ನಗರದಲ್ಲಿ ಇಳಿಮುಖವಾಗುತ್ತಿದೆ ಡೆಂಗ್ಯೂ ಜ್ವರ ಪ್ರಕರಣ
Team Udayavani, Jul 30, 2019, 5:00 AM IST
ಮುಂದುವರಿದ ಲಾರ್ವಾನಾಶ ಕಾರ್ಯಾಚರಣೆ.
ಮಹಾನಗರ: ನಗರದಲ್ಲಿ ವ್ಯಾಪಕವಾಗಿ ಹರಡಿ ಜನರನ್ನು ಆತಂಕಕ್ಕೀಡುಮಾಡಿರುವ ಡೆಂಗ್ಯೂ ಕಾಯಿಲೆಯು ಈಗ ಇಳಿಮುಖ ವಾಗುತ್ತಿದ್ದು, ಇದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಜನಜಾಗೃತಿ ಮುಂದುವರಿದರೆ, ಇನ್ನು ಕೆಲವು ದಿನಗಳಲ್ಲಿ ಬಹುತೇಕ ರೋಗವು ಸಂಪೂರ್ಣ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ.
ಡೆಂಗ್ಯೂ ತೀವ್ರತೆ ಯನ್ನು ಪಡೆದು ಕೊಳ್ಳುತ್ತಿರುವಂತೆ ಆರೋಗ್ಯ ಇಲಾಖೆ, ಮನಪಾ, ಜಿಲ್ಲಾಡಳಿತ ಶೀಘ್ರ ಸ್ಪಂದಿಸಿ ನಿಯಂತ್ರಣ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗಿತ್ತು. ಇದಕ್ಕೆ ಪೂರಕವಾಗಿ ಉದಯವಾಣಿಯ “ಸುದಿನ’ ಕೂಡ ಒಂದು ವಾರದಿಂದ “ಡೆಂಗ್ಯೂ ಎಚ್ಚರ ಎಚ್ಚರ’ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಜನರಲ್ಲಿ ಡೆಂಗ್ಯೂಬಗ್ಗೆ ಜಾಗೃತಿ, ಎಚ್ಚರಿಕೆ ಹಾಗೂ ಅವರಿಗೆ ರೋಗ ಹರಡದಂತೆ ಮಾಹಿತಿ ನೀಡುವುದು ಪತ್ರಿಕೆಯ ಆಶಯವಾಗಿದೆ. ಅಂಥ ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಿಸಬೇಕಾದರೆ, ಜಿಲ್ಲಾಡಳಿತದ ಜತೆಗೆ ಸಾರ್ವಜನಿಕರ ಸಹಭಾಗಿತ್ವ ಕೂಡ ಅಷ್ಟೇ ಮುಖ್ಯ. ಈ ಕಾರಣದಿಂದಲೇ ಸುದಿನವು ಪ್ರತಿದಿನವೂ ಡೆಂಗ್ಯೂ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜತೆಗೆ ಸಾರ್ವಜನಿಕರ ಅಭಿಪ್ರಾಯ, ಸಮಸ್ಯೆ-ದೂರುಗಳಿಗೆ ಸೂಕ್ತ ವೇದಿಕೆಯ ನ್ನು ಕೂಡ ಒದಗಿಸುವ ಪ್ರಯತ್ನ ಮಾಡಿದೆ.
ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು, ಖಾಲಿ ನಿವೇಶನಗಳು, ಜನವಾಸವಿಲ್ಲದ ಮನೆಗಳು ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ತಂದಿರುವ ಆತಂಕಗಳ ಬಗ್ಗೆ ಸಾರ್ವಜನಿಕರ ದೂರುಗಳನ್ನು ಚಿತ್ರ ಸಮೇತ ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದೆ. ಗಮನಾರ್ಹ ಅಂದರೆ, ಕೆಲವು ದಿನಗಳಿಂದ ಉದಯವಾಣಿಗೆ ಸಾರ್ವಜನಿಕರಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯ ದೂರುಗಳು ಬಂದಿವೆ. ನಗರದ ಹಲವೆಡೆ ಕಂಡುಬಂದ ಸೊಳ್ಳೆ ಉತ್ಪತ್ತಿ ತಾಣಗಳಿಗೆ ಸಂಬಂಧಿಸಿದಂತೆಯೂ ನೂರಾರು ದೂರುಗಳು ಕೂಡ ಬಂದಿವೆ. ಆ ಮೂಲಕ ಅಭಿಯಾನಕ್ಕೆ ಓದುಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಅಭಿಯಾನಕ್ಕೆ ಇಲಾಖೆಗಳ ಸ್ಪಂದನೆ
ಡೆಂಗ್ಯೂ ನಿಯಂತ್ರಣದ ಬಗ್ಗೆ ಅಭಿಯಾನದ ಮೂಲಕ ಉದಯವಾಣಿ ಮಾಡಿರುವ ಪ್ರಯತ್ನಗಳಿಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸ್ಪಂದಿಸಿದೆ. ಉದಯವಾಣಿಯಲ್ಲಿ ಬಂದಿರುವ ದೂರುಗಳು ಮತ್ತು ಸಾರ್ವಜನಿಕರಿಂದ ಮಹಾನಗರ ಪಾಲಿಕೆಗೆ ಬಂದಿರುವ ಕರೆಗಳಿಗೆ ಸ್ಪಂದಿಸಿ ಈ ಎಲ್ಲ ಪ್ರದೇಶಗಳಿಗೆ ಈಗಾಗಲೇ ಗ್ರಿಡ್ ತಂಡದವರು ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ನೀರು ನಿಂತಿರುವ ಪ್ರದೇಶಗಳಲ್ಲಿ ಕೆಲವು ಕಡೆ ಕ್ರಿಮಿ ನಾಶಕ ಎಣ್ಣೆ ಸ್ಪ್ರೆà ಮಾಡಿ ಲಾರ್ವಾ ನಾಶಪಡಿಸಲಾಗುತ್ತಿದೆ. ಖಾಲಿ ನಿವೇಶನಗಳ, ಜನವಸತಿ ಇಲ್ಲದಿರುವ ಮನೆಗಳ ವಾರಸುದಾರರ ವಿಳಾಸವನ್ನು ಹುಡುಕಿ ಅವರಿಗೆ ಎಚ್ಚರಿಕೆ ನೀಡುವ ಮತ್ತು ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ. ಕೆಲವು ನಿವೇಶನಗಳ ಮಾಲಕರ ವಿಳಾಸ ಪತ್ತೆಯಾಗಿಲ್ಲ. ಆದರೂ ಈ ಎಲ್ಲ ನಿವೇಶನಗಳಲ್ಲಿ ಪಾಲಿಕೆ ವತಿಯಿಂದ ಸೆ#†à ಮಾಡುವ ಕಾರ್ಯ ನಡೆಯುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಖಾಲಿ ನಿವೇಶನ, ಖಾಲಿ ಇರಿಸಿರುವ ಮನೆಗಳನ್ನು ಸ್ವತ್ಛವಾಗಿರಿಸಿದ್ದರೆ ದಂಡ ಹಾಗೂ ಕಾನೂನು ಕ್ರಮಗಳನ್ನು ಜರಗಿಸುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಯವರು ನೀಡಿದ್ದಾರೆ.
ಪರಿಸರ ಸ್ವಚ್ಛಚೆಗೆ ಆದ್ಯತೆ
ದಂಡ ವಿಧಿಸುವುದು ಸಮಸ್ಯೆಗೆ ಪರಿಹಾರವಲ್ಲ. ವ್ಯಾಪಕ ಜನಜಾಗೃತಿ ಆದಾಗ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಉದಯವಾಣಿಯೂ ತನ್ನ ಅಭಿಯಾನದಲ್ಲಿ ಇದನ್ನು ಪ್ರತಿಪಾದಿಸುತ್ತಾ ಬಂದಿದೆ. ಜಿಲ್ಲಾಡಳಿತ ಕೈಗೊಂಡಿರುವ ಡೆಂಗ್ಯೂ ಡ್ರೈವ್ ಈ ನಿಟ್ಟಿನಲ್ಲಿ ಪೂರಕವಾಗಿದೆ. ಇದನ್ನು ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಇದು ಮಹತ್ವದ ಕಾರ್ಯಕ್ರಮಗಳಲ್ಲೊಂದಾಗಿದೆ. ಇದನ್ನು ಪ್ರತಿ ರವಿವಾರ ಜಿಲ್ಲೆಯಾದ್ಯಂತ ನಡೆಸುವುದಾಗಿ ಜಿಲ್ಲಾಡಳಿತ ಈಗಾಗಲೇ ಘೋಷಿಸಿದೆ. ಶಾಲೆ, ಕಾಲೇಜುಗಳ ಆವರಣದಲ್ಲಿ ಸ್ವತ್ಛತೆಯ ಲೋಪದಿಂದಾಗಿ ಸಾಂಕ್ರಾಮಿಕ ರೋಗಗಳು ತಾಣವಾಗುತ್ತಿರುವ ಬಗ್ಗೆಯೂ ಉದಯವಾಣಿ ಅಭಿಯಾನದಲ್ಲಿ ಗಮನ ಸೆಳೆಯಲಾಗಿತ್ತು. ಇದೀಗ ಜಿಲ್ಲಾಡಳಿತ ಸೋಮವಾರ ನಗರದ ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಿ ಆವರಣಗಳನ್ನು ಸ್ವತ್ಛವಾಗಿಡುವಂತೆ ಸೂಚಿಸಿದೆ, ಲೋಪಗಳು ಕಂಡು ಬಂದರೆ ಕಠಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಪ್ರತಿಕೂಲ ಹವಾಮಾನ: ಎಚ್ಚರಿಕೆ
ಡೆಂಗ್ಯೂ, ಮಲೇರಿಯಾ ರೋಗ ಹರಡುವುದರಲ್ಲಿ ಹವಾಮಾನ ವೈಪರೀತ್ಯದ ಪಾಲೂ ಇದೆ. ಬಿಟ್ಟು ಬಿಟ್ಟು ಮಳೆ ಹಾಗೂ ಬಿಸಿಲು ಕಾಣಿಸುವ ವಾತಾವರಣವು ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗುತ್ತದೆ. ಕೆಲವು ದಿನಗಳಿಂದ ನಿರಂತರ ಮಳೆಯ ಅನಂತರ ಇದೀಗ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಅದರ ನಡುವೆ ಬಿಟ್ಟು-ಬಿಟ್ಟು ಮಳೆಯಾಗುತ್ತಿದೆ. ಈ ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿದ್ದು, ನಿಯಂತ್ರಣಕ್ಕೆ ಪ್ರತಿಕೂಲವಾಗಿದೆ. ಇದೆ ಸ್ಥಿತಿ ಮುಂದುವರಿದರೆ ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಮತ್ತೇ ಹೆಚ್ಚುವ ಸಾಧ್ಯತೆಗಳಿವೆ. ಹೀಗಾಗಿ, ಸಾರ್ವಜನಿಕರು ಮತ್ತು ಇಲಾಖೆಗಳು ಎಚ್ಚರ ವಹಿಸುವುದು ಅಗತ್ಯ. ಅಲ್ಲಲ್ಲಿ ಮಳೆನೀರು ಕಟ್ಟಿ ನಿಂತಿದ್ದರೆ ಕೂಡಲೇ ತೆರವುಗೊಳಿಸಬೇಕು. ನೀರಿನ ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಿಡಬೇಕು.
ಡೆಂಗ್ಯೂ ಅಭಿಯಾನ ಶ್ಲಾಘನೀಯ
ಡೆಂಗ್ಯೂ ನಿಯಂತ್ರಣದ ದಿಶೆಯಲ್ಲಿ ಇಲಾಖೆಗಳ ವತಿಯಿಂದ ಹಲವಾರು ಕ್ರಮಗಳು ಮುಂದುವರಿಯಲಿದೆ. ಡೆಂಗ್ಯೂ ಇಳಿಮುಖವಾಗುತ್ತಿದ್ದು, ಇನ್ನು ಒಂದು ವಾರದೊಳಗೆ ಬಹುತೇಕ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿರುವುದು ಡೆಂಗ್ಯೂ ನಿಯಂತ್ರಣಕ್ಕೆ ಬರುವುದಕ್ಕೆ ಮುಖ್ಯ ಕಾರಣವಾಗಿದೆ. ಡೆಂಗ್ಯೂ ಬಗ್ಗೆ ನಗರ ಜನತೆಯಲ್ಲಿ ಜಾಗೃತಿ ಮೂಡಿಸುವಲ್ಲಿ ಉದಯವಾಣಿಯ ಅಭಿಯಾನ ಕೂಡ ಮಹತ್ವದ ಪಾತ್ರ ವಹಿಸಿದೆ. ಆ ಮೂಲಕ, ಸಾರ್ವಜನಿಕರನ್ನು ಡೆಂಗ್ಯೂ ನಿಯಂತ್ರಣದ ವಿಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಪ್ರೇರೇಪಿಸಿದ ಪತ್ರಿಕೆಯ ಪ್ರಯತ್ನ ಶ್ಲಾಘನೀಯ.
-ಶಶಿಕಾಂತ್ ಸೆಂಥಿಲ್, ದ.ಕನ್ನಡ ಜಿಲ್ಲಾಧಿಕಾರಿ
ದೂರುಗಳ ಪರಿಶೀಲನೆ
ಮನ ಪಾವು ಡೆಂಗ್ಯೂ ನಿಯಂತ್ರಣಕ್ಕೆ ಅವಶ್ಯ ಎಲ್ಲ ಕ್ರಮಗಳನ್ನು ಕೈಗೊಂಡು ಕಾರ್ಯಗತಗೊಳಿಸುತ್ತಿದೆ. “ಸುದಿನ’ ಅಭಿಯಾನದಲ್ಲಿ ಸಾರ್ವಜನಿಕರಿಂದ ಬಂದಿರುವ ಎಲ್ಲ ದೂರುಗಳನ್ನು ಪರಿಶೀಲಿಸಲಾಗುತ್ತಿದ್ದು, ಸೂಕ್ತ ಪರಿಹಾರ ಕ್ರಮಗಳನ್ನು ಪಾಲಿಕೆಯ ಸಿಬಂದಿ ಮಾಡುತ್ತಿದ್ದಾರೆ. ನೀರು ನಿಂತಿರುವ ಹಲವು ಕಡೆಗಳಲ್ಲಿ ಕ್ರಿಮಿನಾಶಕ ಎಣ್ಣೆ, ಕೀಟ ನಾಶಕವನ್ನು ಸಿಂಪಡಣೆ ಮಾಡುವ ಕಾರ್ಯ ನಡೆಯುತ್ತಿದೆ. ಚರಂಡಿಗಳಲ್ಲಿ ಮಲಿನ ನೀರು ನಿಂತಿರುವ ಕಡೆ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯೂ ನಡೆಯುತ್ತಿದೆ. ಈ ಎಲ್ಲ ಕ್ರಮಗಳ ಪರಿಣಾಮವಾಗಿ ಡೆಂಗ್ಯೂ ನಿಯಂತ್ರಣಕ್ಕೆ ಬರುತ್ತಿದೆ.
- ಮಹಮ್ಮದ್ ನಜೀರ್, ಮನಪಾ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.