ಬಾರ್ ಸ್ಥಳಾಂತರಿಸುವ ಯತ್ನಕ್ಕೆ ತಡೆ ನೀಡಲು ಆಗ್ರಹ
Team Udayavani, Jul 3, 2017, 3:45 AM IST
ಮೂಲ್ಕಿ: ಸರಕಾರದ ಅನುದಾನವಿದ್ದರೆ ಕಾರ್ನಾಡು ಗ್ರಾಮದ ಕುದ್ಕ ಪಳ್ಳದ ಮಾತಾ ಅಮೃತಾನಂದಮಯಿ ನಗರದಲ್ಲಿ ನಿರ್ಮಿಸಲಾಗಿರುವ ಎಲ್ಲ ಮನೆಗಳನ್ನು ಕೆಡವಿ ಪುನರ್ ನಿರ್ಮಿಸುವುದು ಸೂಕ್ತ ಎಂದು ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಜರಗಿದ ಮೂಲ್ಕಿ ಪುರಸಭೆಯ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಲ್ಲಿನ ಮನೆಗಳು ಕುಸಿಯುವ ಭೀತಿಯಲ್ಲಿವೆ ಎಂಬ ವಿಷಯವನ್ನು ಮುಖ್ಯಾಧಿಕಾರಿ ಇಂದೂ ಎಂ. ಅವರು ಸಭೆಯ ಗಮನಕ್ಕೆ ತಂದಾಗ ಸಭೆಯು ಮೇಲಿನಂತೆ ಸ್ಪಂದಿಸಿತು.
ಕಾರ್ನಾಡ್‌ಗೆ ಬಾರ್ ಸ್ಥಳಾಂತರ ಸಲ್ಲದು
ಸುಪ್ರೀಂ ಕೋರ್ಟಿನ ಆದೇಶದಂತೆ ಹೆದ್ದಾರಿ ವ್ಯಾಪ್ತಿಯಲ್ಲಿ ಮುಚ್ಚಲಾದ ಕೆಲವು ಬಾರ್‌ಗಳನ್ನು ಕಾರ್ನಾಡು ಸದಾಶಿವ ರಾವ್ ನಗರದ ವ್ಯಾಪ್ತಿಗೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ತಡೆಯುವಂತೆ ಸ್ಥಳೀಯ ವಾರ್ಡ್ ಸದ ಸ್ಯೆ ವಿಮಲಾ ಪೂಜಾರಿ ಆಗ್ರಹಿಸಿದರು. ಇಲ್ಲಿಯ ವ್ಯಾಪ್ತಿಯಲ್ಲಿ ಈಗಿರುವ ಒಂದು ಬಾರ್‌ನಿಂದಲೇ ಮಹಿಳೆಯರಿಗೆ ರಸ್ತೆಯಲ್ಲಿ ನಡೆಯಲಾಗದಂತಾಗಿದೆ. ಇನ್ನೂ ಹಲವು ಬಾರ್‌ಗಳು ತಲೆಯೆತ್ತಿದರೆ ಸಮಸ್ಯೆ ಗಂಭೀರವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಒಂದು ವೇಳೆ ಪರವಾನಿಗೆ ಕೊಟ್ಟರೂ ಕುಡುಕರನ್ನು ಬಾರ್‌ನಿಂದ ನೇರವಾಗಿ ಮನೆಗೆ ಬಿಡುವ ವ್ಯವಸ್ಥೆ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ಬಾರ್ ಸ್ಥಳಾಂತರಕ್ಕೆ ಅನುಮತಿಗಾಗಿ ನಗರ ಪಂಚಾಯತ್‌ಗೆ ಈಗಾಗಲೇ ಎರಡು ಅರ್ಜಿಗಳು ಬಂದಿರುವುದನ್ನು ಸ್ಪಷ್ಟ ಪಡಿಸಿದರು. ಈ ಬಗೆ ಗಿನ ಸಾಧಕ ಬಾಧಕಗಳನ್ನು ಪರಾಮರ್ಶೆ ಮಾಡಿ ಮುಂದಿನ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗುವುದು ಎಂದರು.
ಖಾಲಿ ನಿವೇಶನ ಖಾತಾಕ್ಕೆ ಸಿಂಗಲ್ ಲೇಔಟ್ ಅನುಮತಿ ಕಡ್ಡಾಯ
ಖಾಲಿ ನಿವೇಶನಕ್ಕೆ ಖಾತಾ ಪಡೆಯುವ ಸಾರ್ವಜನಿಕರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ನಿವೇಶನ ಅನುಮತಿಯನ್ನು ಅಗತ್ಯವಾಗಿ ಪಡೆಯುವಂತೆ ಸರಕಾರ ಆದೇಶ ನೀಡಿರುವುದನ್ನು ಕಂದಾಯ ನಿರೀಕ್ಷಕ ಅಶೋಕ್ ಸಭೆಗೆ ತಿಳಿಸಿದರು.
ವಲಸಿಗರ ಮಾಹಿತಿ ಸಂಗ್ರಹಿಸಿ
ಮೂಲ್ಕಿ ನಗರದುದ್ದಕ್ಕೂ ಹೊರ ರಾಜ್ಯದ ವಲಸೆ ಕಾರ್ಮಿಕರು ತುಂಬಿದ್ದಾರೆ. ಅನಧಿಕೃತವಾಗಿ ಜನ ನಗರದಲ್ಲಿ ವಾಸವಿದ್ದಾರೆ. ಅವರ ಬಗ್ಗೆ ಮಾಹಿತಿ ಪಡೆದು ಪೊಲೀಸ್ ಇಲಾಖೆ ಕ್ರಮ ಜರಗಿಸದಿದ್ದರೆ ಮುಂದೆ ಅಪಾಯ ಎದುರಾಗುವ ಸಾಧ್ಯತೆಯೂ ಇದೆ ಎಂದು ಸದಸ್ಯ ಅಶೋಕ್ ಪೂಜಾರ್ ಸಭೆಗೆ ತಿಳಿಸಿದರು. ಮೂಲ್ಕಿ ಎಸ್.ಐ. ಸಾಂತಪ್ಪ ಇಲಾಖೆಯ ಜನಸೇ°ಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ, ಯಾವುದೇ ಅಹಿತಕರ ಘಟನೆ ಅಥವಾ ಚಟುವಟಿಕೆಗಳು ನಡೆದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರಿಗೆ ತಿಳಿಸಬೇಕು ಎಂದರು.
ಪೋಕರಿ ಹುಡುಗರ ಮೇಲೆ ನಿಗಾ
ಮೂಲ್ಕಿ ಬಪ್ಪನಾಡು ದೇಗುಲದ ಎದುರಿನ ಹೆದ್ದಾರಿ ತಿರುವಿನಲ್ಲಿ ಪೊಲೀಸ್ ನಿಯೋಜನೆ ಆಗಬೇಕು. ಇಲ್ಲಿ ಕಾಲೇಜು ವಿದ್ಯಾರ್ಥಿನಿಯರ ಗಮನ ಸೆಳೆಯಲು ಬೈಕ್ ಸ್ಟಂಟ್ ಮಾಡುವ ಬಗ್ಗೆ ಪೊಲೀಸರು ಗಮನ ಹರಿಸುವ ಅಗತ್ಯ ಇದೆ ಎಂದು ಸದಸ್ಯ ಉಮೇಶ್ ಮಾನಂಪಾಡಿ ಆಗ್ರಹಿಸಿದಾಗ, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಸ್.ಐ. ಸಾಂತಪ್ಪ ಭರವಸೆಯಿತ್ತರು.
ಮಟ್ಕಾ ದಂಧೆ
ಮೂಲ್ಕಿ ನಗರದುದ್ದಕ್ಕೂ ಮಟ್ಕಾ ಹಾವಳಿ ಮಿತಿ ಮೀರಿದ್ದು, ಇದರ ನಿಯಂತ್ರಣಕ್ಕೆ ಕ್ರಮ ಜರಗಿಸುವಂತೆ ಸದಸ್ಯ ಶೈಲೇಶ್ ಕುಮಾರ್ ಆಗ್ರಹಿಸಿದರು. ಇದಕ್ಕೆ ಸದಸ್ಯ ಪುರುಷೋತ್ತಮ ರಾವ್ ಮಾತನಾಡಿ ದನಿಗೂಡಿಸಿದರು.
ಮಕ್ಕಳಿಂದ ವಾಹನ ಚಾಲನೆ
ಪರಿಸರದಲ್ಲಿ ವಾಹನ ಅಪಘಾತಗಳು ಹೆಚ್ಚಾಗುತ್ತಿವೆ. ಜತೆಗೆ ಅಪ್ರಾಯಸ್ತ ವಯಸ್ಸಿನ ಮಕ್ಕಳು ಡಿ.ಎಲ್.ಇಲ್ಲದೆ ವಾಹನ ಚಲಾಯಿಸುವುದು ಕಂಡು ಬರುತ್ತಿದ್ದು, ಇದನ್ನು ತಡೆಯಬೇಕು ಎಂಬ ಆಗ್ರಹವೂ ಕೇಳಿ ಬಂತು.
ಶಾಲೆಯಲ್ಲಿ ಕಿಡಿಗೇಡಿಗಳು
ಕಾರ್ನಾಡು ಸದಾಶಿವ ರಾವ್ ನಗರ ಸರಕಾರಿ ಶಾಲೆಯ ಆವರಣ ಗೋಡೆ ಹಾರಿ ಒಳಗೆ ಬರುವ ಕಿಡಿಗೇಡಿಗಳು ಬಾಗಿಲು ಒಡೆದು, ಪೀಠೊಪಕರಣಗಳನ್ನು ಹಾಳುಗೆಡಹುವುದು, ಅಲ್ಲಿ ಗಾಂಜ ಮತ್ತು ಮದ್ಯ ಸೇವಿಸುವಂಥ ಕೆಲಸ ಮಾಡುತ್ತಿದ್ದಾರೆ ಎಂದು ಸದಸ್ಯ ಬಿ.ಎಂ.ಆಸೀಫ್ ಸಭೆಯ ಗಮನಕ್ಕೆ ತಂದಾಗ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ಸಿಕ್ಕಿತು. ನಗರ ಪಂಚಾಯತ್‌ಗೆ ಬರಬೇಕಾಗಿರುವ ತೆರಿಗೆ ವಸೂಲಿಗೆ ಕ್ರಮ ಜರಗಿಸಲು ಸಭೆ ನಿರ್ಧರಿಸಿತು..
ಬಸ್ಸು ನಿಲ್ದಾಣ ನಿವೇಶನ ಖರೀದಿಗೆ ಸಂಕಲ್ಪ
ಸರಕಾರದಿಂದ ಮಂಜೂರಾಗಿ ಬಂದಿರುವ ರೂ. 3 ಕೋಟಿ ಮೊತ್ತವನ್ನು ಬಳಸಿಕೊಂಡು ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಸುಮಾರು ಎರಡು ಕೋಟಿ ಮೊತ್ತವನ್ನು ವಿನಿಯೋಗಿಸಿ ಖರೀದಿ ಮಾಡಿ ಉಳಿದ ಒಂದು ಕೋಟಿ ರೂ. ಮೊತ್ತವನ್ನು ಕಟ್ಟಡ ನಿರ್ಮಾಣಕ್ಕೆ ಬಳಸುವುದಾಗಿ ನಗರ ಪಂಚಾಯತ್ ಅಧ್ಯಕ್ಷರು ಸಭೆಗೆ ತಿಳಿಸಿದರು.
ಮುಖ್ಯಾಧಿಕಾರಿ ಇಂದೂ ಎಂ. ಸ್ವಾಗತಿಸಿ ನಡವಳಿಕೆಯನ್ನು ದಾಖಲಿಸಿಕೊಂಡರು.ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌ನಗರ ಯೋಜನೆ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ, ಎಂಜಿನಿಯರ್ ಅಶ್ವಿನಿ,ಆರೋಗ್ಯ ಅಧಿಕಾರಿ ಲಿಲ್ಲಿ ನಾಯರ್ ಮಾಹಿತಿ ನೀಡಲು ಸಹ ಕರಿಸಿದರು.
ಮಲೇರಿಯಾ ಹೆಚ್ಚಲು ಸ್ವತ್ಛತೆ ನಿರ್ಲಕ್ಷ್ಯ ಕಾರಣ
ಮೂಲ್ಕಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಅಜಿತ್ ಶೆಟ್ಟಿ ಮಾತನಾಡಿ, ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆ.ಎಸ್.ರಾವ್ ನಗರದ ಬಿಜಾಪುರ ಕಾಲನಿಯ ವ್ಯಾಪ್ತಿಯಲ್ಲೇ ಸುಮಾರು 50ಕ್ಕೂ ಮಿಕ್ಕಿದ ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಅಲ್ಲಿ ಸ್ವತ್ಛತೆಗೆ ಹೆಚ್ಚಿನ ಮಹತ್ವ ನೀಡದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದರು. ಅಲ್ಲಿ ಒಂದು ಸಾವಿರಕ್ಕೂ ಮಿಕ್ಕಿದ ಸೊಳ್ಳೆ ಪರದೆ ವಿತರಿಸಲಾಗಿದೆ ಹಾಗೂ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ. ಆದರೆ ಜನರ ಸ್ಪಂದನೆ ಕಡಿಮೆ ಎಂದು ಅವರು ಹೇಳಿದಾಗ, ಈ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ನಡೆಸಲು ಸಭೆ ನಿರ್ಧರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.