ಅಳದಂಗಡಿ: ಈಡೇರದ ಸುಸಜ್ಜಿತ ಬಸ್ ತಂಗುದಾಣ ಬೇಡಿಕೆ
ಸಾಕಷ್ಟು ಸ್ಥಳಾವಕಾಶ ಇದ್ದರೂ ಅಭಿವೃದ್ಧಿಗೆ ಮೀನಮೇಷ
Team Udayavani, Jul 15, 2019, 5:34 AM IST
ವಿಶಾಲ ಸ್ಥಳಾವಕಾಶವಿರುವ ಅಳದಂಗಡಿ ಬಸ್‌ನಿಲ್ದಾಣ ಪ್ರದೇಶ.
ವೇಣೂರು: ಅಳದಂಗಡಿ ಬಸ್ ನಿಲ್ದಾಣ ಪ್ರದೇಶ ಅತ್ಯಂತ ವಿಶಾಲ ವಾಗಿದ್ದರೂ ಇಲ್ಲೊಂದು ವಿಶಾಲವಾದ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣ ಆಗಬೇಕೆಂಬ ಜನತೆಯ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ.
ಗುರುವಾಯನಕೆರೆಯಿಂದ ಅಳ ದಂಗಡಿ ಜಂಕ್ಷನ್ ಆಗಿ ನಾರಾವಿ, ಮೂಡುಬಿದಿರೆ, ಕಾರ್ಕಳಕ್ಕೆ ಸಾಕಷ್ಟು ಬಸ್‌ಗಳು ಓಡಾಡುತ್ತವೆ. ಇದರಲ್ಲಿ ಗುರುವಾಯನಕೆರೆಯಿಂದ ನಾರಾವಿ ಕಡೆಗೆ ತೆರಳುವ ಬಸ್‌ಗಳು ಅಳದಂಗಡಿ ನಿಲ್ದಾಣದ ಒಳಗೆ ಬಂದು ಹೋಗುತ್ತವೆ. ಆದರೆ ನಾರಾವಿ ಕಡೆಯಿಂದ ಬರುವ ಬಸ್‌ಗಳು ಅಳದಂಗಡಿ ಹೆದ್ದಾರಿಯಲ್ಲೇ ನಿಲ್ಲಿಸಿ ಮುಂದೆ ಚಲಿಸುತ್ತವೆ. ಇಲ್ಲಿರುವ ಎರಡೂ ನಿಲ್ದಾಣಗಳು ಬಹಳ ಕಿರಿದಾ ಗಿದ್ದು, ಮಳೆಗಾಲದಲ್ಲಿ ಕೊಡೆ ಬಿಡಿಸಿ ಕೊಂಡೇ ನಿಲ್ಲಬೇಕಾಗುತ್ತದೆ. ಅಳದಂಗಡಿ ಮಾರ್ಗವಾಗಿ ಹೆದ್ದಾರಿ ಯಲ್ಲಿ ಚಲಿಸುವ ಎಲ್ಲ ಖಾಸಗಿ ಬಸ್‌ಗಳು ನಿಲ್ದಾಣದ ಒಳಗೆ ಬಂದು ನಿರ್ಗಮನ ಆಗಬೇಕೆನ್ನುವುದು ಜನರ ಬೇಡಿಕೆ ಯಾಗಿತ್ತು. ಇದಕ್ಕಾಗಿ ಒಂದು ವಿಶಾಲವಾದ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣ ಆಗಬೇಕೆನ್ನುವುದು ಜನರ ಬೇಡಿಕೆ.
ಪತ್ರಿಕೆ ಗಮನ ಸೆಳೆದಿತ್ತು
ವಿಶಾಲವಾದ ಸುಸಜ್ಜಿತ ಬಸ್ ತಂಗು ದಾಣ ಬೇಡಿಕೆ ಬಗ್ಗೆ ಉದಯವಾಣಿ ಸುದಿನ “ಜಂಕ್ಷನ್ ಕಥಾ’ ಸರಣಿ ಲೇಖನದಲ್ಲಿ “ಸುಸಜ್ಜಿತ ಬಸ್ ತಂಗುದಾಣವೇ ಇಲ್ಲಿನ ಪ್ರಥಮ ಆದ್ಯತೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಲ್ಲಿ ದಾರಿದೀಪ ಬೇಡಿಕೆಯನ್ನು ಪಂ. ಈಡೇರಿಸಿದೆ. ಆದರೆ ಸುಸಜ್ಜಿತ ತಂಗುದಾಣ ಬೇಡಿಕೆ ಈಡೇರಿಲ್ಲ.
ಅಪಘಾತ ವಲಯ
ಅಳದಂಗಡಿಯಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಹಲವು ಅಪಘಾತಗಳು ಸಂಭವಿ ಸಿದ್ದು, ಜೀವ ಹಾನಿಯಾಗಿದೆ. ಹೀಗಾಗಿ ನಗರ ಭಾಗದ 200 ಮೀಟರ್‌ನಷ್ಟು ಹೆದ್ದಾರಿ ದ್ವಿಪಥಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಸಿಸಿ ಕೆಮರಾ ಅಳವಡಿಸಿ
ಕಳೆದೊಂದು ವರ್ಷಗಳಿಂದ ಅಳದಂಗಡಿ ನಗರದಲ್ಲಿ ಹಲವು ಅಂಗಡಿಗಳಲ್ಲಿ ಕಳ್ಳತನ ಪ್ರಕರಣಗಳು ಸಂಭವಿಸಿದ್ದು, ಕಳ್ಳರ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಗೋವು ಕಳ್ಳತನ ಪ್ರಕರಣಗಳೂ ಸಂಭಸಿವೆ. ಅಳದಂಗಡಿ ಜಂಕ್ಷನ್‌ಗೆ ಸಿಸಿ ಕೆಮರಾ ಅಳವ ಡಿಸಬೇಕೆಂಬ ಆಗ್ರಹ ಸಾರ್ವ ಜನಿಕರಿಂದ ಕೇಳಿ ಬಂದಿದೆ.
ತಂಗುದಾಣ ನಿರ್ಮಾಣದ ಬೇಡಿಕೆ ಇದೆ
ಅಳದಂಗಡಿಯಲ್ಲಿ ವಿಶಾಲವಾದ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣದ ಬೇಡಿಕೆ ಇದೆ. ಆದರೆ ಇಲ್ಲಿ ಅಭಿವೃದ್ಧಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿದೆ. ಜಂಕ್ಷನ್‌ನಲ್ಲಿ ಇತ್ತೀಚೆಗೆ ದಾರಿದೀಪ ಅಳವಡಿಸಿದ್ದೇವೆ. ಶೀಘ್ರ ಸಿಸಿ ಕೆಮರಾ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ. ಅಳದಂಗಡಿ ಪೇಟೆಯಲ್ಲಿ ಬಸ್ ನಿಲ್ದಾಣವನ್ನು ಶಾಸಕ ಹರೀಶ್ ಪೂಂಜ ಅವರು ಕೆಎಂಎಫ್ ಅನುದಾನದಿಂದ ಹೆದ್ದಾರಿ ಬದಿಯ ಪಿಡಬ್ಲ್ಯೂ ಡಿಗೆ ಸೇರಿದ ಜಾಗದಲ್ಲಿ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಬಂದಿಲ್ಲ. ಆದರೆ ಪಂ.ನ ಓರ್ವ ಸದಸ್ಯರು ಆಕ್ಷೇಪ ಅರ್ಜಿ ಸಲ್ಲಿಸಿದ್ದು, ಸಾಮಾನ್ಯಸಭೆಯಲ್ಲಿ ನಿರ್ಣಯ ಮಾಡಿ ಪಿಡಬ್ಲ್ಯೂಡಿಗೆ ಕಳುಹಿಸಿಕೊಡಲಾಗಿದೆ.
– ಸತೀಶ್ ಕುಮಾರ್ ಮಿತ್ತಮಾರು
ಅಧ್ಯಕ್ಷರು, ಅಳದಂಗಡಿ ಗ್ರಾ.ಪಂ.
ಸಮಸ್ಯೆ ಬಗೆಹರಿದಿಲ್ಲ
ಅಳದಂಗಡಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಬಸ್ ಯಾವ ಕಡೆ ಬರುತ್ತೆ ಎನ್ನುವ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ರಾಜ್ಯಹೆದ್ದಾರಿ ಬದಿ ಯಲ್ಲೇ ನಿಲ್ದಾಣ ನಿರ್ಮಿಸಿ ಪ್ರಯಾಣಿಕರ ಜೀವಕ್ಕೆ ಕುತ್ತು ತರುವ ಪ್ರಯತ್ನ ಆಗುತ್ತಿದೆ. ಪಂ., ಮೇಲಧಿಕಾರಿಗಳು ಗಮನ ಹರಿಸುತ್ತಿಲ್ಲ.
– ಪಾರ್ಶ್ವನಾಥ ಹೆಗ್ಡೆ
ಅಳದಂಗಡಿ
- ಪದ್ಮನಾಭ ವೇಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.