ದ.ಕ.: 6 ವರ್ಷಗಳಲ್ಲೇ ಅತಿ ಕಡಿಮೆ ಮಳೆ!
ಮುಂಗಾರು ಕಣ್ಣುಮುಚ್ಚಾಲೆ: ಆತಂಕದಲ್ಲಿ ಕರಾವಳಿಯ ಜನತೆ
Team Udayavani, Jun 28, 2019, 10:49 AM IST
ಮಂಗಳೂರು: ಮಳೆಗಾಲ ಆರಂಭ ವಾಗಿ 3 ವಾರ ಕಳೆದರೂ ಕರಾವಳಿಯಲ್ಲೆಲ್ಲೂ ವರುಣನ ಕೃಪೆ ಕಾಣಿಸುತ್ತಿಲ್ಲ. ದಿನವಿಡೀ ಮೂರ್‍ನಾಲ್ಕು ಬಾರಿ ಸಣ್ಣ ಪ್ರಮಾಣದ ಮಳೆ ಬಂದು ಕಣ್ಮರೆಯಾಗುತ್ತಿದೆ. ಉಕ್ಕಿ ಹರಿಯ ಬೇಕಿದ್ದ ನದಿ ತೊರೆಗಳು ತಣ್ಣಗೆ ಹರಿಯುತ್ತಿವೆ.
2 ವರ್ಷಗಳಿಂದೀಚೆಗೆ ಬರ ಎದುರಿಸುತ್ತಿರುವ ದ.ಕ. ಜಿಲ್ಲೆಯಲ್ಲಿ ಈ ಬಾರಿಯೂ ಮುಂಗಾರು ತಲ್ಲಣ ಸೃಷ್ಟಿಸಿದೆ. ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ ಜೂ. 1ರಿಂದ ಜೂ. 25ರ ವರೆಗೆ ವಾಡಿಕೆ ಮಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.55 ಮತ್ತು ಉಡುಪಿಯಲ್ಲಿ ಶೇ. 47 ಮಳೆ ಕೊರತೆ ಆಗಿದೆ.
ಇಲಾಖೆಯ ಲೆಕ್ಕಾಚಾರದಂತೆ ಮುಂಗಾರು ಪ್ರಾರಂಭವಾಗಿ 25 ದಿನಗಳು ಕಳೆದಿವೆ. ಆದರೆ ವಾಸ್ತವ ಹಾಗಿಲ್ಲ. ಕಳೆದ ವರ್ಷ ಇದೇ ಹೊತ್ತಿಗೆ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದವು.
ಕೇವಲ 347 ಮಿ.ಮೀ. ಮಳೆ
ದ.ಕ. ಜಿಲ್ಲೆಯಲ್ಲಿ ಜೂ.1ರಿಂದ 25ರ ವರೆಗೆ 347 ಮಿ.ಮೀ. ಮಳೆಯಾಗಿದ್ದು, ಇದು 6 ವರ್ಷಗಳಲ್ಲಿ ಜಿಲ್ಲೆಯಲ್ಲಿ ಜೂನ್ ಕನಿಷ್ಠ ಮಳೆ. 2014ರಲ್ಲಿ ಜೂನ್‌ನಲ್ಲಿ 567 ಮಿ.ಮೀ., 2015ರಲ್ಲಿ 671 ಮಿ.ಮೀ., 2016ರಲ್ಲಿ 940.7 ಮಿ.ಮೀ., 2017 ರಲ್ಲಿ 865 ಮಿ.ಮೀ. ಮತ್ತು 2018ರಲ್ಲಿ 1,223.6 ಮಿ.ಮೀ. ಮಳೆಯಾಗಿತ್ತು. 2018ರ ಜನವರಿಯಿಂದ ಜೂನ್ ವರೆಗೆ ಬಂದಿರುವ ಮಳೆಗೆ ಹೋಲಿಸಿದರೂ ಈ ಬಾರಿ ಕನಿಷ್ಠ. 2014ರಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗೆ 990 ಮಿ.ಮೀ., 2015ರಲ್ಲಿ 990 ಮಿ.ಮೀ., 2016ರಲ್ಲಿ 1092 ಮಿ.ಮೀ., 2017ರಲ್ಲಿ 1,044 ಮಿ.ಮೀ., 2018 ರಲ್ಲಿ 1723 ಮಿ.ಮೀ. ಮಳೆಯಾಗಿತ್ತು.
ಉಡುಪಿ ಜಿಲ್ಲೆಯ ಜೂನ್‌ನ ವಾಡಿಕೆ ಮಳೆ 908 ಮಿ.ಮೀ. ಆಗಿದ್ದು ಈವರೆಗೆ 483 ಮಿ.ಮೀ. ಮಳೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ 915.1
ಮಿ.ಮೀ. ವಾಡಿಕೆ ಮಳೆಯಲ್ಲಿ 490.8 ಮಿ.ಮೀ. ಮಳೆಯಾಗಿ ಶೇ. 46 ಕೊರತೆ, ಕಾರ್ಕಳ ತಾಲೂಕಿನಲ್ಲಿ 909.8 ಮಿ.ಮೀ. ವಾಡಿಕೆ ಮಳೆಯಲ್ಲಿ 466.8 ಮಿ.ಮೀ. ಮಳೆ ಸುರಿದು ಶೇ. 46 ಕೊರತೆ, ಉಡುಪಿ ಯಲ್ಲಿ 872.6 ಮಿ.ಮೀ. ವಾಡಿಕೆ ಮಳೆಯಲ್ಲಿ 486 ಮಿ.ಮೀ. ಮಳೆಯಾಗಿ ಶೇ.44ರಷ್ಟು ಕೊರತೆ ಇದೆ.
ಸೊರಗಿದೆ ನೇತ್ರಾವತಿ
ನೇತ್ರಾವತಿ ಇನ್ನೂ ತುಂಬಿಲ್ಲ. ಕಳೆದ ವರ್ಷ ಜೂ.25ರಂದು ನೇತ್ರಾವತಿಯಲ್ಲಿ ನೀರಿನ ಮಟ್ಟ 5.2 ಮೀ. (ಅಪಾಯ ಮಟ್ಟ 8.5 ಮೀ.) ಇತ್ತು. ಈ ವರ್ಷ 3 ಮೀ. ಮಾತ್ರ ಇದೆ. ಇದೇ ಸ್ಥಿತಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಇತರ ನದಿಗಳಲ್ಲೂ ಇದೆ.
ಭತ್ತ ಕೃಷಿಗೆ ಹಿನ್ನಡೆ
ಮುಂಗಾರು ಮಳೆ ಕುಸಿತದಿಂದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಮತ್ತು ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ದ.ಕ.ದಲ್ಲಿ ಜೂ. 21ರ ವರೆಗೆ ಬಿತ್ತನೆ ಆಗಿರುವುದು ಕೇವಲ 60 ಹೆಕ್ಟೇರ್ ಪ್ರದೇಶದಲ್ಲಿ. ಕಳೆದ ವರ್ಷ ಇದೇ ಅವಧಿಯಲ್ಲಿ 2,724 ಹೆಕ್ಟೇರ್‌ನಲ್ಲಿ ಬಿತ್ತನೆ ಮತ್ತು ನಾಟಿ ಆಗಿತ್ತು. ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಬಾರಿ 1,015 ಹೆಕ್ಟೇರ್‌ನಲ್ಲಿ ಬಿತ್ತನೆ, ನಾಟಿ ಆಗಿದ್ದರೆ ಈ ವರ್ಷ ಇನ್ನೂ ಆರಂಭಗೊಂಡಿಲ್ಲ. ತಾಲೂಕುವಾರು ಮಂಗಳೂರಿನಲ್ಲಿ 5 ಹೆ. (ಕಳೆದ ವರ್ಷ 1,140 ಹೆ.), ಬಂಟ್ವಾಳದಲ್ಲಿ 40 ಹೆ. (425 ಹೆ.), ಪುತ್ತೂರಿನಲ್ಲಿ 50 ಹೆ. (90 ಹೆ.) ಮತ್ತು ಸುಳ್ಯದಲ್ಲಿ 10 ಹೆಕ್ಟೇರ್‌ನಲ್ಲಿ (51 ಹೆ.) ಭತ್ತದ ಬಿತ್ತನೆ ಆಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಜೂ. 21ರವರೆಗೆ 1,340 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಯಾಗಿದ್ದರೆ ಈ ಬಾರಿ ಕೇವಲ 424 ಹೆಕ್ಟೇರ್‌ನಲ್ಲಿ ಬಿತ್ತನೆ ಮತ್ತು ನಾಟಿ ನಡೆದಿದೆ. ಉಡುಪಿಯಲ್ಲಿ 215 ಹೆ., ಕುಂದಾಪುರದಲ್ಲಿ 187 ಹೆ. ಮತ್ತು ಕಾರ್ಕಳದಲ್ಲಿ 22 ಹೆ.ನಲ್ಲಿ ಭತ್ತದ ಕೃಷಿ ನಡೆದಿದೆ.
ಮಳೆ ವಿಳಂಬದಿಂದ ಬೆಟ್ಟು ಗದ್ದೆಗಳ ಬೇಸಾಯಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಇನ್ನೂ ಮುಂಗಾರು ಚುರುಕುಗೊಳ್ಳದಿದ್ದರೆ ಬೆಟ್ಟು ಗದ್ದೆಗಳ ಬೇಸಾಯ ಕೈಬಿಡುವುದು ರೈತರಿಗೆ ಅನಿವಾರ್ಯವಾಗುತ್ತದೆ.
ಜುಲೈಯಲ್ಲಿ ಮುಂಗಾರು ಚುರುಕು ಸಾಧ್ಯತೆ
ಜೂನ್ ತಿಂಗಳಿನಲ್ಲಿ ಮುಂಗಾರು ದುರ್ಬಲವಾಗಿದ್ದು, ಮಾಸಾಂತ್ಯದ ವರೆಗೆ ಇದೇ ಸ್ಥಿತಿ ಮುಂದುವರಿಯಲಿದೆ. ಲಭ್ಯ ಹವಾಮಾನ ಮುನ್ಸೂಚನೆ ಪ್ರಕಾರ ಜುಲೈ ಮೊದಲ ವಾರದಲ್ಲಿ ಮುಂಗಾರು ಚುರುಕುಗೊಳ್ಳುವ ನಿರೀಕ್ಷೆ ಇದೆ.
– ಸುನೀಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.