Dengue ಏರಿಕೆ; ರಕ್ತಕ್ಕೆ ಬೇಡಿಕೆ!: ಪ್ಲೇಟ್‌ಲೆಟ್‌ ಕೊರತೆ


Team Udayavani, Jul 23, 2024, 6:15 AM IST

Dengue

ಮಂಗಳೂರು: ಡೆಂಗ್ಯೂ ಪ್ರಕರಣಗಳ ಜತೆಗೆ ಕರಾವಳಿಯಲ್ಲಿ ರಕ್ತಕ್ಕೂ ಬೇಡಿಕೆ ಹೆಚ್ಚುತ್ತಿದೆ. ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್‌ ಕುಸಿತ ಪ್ರಮುಖ ಸಮಸ್ಯೆ ಯಾಗಿದ್ದು, ಅಗತ್ಯವಿರುವಷ್ಟು ರಕ್ತ ಲಭ್ಯವಾಗುತ್ತಿಲ್ಲ.

ದಕ್ಷಿಣ ಕನ್ನಡದಲ್ಲಿ 2017-18ರಲ್ಲಿ ಡೆಂಗ್ಯೂ ಹೆಚ್ಚಾಗಿದ್ದಾಗ 14,590 ಯುನಿಟ್‌ ರಕ್ತ ಬಳಕೆ ಯಾಗಿತ್ತು. ಕೋವಿಡ್‌ ಸಂದರ್ಭ 2020-21ರಲ್ಲಿ 23,193 ಯುನಿಟ್‌, 2021-22ರಲ್ಲಿ 27,370 ಯುನಿಟ್‌ ಪ್ಲಾಸ್ಮಾ ಬಳಕೆಯಾಗಿತ್ತು. ಈ ವರ್ಷ ಜೂನ್‌ ತಿಂಗಳಲ್ಲಿ ರೆಡ್‌ಕ್ರಾಸ್‌ ಮೂಲಕ 155 ಯುನಿಟ್‌ ಪ್ಲೇಟ್‌ಲೆಟ್‌ಗಳನ್ನು ಪೂರೈಸಲಾಗಿದೆ.

ತುಲನಾತ್ಮಕವಾಗಿ ಈ ವರ್ಷ ರಕ್ತದ ಬೇಡಿಕೆ ಹೆಚ್ಚಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲೂ ನಿರೀಕ್ಷೆ ಯಷ್ಟು ರಕ್ತ ಸಿಗುತ್ತಿಲ್ಲ. ಪ್ಲೇಟ್‌ಲೆಟ್‌ಗಳನ್ನು 5 ದಿನ ಮಾತ್ರ ಸಂಗ್ರಹಿಸಿ ಇಡಲು ಸಾಧ್ಯ.

ಅಲ್ಲದೆ ಸಿಂಗಲ್‌ ಪ್ಲೇಟ್‌ಲೆಟ್‌ ದಾನಿಗಳಿಂದ ಸಂಗ್ರಹಿ ಸುವುದು ದುಬಾರಿಯಾಗುವ ಕಾರಣ ತುರ್ತು ಅಗತ್ಯದ ಸಂದರ್ಭದಲ್ಲಿ ಮಾತ್ರವೇ ಅಂತಹ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬ್ಲಿಡ್‌ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ರಕ್ತದ ಆವಶ್ಯಕತೆ
ಗ್ರಾಮಾಂತರ ಭಾಗಗಳಲ್ಲಿ ಹಾಗೂ ತಾಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಹಂತದಲ್ಲಿ ಮಂಗಳೂರಿಗೆ ಆಗಮಿಸುವುದು ಸಾಮಾನ್ಯ. ಈ ನಡುವೆ ಮಂಗಳೂರಿನ ಆಸ್ಪತ್ರೆಗಳಿಗೆ ದಕ್ಷಿಣ ಕನ್ನಡ ಮಾತ್ರವಲ್ಲದೆ ಮೈಸೂರು, ಹಾಸನ, ಕೊಡಗು ಸಹಿತ ಇತರ ಜಿಲ್ಲೆಗಳಿಂದಲೂ ರೋಗಿಗಳು ಆಗಮಿಸುತ್ತಿದ್ದಾರೆ. ಕೇರಳದಿಂದ ಹೆಚ್ಚಿನ ರೋಗಿಗಳು ಬರುತ್ತಿದ್ದಾರೆ. ಅಪಘಾತ, ಹೆರಿಗೆ, ವಿವಿಧ ಶಸ್ತ್ರಚಿಕಿತ್ಸೆ, ವಿವಿಧ ರೀತಿಯ ಗಂಭೀರ ಕಾಯಿಲೆಗಳಿಂದ ಬಳಲುವವರಿಗೂ ರಕ್ತದ ಅಗತ್ಯ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೆಎಂಸಿ ಬ್ಲಿಡ್‌ ಸೆಂಟರ್‌ನ ವೈದ್ಯಾಧಿಕಾರಿ ಡಾ| ದೀಪಾ ಅಡಿಗ ಮನವಿ ಮಾಡಿದ್ದಾರೆ.

ಚುನಾವಣೆ ಬಳಿಕವೂ ನೀಗದ ರಕ್ತದ ಕೊರತೆ
ಈ ಹಿಂದೆ ಲೋಕಸಭಾ ಚುನಾವಣೆಯ ಕಾರ್ಯಗಳಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಂಡ ಕಾರಣ ಜನವರಿಯಿಂದ ಮಾರ್ಚ್‌ ತಿಂಗಳವರೆಗೆ ದಾನಿಗಳ ಕೊರತೆಯಾಗಿತ್ತು. ಚುನಾವಣೆ ಬಳಿಕ ರಕ್ತದ ಕೊರತೆ ನೀಗಬಹುದು ಎನ್ನುವ ಲೆಕ್ಕಾಚಾರವಿತ್ತು. ಆದರೆ ಅದರ ಬೆನ್ನಲ್ಲೇ ಡೆಂಗ್ಯೂ ಸಹಿತ ಇತರ ಕಾಯಿಲೆಗಳ ಕಾರಣದಿಂದ ರಕ್ತಕ್ಕೆ ವಿಪರೀತ ಬೇಡಿಕೆ ಎದುರಾಗಿದೆ.

ರಕ್ತದಾನದಿಂದ ಜೀವ ಉಳಿಸಿ
ರೋಗಿಗೆ ತತ್‌ಕ್ಷಣಕ್ಕೆ ರಕ್ತ ಬೇಕಾಗಿರುವ ಸಂದರ್ಭ ಆರೋಗ್ಯವಂತರಾಗಿರುವ ಕುಟುಂಬ ಸದಸ್ಯರು ರಕ್ತ ನೀಡಲು ಮುಂದೆ ಬರಬೇಕು. ಅನೇಕ ಸಂದರ್ಭಗಳಲ್ಲಿ ರೋಗಿಗಳ ಜತೆ ಇರುವವರು ರಕ್ತ ನೀಡಲು ಹಿಂಜರಿಯುತ್ತಾರೆ. ಕುಟುಂಬಸ್ಥರು ರಕ್ತ ನೀಡಿದ್ದಲ್ಲಿ ಸಮಸ್ಯೆ ಎದುರಾಗದು. ಯುವ ಜನತೆ ನಿಯಮಿತವಾಗಿ ರಕ್ತದಾನ ಮಾಡುವುದು ಆರೋಗ್ಯ ಹಾಗೂ ಸಾಮಾಜಿಕ ದೃಷ್ಟಿಯಿಂದ ಉತ್ತಮ. ರಕ್ತದಾನದಿಂದ ಮತ್ತೂಬ್ಬರನ್ನು ಬದುಕಿಸಲು ಸಾಧ್ಯ. ಇದರಿಂದ ಯಾವುದೇ ಅಡ್ಡ ಪರಿಣಾಮ ಎದುರಾಗದು ಎಂಬುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಮಾತು.

‘ರಕ್ತ ಲಭ್ಯತೆ ಕಡಿಮೆ ಇದ್ದರೂ ರೋಗಿಗಳಿಗೆ ಸಮಸ್ಯೆಯಾಗದಂತೆ ನಿಭಾಯಿಸಲಾಗುತ್ತಿದೆ. ಡೆಂಗ್ಯೂ ಪ್ರಕರಣಗಳಲ್ಲಿ ಪ್ಲೇಟ್‌ಲೆಟ್‌ 10 ಸಾವಿರದ ಆಸುಪಾಸಿನಲ್ಲಿದ್ದರೆ 6ರಿಂದ 10 ಯುನಿಟ್‌ ಪ್ಲೇಟ್‌ಲೆಟ್‌ ಒದಗಿಸಬೇಕಾಗುತ್ತದೆ. ರೆಡ್‌ ಕ್ರಾಸ್‌ ಮೂಲಕ ಎಪ್ರಿಲ್‌ನಲ್ಲಿ 1,079, ಮೇ ತಿಂಗಳಿನಲ್ಲಿ 1,470, ಜೂನ್‌ನಲ್ಲಿ 1537 ಯುನಿಟ್‌ ರಕ್ತ ಸಂಗ್ರಹವಾಗಿದೆ. ಮೇ ತಿಂಗಳಲ್ಲಿ 137, ಜೂನ್‌ ತಿಂಗಳಲ್ಲಿ 155 ಹಾಗೂ ಜುಲೈ ತಿಂಗಳಲ್ಲಿ ಇಲ್ಲಿಯ ವರೆಗೆ 81 ಯುನಿಟ್‌ ಪ್ಲೇಟ್‌ಲೆಟ್‌ ಬಳಕೆಯಾಗಿದ್ದು, ಬೇಡಿಕೆ ಹೆಚ್ಚಿದೆ.’
-ಸಿಎ ಶಾಂತಾರಾಮ ಶೆಟ್ಟಿ,ಚೇರ್ಮನ್‌, ಇಂಡಿಯನ್‌ ರೆಡ್‌ಕ್ರಾಸ್‌ ದ.ಕ. ಜಿಲ್ಲೆ

‘ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ರಕ್ತದ ಅಭಾವ ಆಗಿಲ್ಲ. ಸುಮಾರು 500 ಯುನಿಟ್‌ಗಳಷ್ಟು ರಕ್ತಸಂಗ್ರಹವಿದೆ. ರಕ್ತದಾನಿಗಳ ಮೂಲಕ ಸಂಗ್ರಹಿಸಿದ ರಕ್ತ ಹಾಗೂ ಕೆಲವು ಮಂದಿ ಸ್ವ ಇಚ್ಛೆಯಿಂದ ರಕ್ತನಿಧಿ ವಿಭಾಗಕ್ಕೆ ಬಂದು ರಕ್ತ ನೀಡುತ್ತಿದ್ದಾರೆ.’
-ಡಾ| ವೀಣಾ ಮುಖ್ಯಸ್ಥರು, ರಕ್ತನಿಧಿ ವಿಭಾಗ, ಜಿಲ್ಲಾಸ್ಪತ್ರೆ ಉಡುಪಿ

‘ಪ್ರಸ್ತುತ ಎಲ್ಲ ಕಡೆಗಳಲ್ಲೂ ರಕ್ತಕ್ಕೆ ಬೇಡಿಕೆ ಅಧಿಕವಾಗಿದೆ. ಜಿಲ್ಲೆಯ ಎಲ್ಲ ಬ್ಲಿಡ್‌ ಬ್ಯಾಂಕ್‌ನವರೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ.
-ಡಾ| ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

*ಸಂತೋಷ್‌ ಮೊಂತೇರೊ

ಟಾಪ್ ನ್ಯೂಸ್

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.