ಟ್ರಾಫಿಕ್ ಐಲ್ಯಾಂಡ್ ನಿರ್ಮಾಣಕ್ಕೆ ನಿರ್ಧಾರ
ಕ್ಲಾಕ್ ಟವರ್ ಬಳಿ ಸುಗಮ ವಾಹನ ಸಂಚಾರದ ಉದ್ದೇಶ
Team Udayavani, Jan 11, 2022, 5:25 PM IST
ಹಂಪನಕಟ್ಟೆ: ಸುಗಮ ವಾಹನ ಸಂಚಾರದ ನಿಟ್ಟಿನಲ್ಲಿ ಹಂಪನಕಟ್ಟೆಯ ಕ್ಲಾಕ್ ಟವರ್ ಭಾಗದಲ್ಲಿ ಸಣ್ಣ ರೀತಿಯ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ ಮಾಡಲು ಸ್ಮಾರ್ಟ್‌ಸಿಟಿ ತೀರ್ಮಾನಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ ಕ್ಲಾಕ್ ಟವರ್ ಉದ್ಘಾಟನೆ ನೆರವೇರುವ ಸಾಧ್ಯತೆ ಇದೆ.
ಹಂಪನಕಟ್ಟೆ ಪ್ರದೇಶದಲ್ಲಿ ಸಮಾನ್ಯವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕ್ಲಾಕ್ ಟವರ್ ಬಳಿಯಿಂದ ಒಂದು ಬದಿ ರಸ್ತೆ ಎ.ಬಿ. ಶೆಟ್ಟಿ ವೃತ್ತ ಕಡೆಗೆ ಹೋದರೆ ಮತ್ತೂಂದು ರಸ್ತೆ ಲೇಡಿಗೋಶನ್ ಕಡೆಯಿಂದ ಬರುತ್ತದೆ. ಇದೇ ಭಾಗದಲ್ಲಿ ಸೆಂಟ್ರಲ್ ಮಾರುಕಟ್ಟೆ, ವೆನ್ಲಾಕ್ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ, ಮಿನಿ ವಿಧಾನಸೌಧ ಸಹಿತ ಹಲವು ಸ್ಥಳಗಳಿವೆ. ಇದೇ ಕಾರಣಕ್ಕೆ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ. ಇನ್ನು, ಈ ಭಾಗದಲ್ಲಿ ಏಕಮುಖ ಸಂಚಾರ ಇರುವ ಕಾರಣ, ವಾಹನಗಳು ವ್ಯವಸ್ಥಿತ ತಿರುವ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಟೌನ್‌ಹಾಲ್ ಮತ್ತು ಕ್ಲಾಕ್ ಟವರ್ ನಡುವಣ ಒಂದು ಸಣ್ಣ ರೀತಿಯ ಐಲ್ಯಾಂಡ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಉದ್ಘಾಟನೆಗೆ ಕಾಯುತ್ತಿದೆ ಕ್ಲಾಕ್‌ಟವರ್
ನಗರದ ಹೆಗ್ಗುರುತಾದ ಕ್ಲಾಕ್ ಟವರ್ ಕಾಮಗಾರಿ ಕಳೆದ ವರ್ಷವೇ ಪೂರ್ಣಗೊಂಡಿದೆ. ಗೋಪುರದ ನಾಲ್ಕೂ ದಿಕ್ಕಿಗೂ ಗಡಿಯಾರವನ್ನು ಅಳವಡಿಸಲಾಗಿದೆ. ಗೋಪುರದ ಸುತ್ತಲೂ ಕಟ್ಟೆ ನಿರ್ಮಾಣ ಕೂಡ ಪೂರ್ಣಗೊಂಡಿದ್ದು, ರಾತ್ರಿ ವೇಳೆ ಆಕರ್ಷಣೀಯವಾಗಿ ಕಾಣಲೆಂದು ಗೋಪುರದಲ್ಲಿ ಲೈಟ್ ವ್ಯವಸ್ಥೆ ಮಾಡಲಾಗಿದೆ. ಆದರೂ, ಕ್ಲಾಕ್ ಟವರ್ ಉದ್ಘಾಟನೆಗೆ ಮಾತ್ರ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಇದೀಗ ಈ ಭಾಗದಲ್ಲಿ ಮತ್ತೆ ಅಭಿವೃದ್ಧಿ ಕಾಮಗಾರಿ ಆಗಬೇಕಿದ್ದು, ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ.
ನಗರದಲ್ಲಿ ಸಮಯ ಸೂಚಕವಾಗಿ ಹಲವು ವರ್ಷಗಳ ಹಿಂದೆ ಹಂಪನಕಟ್ಟೆಯಲ್ಲಿ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗಿತ್ತು. ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ 1994ರಲ್ಲಿ ಟವರ್ ಅನ್ನು ಕೆಡಹಲಾಗಿತ್ತು. ಬಳಿಕ ಇದೇ ಜಾಗದಲ್ಲಿ ಹಿಂದಿನ ಕ್ಲಾಕ್ ಟವರ್‌ನ ನೆನಪಿಗಾಗಿ ಹೊಸದಾಗಿ ನಿರ್ಮಿಸಲು ಪಾಲಿಕೆ ಮೇಯರ್ ಆಗಿದ್ದ ಕವಿತಾ ಸನಿಲ್ ನಿರ್ಧರಿಸಿ 2018ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಬಳಿಕ ಈ ಯೋಜನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿ ಮುಂದುವರಿಸಲಾಗಿತ್ತು. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಕ್ಲಾಕ್ ಟವರ್ ರಾಜ್ಯದಲ್ಲಿಯೇ ಅತೀ ದೊಡ್ಡದು.
ಏನಿದು ಟ್ರಾಫಿಕ್ ಐಲ್ಯಾಂಡ್?
ನಗರದಲ್ಲಿ ವೃತ್ತಗಳ ಬದಲು ಟ್ರಾಫಿಕ್ ಐಲ್ಯಾಂಡ್ ನಿರ್ಮಾಣಕ್ಕೆ ಒಲವು ತೋರಲಾಗುತ್ತಿದೆ. ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ದ್ವೀಪಗಳ ಮಾದರಿಯನ್ನು ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದರಿಂದಾಗಿ ಲೇನ್‌ಗಳಲ್ಲಿ ವಾಹನಗಳು ವ್ಯವಸ್ಥಿತವಾಗಿ ಸಂಚರಿಸಲು ಸಹಾಯ ವಾಗುತ್ತದೆ. ಇದಕ್ಕೆ ವೃತ್ತದಷ್ಟು ಸ್ಥಳಾವಕಾಶ ಇರದ ಕಾರಣ ಸರಾಗವಾಗಿ ವಾಹನಗಳು ತಿರುವು ಪಡೆದುಕೊಳ್ಳಲು ಅನುಕೂಲ ವಾಗುತ್ತದೆ. ನಗರಕ್ಕೆ ಹೊಸ ಸ್ವರೂಪದ ಟ್ರಾಫಿಕ್ ಐಲ್ಯಾಂಡ್‌ನಲ್ಲಿ ಹಚ್ಚ ಹಸುರು ಕಂಗೊಳಿಸುವಂತೆ ಲಾನ್, ಬೀದಿ ದೀಪ ಸಹಿತ ಸ್ಮಾರ್ಟ್‌ಪೋಲ್ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಆದರೆ, ಕ್ಲಾಕ್‌ಟವರ್ ಬಳಿ ಈ ರೀತಿಯ ಸಣ್ಣ ರೀತಿಯ ಐಲ್ಯಾಂಡ್ ನಿರ್ಮಾಣಕ್ಕೆ ಯೋಚಿಸಲಾಗಿದೆ.
ಶೀಘ್ರ ಕಾಮಗಾರಿ ಆರಂಭ
ಸುಗಮ ವಾಹನ ಸಂಚಾರದ ಉದ್ದೇಶದಿಂದ ಕ್ಲಾಕ್ ಟವರ್ ಬಳಿ ಸಣ್ಣ ರೀತಿಯ ಐಲ್ಯಾಂಡ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಈ ಭಾಗದಲ್ಲಿ ಏಕಮುಖ ಸಂಚಾರ ಇರುವ ಪರಿಣಾಮ ಈ ರೀತಿ ಐಲ್ಯಾಂಡ್ ನಿರ್ಮಾಣದಿಂದ ವಾಹನಗಳ ತಿರುವು ಸಹಿತ ವ್ಯವಸ್ಥಿತ ಸಂಚಾರಕ್ಕೆ ಅನುಕೂಲವಾಗಬಹುದು.
-ಅರುಣ್ ಪ್ರಭಾ, ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.