‘ಪರಿಶಿಷ್ಟ ಜಾತಿಗೆ ಸೇರ್ಪಡೆಯ ಬೇಡಿಕೆ: ವಿಧಾನಸೌಧಕ್ಕೆ ಮುತ್ತಿಗೆ’
Team Udayavani, Nov 6, 2017, 11:57 AM IST
ಮೂಡಬಿದಿರೆ: ಪರಿಶಿಷ್ಟ ಜಾತಿಗೆ ಸೇರ್ಪಡೆಯ ವಿಚಾರದಲ್ಲಿ ಸರಕಾರ ಸೂಕ್ತವಾಗಿ ಸ್ಪಂದಿಸದೇ ಇದ್ದಲ್ಲಿ ನವೆಂಬರ್ ಕೊನೇ ವಾರದಲ್ಲಿ ಲಕ್ಷೋಪಲಕ್ಷ ಮಡಿವಾಳರನ್ನು ಒಗ್ಗೂಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಈ ಮುತ್ತಿಗೆ ಸಾಂಕೇತಿಕವಾಗಿರೋದಿಲ್ಲ, ಪ್ರಬಲವಾಗಿ, ಪರಿಣಾಮಕಾರಿಯಾಗಿರುತ್ತದೆ’ ಎಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ. ನಂಜಪ್ಪ ಎಚ್ಚರಿಸಿದರು.
ಮೂಡಬಿದಿರೆ ಮಡಿವಾಳರ ಸಂಘದ ದಶಮಾನೋತ್ಸವದ ಅಂಗವಾಗಿ ಪದ್ಮಾವತಿ ಕಲಾಮಂದಿರದಲ್ಲಿ ಏರ್ಪಡಿಸಲಾದ ಮಡಿವಾಳರ ಬೃಹತ್ ಸಮಾವೇಶದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನೆ
ಪದ್ಮಾವತಿ ಕಲಾಮಂದಿರದ ಮಡಿವಾಳ ಮಾಚಿದೇವ ಸಭಾಂಗಣ, ಬಸವೇಶ್ವರ ವೇದಿಕೆಯಲ್ಲಿ ಸಂಪನ್ನಗೊಂಡ ಸಮಾವೇಶವನ್ನು ಚಿತ್ರದುರ್ಗದ ಮಡಿವಾಳ ಗುರುಪೀಠದ ಶ್ರೀ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಉದ್ಘಾಟಿಸಿದರು. ಕರಿಂಜೆ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ಮುಕ್ತಾನಂದ ಸ್ವಾಮೀಜಿ ತಮ್ಮ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಪ್ರ. ಕಾರ್ಯದರ್ಶಿ ಬಿ. ರಂಗಸ್ವಾಮಯ್ಯ, ಮುಂಬೈ ರಜಕ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸರೋಜಿನಿ ಕುಂದರ್, ದ.ಕ. ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್., ಕಾಸರಗೋಡು ಜಿಲ್ಲಾ ಶ್ರೀ ರಜಕ ಸಂಘದ ಅಧ್ಯಕ್ಷ ಸಚ್ಚಿದಾನಂದ ಖಂಡೇರಿ, ಉದ್ಯಮಿಗಳಾದ ರಾಜೇಂದ್ರ ಕೊಟ್ಯಾನ್, ರತ್ನಾಕರ ಕುಂದರ್, ವಿಜಯಪುರದ ಉದ್ಯಮಿ, ಸೂರಜ್ ಸಾಲ್ಯಾನ್ , ವಿವಿಧ ತಾಲೂಕು ಸಂಘಗಳ ಅಧ್ಯಕ್ಷರಾದ ಸುರೇಶ್ ಮಡಿವಾಳ, ಎನ್. ಕೆ. ಶಿವ, ಹರೀಶ್ ಬೂಡುಪನ್ನೆ, ಜಯಂತ ಮಡಿವಾಳ ಮುಂಡಾಜೆ, ಜಯರಾಜ್ ಕೋಟೇಶ್ವರ, ಕಟೀಲು ಸಂಜೀವ ಮಡಿವಾಳ ಭಾಗವಹಿಸಿದ್ದರು.
ಮೂಡಬಿದಿರೆ ಸಂಘದ ಗೌರವ ಸಲಹೆಗಾರ ಶಿವರಾಮ ಕುಂದರ್, ಮಾಜಿ ಅಧ್ಯಕ್ಷ ಶ್ಯಾಮ ಮಡಿವಾಳ, ಹಾಲಿ ಅಧ್ಯಕ್ಷ ಗಣೇಶ ಟಿ. ಸಾಲ್ಯಾನ್, ಯುವ ಘಟಕದ ಅಧ್ಯಕ್ಷ ಪ್ರತೀಕ್ ಸಾಲ್ಯಾನ್ ವೇದಿಕೆಯಲ್ಲಿದ್ದರು. ಹರೀಶ್ ಬೂಡುಪನ್ನೆ, ಕಟೀಲು ಸಂಜೀವ ಮಡಿವಾಳ, ಸರೋಜಿನಿ ಕುಂದರ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮುಂಜಾನೆ ದೀಪ ಪ್ರಜ್ವಲನೆ, ಮಂಗಲವಾದ್ಯಗೋಷ್ಠಿ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಲಾಪ, ಮಧ್ಯಾಹ್ನ ಸಾಹಿತಿ ಸದಾನಂದ ನಾರಾವಿ ಅಧ್ಯಕ್ಷತೆಯಲ್ಲಿ ಸಮುದಾಯದ ಸಬಲೀಕರಣ ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್, ಕಾರ್ಕಳ ತಾ.ಪಂ. ಮಾಜಿ ಉಪಾಧ್ಯಕ್ಷ ರವೀಂದ್ರ ಕುಮಾರ್ ಹಾಗೂ ಸಾಣೂರು ಸತೀಶ ಸಾಲ್ಯಾನ್ ವಿಚಾರ ಮಂಡಿಸಿದರು. ಪ್ರೇಮಾ ವಿ. ಸಾಲ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಸಾಣೂರು ಸತೀಶ ಸಾಲ್ಯಾನ್ ಪ್ರಸ್ತಾವನೆಗೈದರು. ನವೀನ್ ಸಾಲ್ಯಾನ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.