ಮಂಗಳೂರು-ಬೆಂಗಳೂರು ಸೂಪರ್‌ಫಾಸ್ಟ್ ರೈಲಿಗೆ ಬೇಡಿಕೆ
ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ
Team Udayavani, Nov 2, 2022, 6:50 AM IST
ಸುರತ್ಕಲ್: ಕರಾವಳಿಯ ಉದ್ಯಮ ರಂಗದ ಬಲವರ್ಧನೆಗೆ ಮೂಲಸೌಕರ್ಯಗಳಲ್ಲಿ ಒಂದಾದ ಸೂಪರ್ ಫಾಸ್ಟ್ ರೈಲು ಬೇಕೆಂಬ ಆಗ್ರಹವು ಬುಧವಾರ ನಡೆಯಲಿರುವ ಹೂಡಿಕೆದಾರರ ಸಮಾವೇಶಕ್ಕೆ ಮುನ್ನ ಕರಾವಳಿಯ ಉದ್ಯಮಿಗಳಿಂದ ಕೇಳಿ ಬಂದಿದೆ.
ಕಳೆದ ಹಲವಾರು ವರ್ಷಗಳಿಂದ ಸುರಂಗ ಮಾರ್ಗದ ರಸ್ತೆ ಯೋಜನೆ ಕುಂಟುತ್ತಾ ಸಾಗಿರುವಾಗಲೇ ಇದೀಗ ದೇಶದ ಗಮನ ಸೆಳೆಯುತ್ತಿರುವ ವಂದೇ ಭಾರತ್‌ನಂತಹ ವೇಗದ ರೈಲಿನ ವ್ಯವಸ್ಥೆಯಾದರೂ ಮಾಡಿಕೊಡಿ ಎಂಬ ಆಗ್ರಹ ವ್ಯಕ್ತವಾಗುತ್ತಿದೆ.
ಅವಧಿ 4 ಗಂಟೆ ಕಡಿಮೆ
2021ರಲ್ಲಿ ಮೆಟ್ರೋಮ್ಯಾನ್ ಆಗಿರುವ ಡಾ| ಇ. ಶ್ರೀಧರನ್ ಅವರು ಶ್ರವಣಬೆಳಗೊಳ ಮಾರ್ಗವಾಗಿ ನೇರ ರೈಲು ಹಳಿ ಹಾಕಿದಲ್ಲಿ ಮಂಗಳೂರು – ಬೆಂಗಳೂರು ನಡುವೆ ಪ್ರಯಾಣದ ಅವಧಿ ಕನಿಷ್ಠ 4 ಗಂಟೆಗೆ ಇಳಿಸಲು ಸಾಧ್ಯವಿದೆ; ಇದಕ್ಕೆ ಧಾರಾಣ ಸಾಮರ್ಥ್ಯದ ಪರೀಕ್ಷೆಯಾಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ದ.ಕ. ಜಿಲ್ಲಾ ಸಿಐಐ ಅಧ್ಯಕ್ಷ ಜೀವನ್ ಸಲ್ಡಾನ್ಹಾ ಅವರಿಗೆ ಪತ್ರ ಬರೆದಿದ್ದರು.
ಮಂಗಳೂರು ಬಂದರು ರಾಜ್ಯದ ಹೆಬ್ಟಾಗಿಲಾಗಿದ್ದು, ಎಂಆರ್‌ಪಿಎಲ್, ಎಸ್‌ಇಝ್ಡ್, ರಾಜ್ಯದ 2ನೇ ಆತೀ ಬೈಕಂಪಾಡಿ, ಯೆಯ್ನಾಡಿ ಕೈಗಾರಿಕಾ ವಲಯಗಳು, ಉಡುಪಿ ಸಹಿತ ದೊಡ್ಡ, ಮಧ್ಯಮ ಮತ್ತು ಕಿರು ಉದ್ಯಮಗಳು ರಾಜ್ಯದ, ದೇಶದ ಆರ್ಥಿಕ ಶಕ್ತಿ ಕ್ಷೇತ್ರವಾಗಿದ್ದು, ಇದೀಗ ತಂತ್ರಜ್ಞಾನ ಅಗತ್ಯಗಳೊಂ ದಿಗೆ ವೇಗದ ಸಾಗಾಟ ವ್ಯವಸ್ಥೆಯನ್ನು ನಿರೀಕ್ಷೆ ಮಾಡುತ್ತಿವೆ. ಜತೆಗೆ ಪ್ರವಾಸೋ ದ್ಯಮದ ಬೆಳವಣಿಗೆಗೂ ಇದು ಪೂರಕವಾಗಲಿದೆ. ಸಿಆರ್‌ಝಡ್ ಸರಳೀಕರಣವಾ ಗಿರುವ ಜತೆಗೆ ಪ್ರವಾಸೋದ್ಯಮದ ಬೆಳವಣಿಗೆಗೂ ಉತ್ತಮ ಅವಕಾಶವಿರು ವುದರಿಂದ ಸೂಪರ್‌ಫಾಸ್ಟ್ ರೈಲು ವ್ಯವಸ್ಥೆ ನೀಡಿದಲ್ಲಿ ಉದ್ಯಮ ವಲಯ, ಪ್ರವಾಸೋದ್ಯಮ ಚೇತರಿಕೆಗೆ ಅವಕಾಶವಾಗ ಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಬೆಂಗಳೂರು ಶ್ರವಣಬೆಳಗೊಳ ಮೂಲಕ ಕರಾವಳಿಯನ್ನು ಸಂಪರ್ಕಿಸುವ ಸೂಪರ್‌ಫಾಸ್ಟ್ ರೈಲ್ವೆ ವ್ಯವಸ್ಥೆಗೆ ಕಳೆದ ಆರು ತಿಂಗಳ ಹಿಂದೆ ನಮ್ಮ ರಾಜ್ಯ ಸಿಐಐ ಚೇರ್ಮನ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಹೂಡಿಕೆ ಸಮಾವೇಶದಲ್ಲಿ ನಮ್ಮ ತಂಡವು ಪಾಲ್ಗೊಳ್ಳಲಿದ್ದು ಮೂಲಸೌಕರ್ಯ ಮತ್ತು ಕರಾವಳಿಗೆ ಸೂಪರ್‌ಫಾಸ್ಟ್ ರೈಲು ಅಗತ್ಯದ ಬಗ್ಗೆ ಮತ್ತೆ ಸ್ಥಳೀಯ ಕೇಂದ್ರ ಮತ್ತು ರಾಜ್ಯದ ಜನಪ್ರತಿನಿಧಿಗಳು, ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಿದ್ದೇವೆ. ಈ ಹಿಂದೆ ಡಾ.ಇ ಶೀÅಧರನ್ ಅವರು ಈ ಬಗ್ಗೆ ಸಕಾರಾತ್ಮಕವಾಗಿ ಸಾಧ್ಯ ಎಂಬುದು ಹೇಳಿದ್ದರು. ಈ ಕನಸು ನನಸಾದಲ್ಲಿ ಕರಾವಳಿ ಚಿತ್ರಣವೇ ಬದಲಾಗಲಿದೆ.
– ಜೀವನ್ ಸಲ್ಡಾನ್ಹ, ಸಿಐಐ ಚೇರ್ಮನ್ ದ.ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.