ಉಳ್ಳಾಲ: ಡೆಂಗ್ಯುಗೆ ವಿದ್ಯಾರ್ಥಿನಿ ಬಲಿ
Team Udayavani, Apr 1, 2020, 2:15 PM IST
ಉಳ್ಳಾಲ: ಡೆಂಗ್ಯು ಜ್ವರಕ್ಕೆ ತುತ್ತಾದ ಉಳ್ಳಾಲ ಉಳಿಯ ನಿವಾಸಿ ವಿದ್ಯಾರ್ಥಿನಿ ಕಂಕನಾಡಿ ಫಾದರ್ ಮುಲ್ಲಸ್೯ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಕಿನ್ಯಾ ಮೀನಾದಿ ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ , ಉಳ್ಳಾಲ ಉಳಿಯ ನಿವಾಸಿ ಟೈಟಸ್ ಡಿಸೋಜ ಎಂಬವರ ಪುತ್ರಿ ಸ್ಟೆನಿಟಾ ಡಿಸೋಜ(15) ಮೃತ ವಿದ್ಯಾರ್ಥಿನಿ. ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯಾಗಿದ್ದ ಈಕೆ ಮಾ. 16 ಕ್ಕೆ ಅಸೌಖ್ಯಕ್ಕೆ ಒಳಗಾಗಿದ್ದಳು. ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಜ್ವರ ಉಲ್ಬಣಗೊಂಡಾಗ ಮಂಗಳೂರಿನ ಫಾದರ್ ಮುಲ್ಲಸ್೯ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಅಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿ ಎಂಟು ದಿನಗಳ ಕಾಲ ವೆಂಟಿಲೇಟರಿನಲ್ಲೇ ಇರಿಸಲಾಗಿತ್ತು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ವಿದ್ಯಾರ್ಥಿ ನಿ ತಾಯಿ ವಿದೇಶದಲ್ಲಿ ಕೆಲಸದಲ್ಲಿದ್ದು, ಫೆ.20 ಕ್ಕೆ ಊರಿಗೆ ಆಗಮಿಸಿದ್ದರು. ಶಿಕ್ಷಕ ಟೈಟಸ್ ಡಿಸೋಜ ದಂಪತಿಗೆ ಸ್ಟೆನಿಟಾ ಒಬ್ಬಳೇ ಪುತ್ರಿಯಾಗಿದ್ದಳು.
ಫಾದರ್ ಮುಲ್ಲಸ್೯ ಆಸ್ಪತ್ರೆಯಲ್ಲಿ ಡೆಂಗ್ಯು ಜ್ವರದಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದೆ. ಅಂತಿಮ ಸಂಸ್ಕಾರ ನಾಳೆ ಎ.2 ರಂದು ತೊಕ್ಕೊಟ್ಟು ವಿನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.