ಕರಾವಳಿ ವಿದ್ಯಾರ್ಥಿಗಳಲ್ಲಿ “ಕಲಾ’ ಕಲಿಕೆ ಆಸಕ್ತಿ ಕುಸಿತ!

ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಮಕ್ಕಳ ಸಂಖ್ಯೆ ವಿಜ್ಞಾನ, ವಾಣಿಜ್ಯದತ್ತ ಒಲವು ಹೆಚ್ಚಳ

Team Udayavani, Mar 12, 2022, 8:25 AM IST

ಕರಾವಳಿ ವಿದ್ಯಾರ್ಥಿಗಳಲ್ಲಿ “ಕಲಾ’ ಕಲಿಕೆ ಆಸಕ್ತಿ ಕುಸಿತ!

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಲ್ಲಿ ಕಲಾ ವಿಭಾಗಕ್ಕೆ ಸೇರ್ಪಡೆ ಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ.

ಉಭಯ ಜಿಲ್ಲೆಯಲ್ಲಿ 10-15 ವರ್ಷಗಳ ಹಿಂದೆ ಶೇ. 40ರಷ್ಟು ವಿದ್ಯಾರ್ಥಿಗಳು ಕಲಾ ವಿಭಾಗಕ್ಕೆ ಸೇರ್ಪಡೆಯಾಗುತ್ತಿದ್ದರೆ ಸದ್ಯ ಶೇ. 15ರಿಂದ 20ರ ಗಡಿಯಲ್ಲಿದೆ. ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ವಿಭಾಗಗಳತ್ತ ಆಸಕ್ತಿ ಹೊಂದಿದ್ದಾರೆ.

ದ.ಕ.ದಲ್ಲಿ ಪ್ರತೀ ವರ್ಷ 40 ಸಾವಿರ ವಿದ್ಯಾರ್ಥಿಗಳು ಪಿಯುಸಿ ಪ್ರವೇಶ ಪಡೆಯುತ್ತಾರೆ. ಅವರಲ್ಲಿ ಸುಮಾರು 18 ಸಾವಿರ ಮಂದಿ ವಿಜ್ಞಾನ, 15 ಸಾವಿರ ಮಂದಿ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಬಯಸುತ್ತಾರೆ. ಕೇವಲ 2,500ದಿಂದ 3 ಸಾವಿರದಷ್ಟು ಮಂದಿ ಮಾತ್ರ ಕಲಾ ಕ್ಷೇತ್ರದತ್ತ ಹೊರಳುತ್ತಾರೆ. ಉಳಿದವರು ಐಟಿಐ ಮತ್ತಿತರ ನೇರ ಉದ್ಯೋಗಾಧಾರಿತ ಕಲಿಕೆಗಳತ್ತ ದೃಷ್ಟಿ ಹರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ.

ರಾಜ್ಯದಲ್ಲಿ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದ್ದರೂ ಕರಾವಳಿಯಲ್ಲಿ ಮಾತ್ರ ನಿರಾಸಕ್ತಿ ವ್ಯಕ್ತವಾಗುತ್ತಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೆಡಿಕಲ್‌, ಎಂಜಿನಿಯರ್‌ ಮತ್ತಿತರ ವೃತ್ತಿಪರ ಕಲಿಕೆಗಳತ್ತ ಮಕ್ಕಳ ಒಲವಿನಿಂದ ಕಲಾ ವಿಭಾಗದಲ್ಲಿ ಮಕ್ಕಳ ಆಸಕ್ತಿ ಕುಸಿತಕ್ಕೆ ಕಾರಣ ಎಂಬುದು ಒಂದು ವಾದ. ಆದರೆ ಕಳೆದ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಎಲ್ಲರೂ ಉತ್ತೀರ್ಣಗೊಂಡ ಕಾರಣ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಹೆಚ್ಚಿತ್ತು.

ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆ ಬಗ್ಗೆ ಹೇರಿಕೆ ಅಸಾಧ್ಯ. ಬದಲಾಗಿ ಆಯ್ಕೆಗಳನ್ನು ಮನದಟ್ಟು ಮಾಡುವ ಪ್ರಯತ್ನವನ್ನು ಶಿಕ್ಷಕರು ಮಾಡಬಹುದು. ಕಲಾ ವಿಭಾಗದ ಸಾಧ್ಯತೆಗಳನ್ನು ತೆರೆದಿಡುವ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಲಾಗುವುದು ಎಂದು ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್‌ ಕೆ. “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಕಲಾ ವಿಭಾಗದಲ್ಲಿ ಕಾನೂನು, ಪತ್ರಿಕೋದ್ಯಮ, ಬಿಎಡ್‌, ಲಲಿತ ಕಲೆ, ಫೈನ್‌ ಆರ್ಟ್‌ ಸೇರಿದಂತೆ ನಾನಾ ಅವಕಾಶಗಳಿವೆ. ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸಾವಿರಾರು ಬಗೆಯ ಉದ್ಯೋಗ ಸಾಧ್ಯತೆಯೂ ಇದೆ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರನಾಥ ಎಂ. ಹೇಳುತ್ತಾರೆ.

ಕಲಾ ವಿಭಾಗಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ. ಕಲಾ ವಿಭಾಗದ ಮೂಲಕ ಭವಿಷ್ಯದಲ್ಲಿ ಸಿಗಬಹುದಾದ ಅವಕಾಶಗಳ ಬಗ್ಗೆ ಪುಸ್ತಕ ರಚಿಸಿ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಯಾವುದೇ ವಿಭಾಗಕ್ಕೆ ಸೇರ್ಪಡೆ ಆಯಾ ವಿದ್ಯಾರ್ಥಿಯ ಆಯ್ಕೆ. ಪೂರಕ ವ್ಯವಸ್ಥೆಗಳನ್ನು ಇಲಾಖೆ ಕಡೆಯಿಂದ ನೀಡಲಾಗುವುದು.
– ಸಿ.ಡಿ. ಜಯಣ್ಣ / ಮಾರುತಿ,
ಉಪನಿರ್ದೇಶಕರು, ದ.ಕ. ಮತ್ತು ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆ

ಟಾಪ್ ನ್ಯೂಸ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?

Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?

Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್‌

Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್‌

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

Tannirbhavi: ಜ. 11, 12ರ ಬೀಚ್‌ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ

Tannirbhavi: ಜ. 11, 12ರ ಬೀಚ್‌ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ

Mangaluru ಎಚ್‌ಎಂಪಿ ವೈರಸ್‌; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ

Mangaluru ಎಚ್‌ಎಂಪಿ ವೈರಸ್‌; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.