ಮಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಕೆ
ಲಾಡ್ಜ್ ಗಳ ಬುಕ್ಕಿಂಗ್‌ನಲ್ಲಿ ಶೇ.20ರಷ್ಟು ಕುಸಿತ
Team Udayavani, Dec 26, 2019, 5:26 AM IST
ಮಹಾನಗರ: ನಗರದಲ್ಲಿ ಸಂಭವಿಸಿದ ಗಲಭೆ ಮತ್ತು ಗೋಲಿಬಾರ್ ಪ್ರಕರಣಗಳ ಪರಿಣಾಮ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಈಗ ಕಡಿಮೆಯಾಗಿದೆ. ಪ್ರತಿ ವರ್ಷವು ಕ್ರಿಸ್ಮಸ್ ರಜಾ ಅವಧಿ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಂಗಳೂರಿಗೆ ಆಗಮಿಸುತ್ತಿದ್ದು, ಈ ಬಾರಿ ನಗರದ ಲಾಡ್ಜ್ ಗಳಲ್ಲಿ ಶೇ.20ರಷ್ಟು ಕಡಿಮೆ ಬುಕ್ಕಿಂಗ್ ಆಗಿದೆ.
ಡಿ. 22ರಿಂದ ಕ್ರಿಸ್ಮಸ್ ರಜೆ ಆರಂಭವಾಗಿದ್ದು, ಡಿ. 31ರ ವರೆಗೆ ಮುಂದುವರಿಯುತ್ತದೆ. ಹೀಗಾಗಿ, ಸಾಮಾನ್ಯವಾಗಿ ಈ ರಜೆಗೆ ಹೊರ ಜಿಲ್ಲೆ, ರಾಜ್ಯಗಳಿಂದ ಕರಾವಳಿ ಪ್ರವಾಸಕ್ಕೆಂದು ಇಲ್ಲಿನ ಲಾಡ್ಜ್ಗಳನ್ನು ರಜಾ ಅವಧಿಗೆ ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಡಿ. 19ರಂದು ನಡೆದ ಗಲಭೆ, ಗೋಲಿಬಾರ್, ಡಿ. 22ರ ವರೆಗೆ ಕರ್ಫ್ಯೂ ಇದ್ದ ಹಿನ್ನೆಲೆಯಲ್ಲಿ ಮತ್ತು ಇದೀಗ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯುತ್ತಿರುವ ಕಾರಣ ಪ್ರವಾಸಿಗರು ನಗರದಲ್ಲಿ ತಂಗಲು ಹಿಂದೇಟು ಹಾಕು ತ್ತಿದ್ದಾರೆ. ಇಲ್ಲಿನ ವಿವಿಧ ಹೊಟೇಲ್‌ನವರು ಪ್ರವಾಸೋದ್ಯಮ ಇಲಾಖೆಗೆ ನೀಡಿದ ಮಾಹಿತಿ ಪ್ರಕಾರ ಶೇ. 20ರಷ್ಟು ಕಡಿಮೆ ಬುಕ್ಕಿಂಗ್ ಈ ಬಾರಿ ಆಗಿದೆ. ರಜಾ ಅವಧಿಯಲ್ಲಿ ತುಂಬಿರುತ್ತಿದ್ದ ಲಾಡ್ಜ್ಗಳು ಪ್ರಸ್ತುತ ಖಾಲಿ ಖಾಲಿಯಾಗಿವೆ. ಆದರೆ ಒಂದು ದಿನದ ಪ್ರವಾಸಕ್ಕೆ ಬಂದು ಹೋಗುವವರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.
50 ಲಕ್ಷ ರೂ. ನಷ್ಟ
ಪ್ರವಾಸ, ಶುಭ ಕಾರ್ಯಕ್ಕೆ ಬರಬೇಕಾದವರೂ ಕೆಲವು ಸಮಯಗಳ ಹಿಂದೆಯೇ ಲಾಡ್ಜ್ ರೂಂಗಳನ್ನು ಕಾಯ್ದಿರಿಸಿಕೊಂಡಿದ್ದರು. ಆದರೆ ಗಲಭೆ ಉಂಟಾದ ಪರಿಣಾಮ, ಕರ್ಫ್ಯೂ ವಿಧಿಸಿದ ಪರಿಣಾಮ ಆ ಅವಧಿಯಲ್ಲಾದ ಎಲ್ಲ ಬುಕ್ಕಿಂಗ್‌ಗಳು ರದ್ದಾಗಿವೆ. ಇದರಿಂದಾಗಿ ಲಾಡ್ಜ್ ಉದ್ಯಮಕ್ಕೆ ಅಂದಾಜು 50 ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಕೆಲವು ಪ್ರವಾಸಿಗರು ಪರಿಸ್ಥಿತಿ ಬಗ್ಗೆ ವಿಚಾರಿಸಿಕೊಂಡು ಲಾಡ್ಜ್ ಬುಕ್ ಮಾಡುತ್ತಿದ್ದಾರೆ. ಆದರೆ ಮೊದಲಿನಂತೆ ಸಂಪೂರ್ಣ ಲಾಡ್ಜ್ ಕಾಯ್ದಿರಿಸಿಕೊಳ್ಳುತ್ತಿಲ್ಲ. ಇನ್ನೊಂದು ವಾರ ಕಾಲ ಇದೇ ರೀತಿ ಮುಂದುವರಿಯಬಹುದು. ಅಷ್ಟರಲ್ಲಿ ಕ್ರಿಸ್ಮಸ್ ರಜೆಯೂ ಮುಗಿಯುವುರಿದಂದ ಲಾಡ್ಜ್ ಆದಾಯಕ್ಕೆ ಸಮಸ್ಯೆ ಹೆಚ್ಚಬಹುದು ಎನ್ನುವುದು ಅವರ ಮಾತು.
ಬಸ್ ಬುಕ್ಕಿಂಗ್‌ಗೆ ಜನವೇ ಇಲ್ಲ
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಪ್ರವಾಸ ತೆರಳಲು ಜನರಲ್ಲಿ ಆತಂಕ ಉಂಟಾಗುತ್ತಿದೆ. ಕಳೆದ ವರ್ಷಗಳಲ್ಲಿ ಕ್ರಿಸ್ಮಸ್, ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಮತ್ತಿತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಖಾಸಗಿ ಬಸ್‌ಗಳಲ್ಲಿ ಸೀಟು ಕಾಯ್ದಿರಿಸುತ್ತಿದ್ದರು. ಕಳೆದ ವರ್ಷಗಳಲ್ಲಿ ಕ್ರಿಸ್ಮಸ್ ರಜೆಯಲ್ಲಿ ಕನಿಷ್ಠ 10 ಕುಟುಂಬಗಳು ಬಸ್ ಸೀಟು ಕಾಯ್ದಿರಿಸಿದ್ದರೆ, ಈ ಬಾರಿ ಕೇವಲ ಒಂದು ಕುಟುಂಬ ಮಂಗಳೂರಿಗೆ ಸೀಟು ಕಾಯ್ದಿರಿಸಿದೆ ಎನ್ನುತ್ತಾರೆ ನಗರದ ಟ್ರಾವೆಲ್ ಏಜೆನ್ಸಿಯೊಂದರ ಮಾಲಕ. ಮಂಗಳೂರಿನಿಂದ ಇತರೆಡೆಗಳಿಗೆ ಪ್ರವಾಸ ತೆರಳಲು ವಾಹನ ಬುಕ್ಕಿಂಗ್ ಮಾಡಿದವರ ಸಂಖ್ಯೆಯೂ ಈ ಬಾರಿ ತೀರಾ ಕಡಿಮೆ ಇದೆ ಎನ್ನುತ್ತಾರೆ ಅವರು.
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.