ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ: ಅಭಯಚಂದ್ರ


Team Udayavani, Jul 27, 2017, 8:45 AM IST

sarkari-yojane.jpg

ಮೂಲ್ಕಿ: ಬಡವರ ಮನೆಗೆ ಸರಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಆಗಬೇಕಾಗಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್‌ ಹೇಳಿದರು.
ಅವರು ಬುಧವಾರ ಮೂಲ್ಕಿಯ ನಗರ ಪಂಚಾಯತ್‌ನ ಸಮುದಾಯ ಭವನದಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರ ಹಿತಕ್ಕಾಗಿ ಸರಕಾರ ನೀಡುವ ಸವಲತ್ತು ಮತ್ತು ಕೆಲಸಕಾರ್ಯಗಳನ್ನು ಜನಸಂಪರ್ಕ ಸಭೆಯ ಮೂಲಕ ತಿಳಿಸಲಾಗುವುದು. ಇದರ ಸದುಪಯೋಗ ವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸರಕಾರ ನೀಡುವ ಸವಲತ್ತುಗಳು ಮತ್ತು ಬದಲಾವಣೆಯ ಸೇವಾ ವಿವರವನ್ನು ಅಧಿಕಾರಿಗಳು ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ. ತಮಗೆ ಬೇಕಾದ ಎಲ್ಲ ಅಡೆತಡೆಗಳಿಗೆ ಪರಿಹಾರ ಒದಗಿಸುವಲ್ಲಿ ತಮ್ಮಿಂದ ಆಗಬೇಕಾದ ಸಹಕಾರವನ್ನು  ಜಿಲ್ಲಾಡಳಿತ ಮತ್ತು ಸರಕಾರದಿಂದ ಕೊಡಿಸುವ ಭರವಸೆ ನೀಡಿದರು.

ಅಕ್ರಮ ಸಕ್ರಮ ಮಂಜೂರು ಮಾಡಲು ಸೂಚನೆ
94 ಸಿಸಿ ಅರ್ಜಿಯನ್ನು ಪರಿಶೀಲಿಸಿ ಪ್ರಸಕ್ತ ಸಾಲಿನಲ್ಲಿ ಆ ಮನೆಯಲ್ಲಿ ವಾಸ ಇರುವವರಿಗೆ ಮನೆಯನ್ನು ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದ ಶಾಸಕರು, ಈ ಮನೆ ಅರ್ಹರ ವಾಸಕ್ಕಾಗಿ. ಬಾಡಿಗೆಗೆ ಅಥವಾ ಮಾರಾಟ ಮಾಡಲು ಅಲ್ಲ ಎಂದು ಸ್ಪಷ್ಟ ಪಡಿಸಿದರು

ಗೊಂದಲ ಪರಿಹರಿಸಿ
ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ  ಕಸ್ತೂರಿ ಪಂಜ ಮಾತನಾಡಿ, ಸರ್ವೆ ಕಾರ್ಯದ ಬಗ್ಗೆ ಕಂದಾಯ ಇಲಾಖೆಯಿಂದ ಕೆಲವೊಂದು ಗೊಂದಲವಿದೆ. ಇದನ್ನು ತಹಶೀಲ್ದಾರರು ಸ್ಪಷ್ಟ ಪಡಿಸಿ ಸರ್ವೆಗಾಗಿ ಯಾರೂ ಯಾವುದೇ  ಪಾವತಿಯನ್ನು ಮಾಡು ವಂತಿಲ್ಲ ಎಂದು ಸ್ಪಷ್ಟಪಡಿಸಿದರು. 

ಪಡುಪಣಂಬೂರು ಗ್ರಾ.ಪಂ. ಪ್ರದೇಶದ ಕೆರೆಕಾಡಿನಲ್ಲಿ ಸರ್ವೆಯ ಕೆಲಸಕ್ಕೆ ಹೋದರೆ ಸರ್ವೆಯರ್‌ ಇಲ್ಲ ಎಂಬ ಉತ್ತರ ಬರುತ್ತದೆ ಎಂದಾಗ ಉತ್ತರಿಸಿದ ತಹಶೀಲ್ದಾರ್‌, ಸದ್ಯ 94 ಸಿಸಿ ಅಕ್ರಮ ಸಕ್ರಮ ಕಾನೂನು ಅಡಿಯ ಅರ್ಜಿಗಳ ನಿವೇಶನಗಳ ಸರ್ವೆಗಾಗಿ ಎಲ್ಲ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನಿರ್ದೇ ಶನದಂತೆ ಕೆಲಸ ಮಾಡುತ್ತಿರುವುದರಿಂದ ಬೇರೆ ಸರ್ವೆ ಕಾರ್ಯ ಸದ್ಯಕ್ಕೆ ಕಷ್ಟವಾಗಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆಯ ಕೆಲಸ ಕಾರ್ಯ ಗಳಿಗೆ ಹೋಗುವ ಸಾರ್ವಜನಿಕರಿಗೆ ಇಲಾಖೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬ ದೂರಿಗೆ ಪ್ರತಿಕ್ರಿಯಿಸಿದ  ತಹಶೀಲ್ದಾರ್‌ ಕಿಶೋರ್‌ ಕುಮಾರ್‌, ಈ ಬಗ್ಗೆ ಸೂಕ್ತವಾದ ದಾಖಲೆಯೊಂದಿಗೆ ಮಾಹಿತಿ ನೀಡಿದರೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ನಾಡು ಸದಾಶಿವ ರಾವ್‌ ನಗರದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಉಂಟಾಗಿರುವ ಸಮಸ್ಯೆ ಹಾಗೂ ಚಿತ್ರಾಪು ವಿದ್ಯುತ್‌ ದಾರಿದೀಪ ಕಂಬಗಳ ಲೈನ್‌ ನೆಲಕ್ಕೆ ಬಿದ್ದಿ ರುವ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ  ಐತಾಳ್‌, ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಟೈಸನ್‌ ಕೋಳಿ ಮನುಷ್ಯರು ತಿನ್ನಲು ಅರ್ಹವೇ ಎಂದು ಪತ್ರಕರ್ತ ಎಚ್‌.ಕೆ. ಹೆಜಮಾಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಗಳೂರು ತಾಲೂಕು ಆರೋಗ್ಯ ಅಧಿ ಕಾರಿ ಡಾ| ನವೀನ್‌ ಚಂದ್ರ, ಟೈಸನ್‌ ಕೋಳಿಯನ್ನು ಹೊರ ಪ್ರದೇಶದಿಂದ ತರ ಲಾಗುತ್ತಿದೆ. ಇಲ್ಲಿ ಎಲ್ಲೂ ಸಾಕಣೆ ಇಲ್ಲ. ಆದರೆ ಇದನ್ನು ಬಳಕೆ ಮಾಡುವಂತಿಲ್ಲ ಎಂಬುವುದಕ್ಕೆ ಈವರೆಗೆ ಯಾವುದೇ ನಿಖರವಾದ ದಾಖಲೆ ಸಿಕ್ಕಿಲ್ಲ ಎಂದರು.

ರೇಶನ್‌ ವಿವರ ಮೊಬೈಲ್‌ನಲ್ಲಿ
ಬಿಪಿಎಲ್‌ ಕಾರ್ಡ್‌ಗೆ  ಈ ಹಿಂದೆ ಅರ್ಜಿ ಸಲ್ಲಿಸಿದವರು ಅದು ಬಾರದೆ ಇದ್ದರೆ ಮತ್ತೆ ಹೊಸ ಅರ್ಜಿಯನ್ನು ಸಲ್ಲಿಸುವಂತೆ ಅಹಾರ ಇಲಾಖೆಯ ಉಪ ತಹಶೀಲ್ದಾರ್‌ ವಾಸು ಶೆಟ್ಟಿ ತಿಳಿಸಿದರು. ರೇಶನ್‌ ಕಾರ್ಡ್‌ ಇರುವವರು ತಮ್ಮ ಪಡಿತರ ಸಾಮಗ್ರಿಗಳು ಬಿಡುಗಡೆಯಾದ ಕೂಡಲೇ ಮಾಹಿತಿ ಪಡೆಯುವುದಕ್ಕಾಗಿ ತಮ್ಮ ಮೊಬೈಲ್‌ ಸಂಖ್ಯೆಯನ್ನು  ಅಪ್‌ಡೇಟ್‌ ಮಾಡುವಂತೆ ತಿಳಿಸಿದರು.

ಮತದಾರ ಪಟ್ಟಿ ಪರಿಷ್ಕರಣೆ
ಮತದಾರ ಪಟ್ಟಿ ಪರಿಷ್ಕರಣೆಯ ಕೆಲಸ ಆರಂಭವಾಗಿದ್ದು 21 ವರ್ಷ ದಾಟಿರುವ ವರು ಡಿಕ್ಲೇರೇಶನ್‌ ಮೂಲಕ ದೃಢೀಕರಣ ಮಾಡುವುದು ಅಗತ್ಯ. ವಯಸ್ಸು ದೃಢೀ ಕರಣವನ್ನು ಮನೆಯ ಯಜಮಾನ ದಾಖಲಿಸಿದರೆ ಎಲ್ಲವೂ ಸುಲಭ ಎಂದು ತಹಶೀಲ್ದಾರ್‌  ಹೇಳಿದರು.

ಬಡತನ ಮಾತ್ರ ಮಾನದಂಡ
ಬಿಪಿಎಲ್‌ ಕಾರ್ಡ್‌ ಒದಗಿಸುವ ನಿಟ್ಟಿನಲ್ಲಿ ಇತರ ದಾಖಲೆಗಳ ಬಗ್ಗೆ ಸರಳೀಕ‌ರಣ ಮಾಡಿದ್ದು,  ಬಡತನವೊಂದೇ ಇದಕ್ಕೆ ಮಾನ ದಂಡವಾಗಿದೆ ಎಂದು ತಿಳಿಸಿದ ಶಾಸಕ ಅಭಯಚಂದ್ರ, ಅರ್ಹರನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.

ತಹಶೀಲ್ದಾರ್‌ ಕಿಶೋರ್‌ ಕುಮಾರ್‌ ಸ್ವಾಗತಿಸಿದರು. ಗ್ರಾಮ ಲೆಕ್ಕಾಧಿಕಾರಿ  ಮಂಜುನಾಥ್‌ ವಂದಿಸಿದರು. ಮೂಲ್ಕಿ ನ.ಪಂ. ಅಧ್ಯಕ್ಷ ಸುನೀಲ್‌ ಆಳ್ವ, ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಎ.ಪಿ.ಎಂ.ಸಿ. ಅಧ್ಯಕ್ಷ ಪ್ರಮೋದ್‌ ಕುಮಾರ್‌, ಮುಡಾ ಸದಸ್ಯ ವಸಂತ್‌ ಬೆರ್ನಾರ್ಡ್‌, ತಾ.ಪಂ. ಸದಸ್ಯರಾದ ಶರತ್‌ ಕುಬೆವೂರು, ಶುಭಲತಾ ಶೆಟ್ಟಿ, ರಶ್ಮಿ ಆಚಾರ್ಯ, ಕಟೀಲು ಪಂಚಾಯತ್‌ ಅಧ್ಯಕ್ಷೆ ಗೀತಾ, ಅತಿಕಾರಿಬೆಟ್ಟು ಪಂ. ಅಧ್ಯಕ್ಷೆ ಶಾರದಾ ವಸಂತ್‌, ಹಳೆಯಂಗಡಿ ಪಂ. ಅಧ್ಯಕ್ಷೆ ಜಲಜಾ, ಕಿಲ್ಪಾಡಿ ಪಂ. ಅಧ್ಯಕ್ಷ ಶ್ರೀಕಾಂತ ರಾವ್‌, ಕಿನ್ನಿಗೋಳಿ ಪಂ. ಅಧ್ಯಕ್ಷೆ ಫಿಲೋಮಿನಾ ಲೋಬೋ, ಮೂಲ್ಕಿ ನ.ಪಂ. ಮುಖ್ಯಾಧಿಕಾರಿ ಇಂದು ಎಂ., ಕಂದಾಯ ನಿರೀಕ್ಷಕ ದಿಲೀಪ್‌ ರೋಡ್ಕರ್‌ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.