ಡೆಂಗ್ಯೂ: ಮತ್ತೆ 27 ಮಂದಿ ದಾಖಲು

Team Udayavani, Jul 26, 2019, 5:51 AM IST

dengu-1

ಮಂಗಳೂರು: ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರು ತಾಲೂಕಿನ 27 ಮಂದಿ ನಗರದ ವಿವಿಧ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಕಳೆದೊಂದು ವಾರದಲ್ಲಿ ದ.ಕ ಜಿಲ್ಲೆಯ 222 ಮಂದಿ ಡೆಂಗ್ಯೂ ಜ್ವರ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೆಲವರು ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

50 ಸಾವಿರ ದಂಡ ಸಂಗ್ರಹ
ಸೊಳ್ಳೆ ಉತ್ಪತ್ತಿಗೆ ಕಾರಣ ಆಗುವ‌ ನಿರ್ಮಾಣ ಹಂತದ ಕಟ್ಟಡ, ಇತರ ಕಟ್ಟಡ, ಮನೆ ಮತ್ತಿತರ ಸ್ಥಳ ಪರಿಶೀಲನೆ ಮುಂದುವರಿದಿದ್ದು, ಕೊಡಿಯಾಲ್‌ಬೈಲ್‌, ಮಣ್ಣಗುಡ್ಡೆ ಪ್ರದೇಶದಲ್ಲಿ ಕಟ್ಟಡ ಮಾಲಕರು, ಗುತ್ತಿಗೆದಾರರಿಗೆ ಗುರುವಾರ 50 ಸಾವಿರ ರೂ. ದಂಡ ವಿಧಿಸಲಾಗಿದೆ.

ಡೆಂಗ್ಯೂ, ಮಲೇರಿಯಾ ವಾಹಕ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗುವಂತೆ ನೀರು ನಿಲ್ಲುವ ಜಾಗಗಳನ್ನು ಸೃಷ್ಟಿಸುವ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡಗಳು, ಅಂಗಡಿ ಮುಂಗಟ್ಟುಗಳಿಗೆ ಉಡುಪಿಯಲ್ಲೂ ದಂಡ ವಿಧಿಸಲು ಅಧಿಕಾರಿಗಳು ಸಿವಿಕ್‌ ಬೈಲಾ ಜಾರಿಗೊಳಿಸಲು ಯೋಚಿಸಿದ್ದಾರೆ.

ಬೆಳ್ತಂಗಡಿ: ಜ್ವರ ಹೆಚ್ಚಳ
ಬೆಳ್ತಂಗಡಿ ತಾಲೂಕಿನಲ್ಲೂ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, 23 ಶಂಕಿತ ಎನ್‌ಎಸ್‌ 1 ಪ್ರಕರಣಗಳು ದಾಖಲಾಗಿ ವೆ. ಸಂಕೀರ್ಣ ಪ್ರಕರಣಗಳನ್ನು ಜಿಲ್ಲಾ ಸ್ಪತ್ರೆಗೆ ಕಳುಹಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ: 84 ಪ್ರಕರಣ
ಉಡುಪಿ: ಜಿಲ್ಲೆಯಲ್ಲಿ ಜು.25ರ ವರೆಗೆ ಒಟ್ಟು ಶಂಕಿತ 84 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಮಲ್ಪೆಯಲ್ಲಿ ಜು.25ರ ವರೆಗೆ 13 ಮಲೇರಿಯಾ ಪ್ರಕರಣಗಳು ದಾಖಲಾಗಿವೆ ಎಂಬುದಾಗಿ ವೈದ್ಯಾಧಿ ಕಾರಿಗಳು ಮಾಹಿತಿ ನೀಡಿದ್ದಾರೆ.

ಬಜಪೆ-ಮಳವೂರು: 4 ಶಂಕಿತ ಪ್ರಕರಣ
ಬಜಪೆ ಮತ್ತು ಮಳವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ಎರಡು ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಬಜಪೆ ಗ್ರಾ.ಪಂ.ನ ತಾರಿಕಂಬಳ, ಪದ್ಮಾವತಿ ಗಾರ್ಡ್‌ನ್‌ ಪ್ರದೇಶದಲ್ಲಿ ತಲಾ ಒಂದು, ಮಳವೂರು ಗ್ರಾ.ಪಂ.ನ ಜರಿನಗರ ಪ್ರದೇಶದಲ್ಲಿ 2ಪ್ರಕರಣಗಳು ಪತ್ತೆಯಾಗಿವೆ.

ಮಳವೂರು ಗ್ರಾ. ಪಂ. ವ್ಯಾಪ್ತಿಯ ಜರಿನಗರದ ಒಂದೇ ಮನೆಯಲ್ಲಿ ಎರಡು ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾದ ಕಾರಣ ಬೊಂದೇಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆ ಪ್ರದೇಶದ 16 ಮನೆಗಳಿಗೆ ಫಾಗಿಂಗ್‌ ಮಾಡಲಾಗಿದೆ. ಈಗಾಗಲೇ ಪ್ರತಿದಿನ ಸರ್ವೆ ಕಾರ್ಯ ನಡೆಯುತ್ತಿದೆ.

ಟಾಪ್ ನ್ಯೂಸ್

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

war alert in sweden and finland

ಯುದ್ಧ ಸನ್ನದ್ಧರಾಗಿ: ನಾಗರಿಕರಿಗೆ ಸ್ವೀಡನ್‌, ಫಿನ್‌ ಲ್ಯಾಂಡ್‌ ಎಚ್ಚರಿಕೆ!

BIMS: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ: ಕುಟುಂಬಿಕರ ಪ್ರತಿಭಟನೆ

BIMS: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ: ಕುಟುಂಬಿಕರ ಪ್ರತಿಭಟನೆ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯKarnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Brahmavar

Mangaluru: ಕಾರು ಢಿಕ್ಕಿ; ಕಾರ್ಮಿಕ ಮೃತ್ಯು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

9

Mangaluru: ಬೊಂದೇಲ್‌-ಕಾವೂರು ರಸ್ತೆಯಲ್ಲಿಲ್ಲ ಫುಟ್‌ಪಾತ್‌

5

Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

war alert in sweden and finland

ಯುದ್ಧ ಸನ್ನದ್ಧರಾಗಿ: ನಾಗರಿಕರಿಗೆ ಸ್ವೀಡನ್‌, ಫಿನ್‌ ಲ್ಯಾಂಡ್‌ ಎಚ್ಚರಿಕೆ!

BIMS: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ: ಕುಟುಂಬಿಕರ ಪ್ರತಿಭಟನೆ

BIMS: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ: ಕುಟುಂಬಿಕರ ಪ್ರತಿಭಟನೆ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯKarnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.