ಪ್ರಣಾಳಿಕೆಯಲ್ಲಿ ಕರಾವಳಿಯ ರೈಲ್ವೇ ಸೌಕರ್ಯ ಸೇರ್ಪಡೆಗೆ ಆಗ್ರಹ
Team Udayavani, Apr 3, 2024, 12:54 AM IST
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಣಾಳಿಕೆಯಲ್ಲಿ ಈ ಭಾಗದ ರೈಲ್ವೇ ಮೂಲಸೌಕರ್ಯಗಳ ಅಭಿವೃದ್ಧಿ ವಿಷಯಗಳನ್ನು ಸೇರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಚುನಾವಣ ಸಮಿತಿಗೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯು ಮನವಿ ಸಲ್ಲಿಸಿದೆ.
ಮಂಗಳೂರು-ಉಡುಪಿ ನಗರಗಳ ಮಧ್ಯೆ ಮೆಟ್ರೋ ರೈಲ್ವೇ ನಿರ್ಮಾಣ ಮಾಡಬೇಕು. ಮಂಗಳೂರಿನಿಂದ ಬೆಂಗಳೂರಿಗೆ ಪರ್ಯಾಯ ರೈಲು ಮಾರ್ಗವಾದ ಮಂಗಳೂರು-ಹೊನ್ನಾವರ-ತಾಳಗುಪ್ಪ-ಶಿವಮೊಗ್ಗ ಹೊಸ ರೈಲು ಮಾರ್ಗವನ್ನು ನಿರ್ಮಿಸಬೇಕು. ಮಂಗಳೂರು-ತೋಕೂರು ರೈಲ್ವೇ ಭಾಗವನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ಪ್ರತ್ಯೇಕಿಸಿ ಮೈಸೂರು ರೈಲ್ವೇ ವಿಭಾಗಕ್ಕೆ ಸೇರಿಸುವ ಬಗ್ಗೆ ನಿತೀಶ್ ಕುಮಾರ್ ರೈಲ್ವೇ ಸಚಿವರಾಗಿದ್ದಾಗ ಘೋಷಿಸಿದ್ದರು. ಅನಂತರ ರೈಲ್ವೇ ಮಂಡಳಿಯು 2004ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶದ ಅನುಷ್ಠಾನ ಆಗಿಲ್ಲ. ಇದನ್ನು ಅನುಷ್ಠಾನಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೇ ಇಲಾಖೆಯೊಂದಿಗೆ ವಿಲೀನಗೊಳಿಸಬೇಕು. ಕೊಂಕಣ ರೈಲ್ವೆಯು ಶೇ. 40 ಹೆಚ್ಚುವರಿಯಾಗಿ ವಿಧಿಸುವ ಪ್ರಯಾಣ ದರವನ್ನು ರದ್ದುಗೊಳಿಸಬೇಕು ಹಾಗೂ ಹಾಲಿ ಎಕ್ಸ್‌ಪ್ರೆಸ್ ರೈಲು ದರದಲ್ಲಿ ಓಡಾಟ ನಡೆಸುತ್ತಿರುವ ಮಂಗಳೂರು-ಮಡ್‌ಗಾಂವ್ ಪ್ಯಾಸೆಂಜರ್ ಹಾಗೂ ಮೆಮು ರೈಲುಗಳನ್ನು ಪ್ಯಾಸೆಂಜರ್ ರೈಲುಗಳನ್ನಾಗಿ ಪರಿವರ್ತನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆ ಮಟ್ಟಕ್ಕೆ ಏರಿಸಲು ಕ್ರಮ, ಸುಬ್ರಹ್ಮಣ್ಯ, ಕಬಕ ಪುತ್ತೂರು, ಕಾಣಿಯೂರು, ಎಡಮಂಗಲ ಸುರತ್ಕಲ್ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಬೇಕು, ಮಂಗಳೂರು ಸೆಂಟ್ರಲ್-ಜಂಕ್ಷನ್ ರೈಲು ಮಾರ್ಗವನ್ನು ದ್ವಿಪಥಗೊಳಿಸಬೇಕು ಸಹಿತ ವಿವಿಧ ಬೇಡಿಕೆಯ ವಿಷಯವನ್ನು ಪ್ರಣಾಳಿಕೆಯಲ್ಲಿ ಸೇರಿಸುವಂತೆ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಉಭಯ ಪಕ್ಷಗಳನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.