು ಎಸ್‌ಡಿಸಿಸಿ ಬ್ಯಾಂಕ್‌ ಮೇಲ್ವಿಚಾರಕರು ಜವಾಬ್ದಾರರಾಗಿದ್ದು, ಸರಕಾರದ ಕಾನೂನು ಕ್ರಮಕ್ಕೆ ಈಡಾಗಬೇಕು ಎಂಬ ಎಚ್ಚರಿಕೆ ನೀಡಲಾಗಿದೆ. ಜತೆಗೆ ಮೂರು ದಿನದಲ್ಲಿ ರಜೆ ಇದ್ದರೆ ಅದನ್ನು ರದ್ದುಗೊಳಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು.

161.75 ಕೋ.ರೂ. ಹಣ ವಾಪಸ್‌!
ಉಳಿತಾಯ ಖಾತೆ ಅಪೂರ್ಣ ಕಾರಣದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 22,687 ಫಲಾನುಭವಿಗಳ 161.75 ಕೋ.ರೂ. ಫಲಾನುಭವಿಗಳ ಖಾತೆಗೆ ಬಾರದೆ ಡಿಸಿಸಿ ಬ್ಯಾಂಕ್‌ನಿಂದ ಪುನಃ ಅಪೆಕ್ಸ್‌ ಬ್ಯಾಂಕ್‌ಗೆ ವಾಪಸಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17,744 ಮಂದಿಯ 128.22 ಕೋ.ರೂ., ಉಡುಪಿ ಜಿಲ್ಲೆಯ 4934 ಮಂದಿಯ 33.53 ಕೋ.ರೂ. ಹಣ ವಾಪಾಸಾತಿ ಆಗಿದೆ. ಹೀಗಾಗಿ ಹಣ ಬಿಡುಗಡೆಗೊಂಡರೂ ಹಣ ಖಾತೆಗೆ ಜಮೆ ಆಗದಿರುವ ಬಗ್ಗೆ ಫಲಾನುಭವಿಗಳಿಗೆ ಗೊಂದಲ ಉಂಟಾಗಿತ್ತು.

ಸಾಫ್ಟ್ವೇರ್‌ ಅಪ್‌ಡೇಟ್‌ ಆಪ್ಶನ್‌ ಮೂರು ದಿನದಲ್ಲಿ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸೋಮವಾರ ತಾಲೂಕು ಕಚೇರಿಯಲ್ಲಿ ಸಭೆ ನಡೆದಿದೆ. ಬೆಳೆಗಾರರ ಬೇಡಿಕೆಯಂತೆ ಕೆಲ ನಿರ್ಣಯಗಳನ್ನು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗುವುದು.
– ಕುಂಞಿ ಅಹ್ಮದ್‌, ಸುಳ್ಯ ತಹಶೀಲ್ದಾರ್‌

ಟಾಪ್ ನ್ಯೂಸ್

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.