ನ್ಯಾಯಾಂಗ ಹೋರಾಟಕ್ಕೆ ನಿರ್ಧಾರ
Team Udayavani, Oct 2, 2017, 4:08 PM IST
ಪುತ್ತೂರು: ಅಕ್ರಮ -ಸಕ್ರಮ, ಕುಮ್ಕಿ ಇನ್ನಿತರ ಜಮೀನಿನ ಕುರಿತ ನಿಖರ ದಾಖಲೆಗಳಿಲ್ಲದೆ ಸರಕಾರದ ಅಧಿಕಾರಿಗಳು ರೈತರ ಮೇಲೆ ಸವಾರಿ ಮಾಡುತ್ತಿದ್ದಾರೆ. ರೈತ ಎಂದರೆ ಅಪರಾಧಿ ಎಂಬ ಭಾವನೆಯಲ್ಲಿ ನೋಡಲಾಗುತ್ತಿದೆ ಎಂದು ಕುಮ್ಕಿ ಹೋರಾಟ ಸಮಿತಿ ಸಂಚಾಲಕ ಎಂ.ಜಿ. ಸತ್ಯನಾರಾಯಣ ಆರೋಪಿಸಿದರು.
ಕುಮ್ಕಿ ಹಾಗೂ ಇನ್ನಿತರ ಜಾಗಗಳಲ್ಲಿ ವಾಸ್ತವ್ಯ ಹೊಂದಿರುವ ರೈತರಿಗೆ ಕಂದಾಯ ಇಲಾಖೆಯಿಂದ ನೋಟಿಸ್ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಕಿಸಾನ್ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ರೈತರ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ಸರಕಾರದ ಬಳಿ ನಿಖರ ದಾಖಲೆಗಳಿಲ್ಲದೆ ಯಾರು ಸರಿ, ಯಾರು ತಪ್ಪಿತಸ್ಥರು ಎಂದು ತಾವೇ ನಿರ್ಧಾರ ಮಾಡಿ ರೈತರ ಮೇಲೆ ಸವಾರಿ ಮಾಡಲಾಗುತ್ತಿದೆ. ಸರಕಾರ ನಮ್ಮ ದಾಖಲೆಗಳನ್ನು ನಮಗೆ ಅಪೂರ್ಣವಾಗಿ ನೀಡಿ ಅದನ್ನು ನೀವೇ ಸಂಪೂರ್ಣ ಮಾಡಿಕೊಳ್ಳಿ ಎಂದು ಸಮಜಾಯಿಷಿ ನೀಡುತ್ತದೆ. ಕರ್ನಾಟಕ ಸರಕಾರದ ಬಳಿ ಇರುವ ಯಾವುದೇ ಭೂ ದಾಖಲೆಗಳು ತಾಳೆಯಾಗುವುದಿಲ್ಲ ಎಂದುಅಭಿಪ್ರಾಯಿಸಿದರು.
ಸರಕಾರದಿಂದ ವಂಚನೆ
2013ರ ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಕುಮ್ಕಿ ಹಕ್ಕು ನೀಡುವುದಾಗಿ ಕಾಂಗ್ರೆಸ್ ತಿಳಿಸಿತ್ತು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅದೇ ವರ್ಷ ಆ. 13ರಂದು ಕುಮ್ಕಿ ಹಕ್ಕನ್ನು ರೈತರಿಗೆ ಮಂಜೂರು ಮಾಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿಯವರ ಅಧೀನ ಕಾರ್ಯದರ್ಶಿ ಲಿಖೀತವಾಗಿ ನೀಡಿ ದ್ದರು. ಇಷ್ಟಾದರೂ ಇನ್ನೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದರು. 120 ವರ್ಷಗಳಿಂದ ರೈತರು ತಮ್ಮ ಪರಂಪರೆಯಲ್ಲಿ ಅನುಭವಿಸಿ ಕೊಂಡು ಬಂದಿರುವ ಕುಮ್ಕಿ ಜಮೀನನ್ನು ಸರಕಾರಿ ಭೂಮಿ ಎಂದು ನಿಗದಿ ಪಡಿಸಿ ಏಳು ದಿನಗಳ ಒಳಗೆ ಬಿಟ್ಟು ಕೊಡಬೇಕು ಎಂದು ಹೇಳುವುದು ಅನ್ಯಾಯ. ಅದರಲ್ಲೂ ಕೇವಲ ಗ್ರಾಮ ಕರಣಿಕರು ತಯಾರು ಮಾಡಿದ ಪಟ್ಟಿಯನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿದ್ದಾರೆ ಎಂದು ಆಪಾದಿಸಿದರು.
ಕುಮ್ಕಿ ಹಾಗೂ ಸಂಬಂಧಿತ ಜಾಗಗಳಲ್ಲಿ ವಾಸವಿದ್ದು, ನೊಂದ ಫಲಾನುಭವಿ ರೈತರು ಎಲ್ಲರೂ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡುವುದು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಬಿ.ಎಸ್., ಸಂಚಾಲಕ ರಾಮಚಂದ್ರ ನೆಕ್ಕಿ ಉಪಸ್ಥಿತರಿದ್ದರು.
ಹೈಕೋರ್ಟಲಿ ಹೋರಾಟ
ರೈತರ ಪರವಾಗಿ ನಾವು ಉಚ್ಚ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ. 2017ರ ಮೇ 25ರಂದು ಉಚ್ಚ ನ್ಯಾಯಾಲಯವು ಯಥಾಸ್ಥಿತಿ ಆದೇಶ ನೀಡಿದೆ. ಕುಮ್ಕಿ ಹಕ್ಕು ನೀಡುವ ಕುರಿತು ಸರಕಾರ ತನ್ನ ನಿಲುವು ತಿಳಿಸಲು ಸೂಚಿಸಿದೆ. ಸರಕಾರಿ ವಕೀಲರು ಇನ್ನೂ ಅಫಿಡವಿಟ್ ಸಲ್ಲಿಸದೇ ಇರುವ ಕಾರಣ ವಿಚಾರಣೆ ಮುಂದಕ್ಕೆ ಹೋಗುತ್ತಿದೆ. ಈ ನಡುವೆ, ಯಥಾಸ್ಥಿತಿ ಆದೇಶ ಇರುವಂತೆಯೇ ಕಂದಾಯ ಇಲಾಖೆಯಿಂದ ನೋಟಿಸ್ ಬಂದಿರುವುದು ನ್ಯಾಯಾಂಗ ನಿಂದನೆಯಾಗಿದೆ. ಕೋರ್ಟ್ ನೀಡಿರುವ ಯಥಾಸ್ಥಿತಿ ಆದೇಶವು ಕಂದಾಯ ಇಲಾಖೆಗೂ ಅನ್ವಯವಾಗುತ್ತದೆ. ಕೋರ್ಟ್ ಆದೇಶವನ್ನು ಎಲ್ಲ ಪಕ್ಷಗಾರರಿಗೂ ನಾವು ತಲುಪಿಸಿದ್ದೇವೆ. ಇದು ಗೊತ್ತಿದ್ದೂ ನೋಟಿಸ್ ನೀಡುವ ಕೆಲಸ ನಡೆದಿದೆ ಎಂದು ಸತ್ಯನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.