ದೀಪಕ್ ಸುಪಾರಿ ಹತ್ಯೆ ಶಂಕೆ: ಹರೀಶ್
Team Udayavani, Jan 9, 2018, 9:36 AM IST
ಮಂಗಳೂರು: ದೀಪಕ್ ರಾವ್ ಹತ್ಯೆ ಪ್ರಕರಣವು ಸುಪಾರಿ ಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಶಂಕೆ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ.
ದೀಪಕ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡ ಇರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೃಶ್ಯ ಮಾಧ್ಯಮಗಳ ಮುಖಾಂತರ ಈಗಾಗಲೇ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರು ವಿನಾ ಕಾರಣ ಇಂತಹ ಹೇಳಿಕೆ ನೀಡಲಾರರು. ಈ ಹತ್ಯೆಯ ಹಿಂದೆ ಕೋಮು ವೈಷಮ್ಯ ಕಂಡುಬರುತ್ತಿಲ್ಲ ಎಂದರು.
ದೀಪಕ್ ಹತ್ಯೆಗೆ ಪ್ರತಿಯಾಗಿ ಬಶೀರ್ ಅವರನ್ನೂ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ಅಮಾಯಕರ ಹತ್ಯೆ ನಡೆದಿರುವುದು ಖಂಡನೀಯ. ತನ್ನ ಸಹೋದರನ ಸಾವಿನ ನಡುವೆಯೂ ಬಶೀರ್ ಸಹೋದರ ಹಕೀಂ ನಡೆದುಕೊಂಡ ರೀತಿ ಮತ್ತು ಶಾಂತಿ ಸೌಹಾರ್ದ ಕಾಪಾಡಿಕೊಳ್ಳಲು ಮಾಡಿದ ಮನವಿ ಶ್ಲಾಘನೀಯ ಎಂದರು. ಎರಡೂ ಕುಟುಂಬಗಳಿಗೆ ಮುಖ್ಯಮಂತ್ರಿಯವರು ರವಿವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕುಟುಂಬದ ಓರ್ವರಿಗೆ ಉದ್ಯೋಗ ಭರವಸೆಯನ್ನೂ ನೀಡಿದ್ದಾರೆ ಎಂದವರು ಇದೇ ವೇಳೆ ತಿಳಿಸಿದರು.
ಮುಖಂಡರಾದ ಧನಂಜಯ ಅಡ³ಂಗಾಯ, ವೆಂಕಪ್ಪ ಗೌಡ, ಟಿ. ಎಂ. ಶಹೀದ್, ಬಿ.ಎ. ಮಹಮ್ಮದ್ ಹನೀಫ್, ಸಂತೋಷ್ ಶೆಟ್ಟಿ, ಸದಾಶಿವ ಉಳ್ಳಾಲ, ಜಯಪ್ರಕಾಶ್ ರೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.