ಸುಧಾರಣೆ ಕಂಡಿಲ್ಲ ಸಾರಿಗೆ; ಬಸ್ ಬರುತ್ತಿಲ್ಲ ಊರಿಗೆ!
Team Udayavani, Sep 26, 2018, 10:59 AM IST
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕಟ್ಟಕಡೆಯ ಊರು ಕಲ್ಮಕಾರು ಭಾಗಕ್ಕೆ ಇನ್ನೂ ಅಗತ್ಯಕ್ಕೆ ತಕ್ಕಂತೆ ಬಸ್ ಓಡಾಟ ನಡೆಸುತ್ತಿಲ್ಲ. ಸುಳ್ಯದ ಬಹುನಿರೀಕ್ಷಿತ ಸಾರಿಗೆ ಬಸ್ ಡಿಪೋ ಕನಸು ಈಡೇರಿದ ವೇಳೆ ನಮ್ಮೂರಿಗೆ ಬಸ್ ಬಂದೆ ಬರುತ್ತದೆ ಎಂದು ಈ ಭಾಗದ ಜನತೆ ನಂಬಿದ್ದರು. ಅದು ಹುಸಿಯಾಗಿದೆ. ಖಾಸಗಿ ವಾಹನಗಳನ್ನೆ ಜನ ಅವಲಂಬಿಸಿಕೊಂಡಿದ್ದಾರೆ.
ತಾಲೂಕು ಕೇಂದ್ರದಿಂದ 40 ಕಿ.ಮೀ. ದೂರದ ಕಲ್ಮಕಾರು ಭಾಗಕ್ಕೆ ಸುಳ್ಯದಿಂದ ರಾತ್ರಿ ತಂಗುವ ಒಂದು ಬಸ್ ಬಿಟ್ಟರೆ ಬೇರೆ ಯಾವುದೇ ಬಸ್ ಬರುತ್ತಿಲ್ಲ. ಮಧ್ಯಾಹ್ನ 11 ಗಂಟೆಗೆ ಅಂಚೆ ಬಸ್, ಸಂಜೆ ನಾಲ್ಕು ಗಂಟೆಗೆ ಕೋಲ್ಚಾರ್ ಬಸ್ ಸುಳ್ಯದಿಂದ ಬರುತ್ತಿದ್ದವು. 4 ವರ್ಷಗಳಿಂದ ಇವೂ ಬರುತ್ತಿಲ್ಲ.
ಬಸ್ ಓಡಾಟ ಇಲ್ಲದೆ ಕಲ್ಮಕಾರು, ಕಡಮಕಲ್ಲು, ಸಂತೆಡ್ಕ, ಕೊಲ್ಲಮೊಗ್ರು, ಶಿರೂರು, ಬೆಂಡೋಡಿ, ಹರಿಹರ, ಬಾಳುಗೋಡು ಈ ಭಾಗದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು, ವಸ್ತುಗಳನ್ನು ಖರೀದಿಸಿ ತರಲು ಹೆಣಗಾಡುತ್ತಿದ್ದಾರೆ. ಎಲ್ಲದಕ್ಕೂ ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ.
ಸುಳ್ಯ, ಸುಬ್ರಹ್ಮಣ್ಯ, ಗುತ್ತಿಗಾರು, ಪುತ್ತೂರು, ಮಂಗಳೂರು ಮುಂತಾದ ಕಡೆಗಳ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಬೆಳಗ್ಗೆ ಬೇಗನೆ ಎದ್ದು ಇರುವ ಏಕೈಕ ಬಸ್ ಹಿಡಿದು ಪ್ರಯಾಣಿಸಬೇಕು. ತಪ್ಪಿದಲ್ಲಿ ವ್ಯಾನು, ಜೀಪುಗಳಲ್ಲಿ ನೇತಾಡಿಕೊಂಡು ಹೋಗಬೇಕು. ನಿಗದಿತ ಸಮಯಕ್ಕೆ ಶಾಲೆ, ಕಾಲೇಜಿಗೆ ತೆರಳಾಗದೆ ಕಲಿಕೆಗೂ ಅಡ್ಡಿಯಾಗುತ್ತಿದೆ. ಬಸ್ ಪಾಸ್ ಹೊಂದಿದ್ದರೂ ಅದು ವ್ಯರ್ಥವಾಗಿದೆ.
ಹಿಂದೆ ಬರುತ್ತಿದ್ದ ಎರಡು ಸಾರಿಗೆ ಬಸ್ಸುಗಳು ಬಳಿಕ ಓಡಾಟ ನಿಲ್ಲಿಸಿವೆ. ಪ್ರಯಾಣಿಕರ ಕೊರತೆಯಿಂದ ರೆವಿನ್ಯೂ ಸಂಗ್ರಹವಾಗುತ್ತಿಲ್ಲ ಎನ್ನುವುದು ಬಸ್ಸು ನಿಲ್ಲಿಸಲು ಸಂಸ್ಥೆ ನೀಡುವ ಕಾರಣ. ಸಮಯಕ್ಕೆ ಸರಿಯಾಗಿ ಬಸ್ಸುಬರುತ್ತಿದ್ದರೆ, ನಿತ್ಯವೂ ಓಡಾಟ ನಡೆಸಿದ್ದರೆ ಪ್ರಯಾಣಿಕರ ಕೊರತೆ ಆಗುವುದಿಲ್ಲ. ಸುಳ್ಯದ ಕಾಯರ್ತೋಡಿಯಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಸಾರಿಗೆ ಡಿಪೋ ಕಾರ್ಯಾಚರಿಸುತ್ತಿದೆ. ಕಾರ್ಯರಂಭ ಮಾಡಿದಾಗ ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಸುಧಾರಣೆಯ ಭರವಸೆ ಇತ್ತು. ಯಾವುದೇ ಹೆಚ್ಚಿನ ಬದಲಾವಣೆಗಳು ಆಗಿಲ್ಲ. ಸಾರಿಗೆ ಸ್ಥಿತಿ ಸುಧಾರಿಸಿಲ್ಲ.
ಗ್ರಾಮಾಂತರ ಪ್ರದೇಶಗಳಿಗೆ ಅವರ ಬೇಡಿಕೆಗೆ ತಕ್ಕಂತೆ ಬಸ್ ಸೌಲಭ್ಯ ಒದಗಿಸಿಲ್ಲ. ತಾಲೂಕಿನ ಗಡಿಗ್ರಾಮಗಳಾದ ಕೊಲ್ಲಮೊಗ್ರ, ಕಲ್ಮಕಾರು, ಬಾಳುಗೋಡು, ಮಡಪ್ಪಾಡಿ ಮಂಡೆಕೋಲು, ಹಾಗೂ ಗ್ರಾಮೀಣ ಪ್ರದೇಶದ ಮರ್ಕಂಜ, ಆಲೆಟ್ಟಿ, ಕುಕ್ಕುಜಡ್ಕ, ಚೊಕ್ಕಾಡಿ ಭಾಗದ ಜನತೆ ತಮ್ಮ ಪ್ರಯಾಣಕ್ಕಾಗಿ ಖಾಸಗಿ ಟೆಂಪೋ, ಜೀಪ್ ಗಳನ್ನು ಅವಲಂಬಿಸಿದ್ದಾರೆ.
ಗ್ರಾಮೀಣ ಸಂಪರ್ಕ ರಸ್ತೆಗಳಾದ ಗುತ್ತಿಗಾರು- ಬಳ್ಳಕ- ಪಂಜ, ಚೊಕ್ಕಾಡಿ- ಪಾಜೆಪಳ್ಳ-ಬೆಳ್ಳಾರೆ, ಸುಬ್ರಹ್ಮಣ್ಯ- ಐನೆಕಿದು- ಹರಿಹರ, ಗುತ್ತಿಗಾರು- ಕಂದ್ರಪ್ಪಾಡಿ- ಮಡಪ್ಪಾಡಿ, ಅರಂತೋಡು- ಮರ್ಕಂಜ, ರಸ್ತೆಗಳಲ್ಲಿ ಕೆಲ ಅವಧಿಗೆ ಸೀಮಿತವಾಗಿ ಬಸ್‌ಗಳು ಸಂಚರಿಸುತ್ತವೆ. ಈ ಭಾಗದಲ್ಲಿ ಇಂದಿಗೂ ಜೀಪ್, ವ್ಯಾನುಗಳಲ್ಲಿ ನೇತಾಡುತ್ತ ಜನ ಓಡಾಡುತ್ತಾರೆಯ ರಾತ್ರಿ ವೇಳೆ 7ರಿಂದ 8 ಗಂಟೆ ಒಳಗಡೆ ಸುಳ್ಯ ನಿಲ್ದಾಣದಿಂದ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ.
ಸುಳ್ಯ-ಪುತ್ತೂರು ನಡುವೆ ಬೆಳಗ್ಗೆ 6 ರಿಂದ ರಾತ್ರಿ 8.30 ರ ತನಕ ಪ್ರತಿ 15 ನಿಮಿಷಕ್ಕೆ ಒಂದು ಬಸ್ ಸಂಚರಿಸುತ್ತಿದೆ. ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಪುತ್ತೂರು ಹಾಗೂ ಕೇರಳ ಇತ್ಯಾದಿ ದೂರದ ಊರುಗಳಿಗೂ ಬಸ್‌ಗಳ ವ್ಯವಸ್ಥೆಯಿದೆ. ಗ್ರಾಮೀಣ ಭಾಗಕ್ಕೆ ತೆರಳುವ ಸಾರಿಗೆ ವ್ಯವಸ್ಥೆ ಸ್ಥಿತಿ ಹಾಗೆಯೇ ಇದೆ.
ಕೇವಲ 28 ಬಸ್ ಹೆಚ್ಚಳ
ಕೇವಲ 28 ಬಸ್ ಹೆಚ್ಚಳ ಡಿಪೋ ಆಗುವ ಮೊದಲು ಸುಳ್ಯ ನಿಲ್ದಾಣಕ್ಕೆ ದಿನವೊಂದಕ್ಕೆ 290 ಬಸ್‌ಗಳು ಬಂದು ಹೋಗುತ್ತಿದ್ದವು. ಈಗ 315 ಬಸ್ ಗಳಿವೆ. ಅಂದರೆ, ಹೆಚ್ಚಳವಾಗಿದ್ದು 28 ಬಸ್‌ಗಳು ಮಾತ್ರ. ಈ ಪೈಕಿ ಹುಬ್ಬಳ್ಳಿ, ಗೋಕರ್ಣ, ಕಾರವಾರ, ಶಿವಮೊಗ್ಗ, ಚಳ್ಳಕೆರೆ, ಬಿಸಿಲೆ-ಮೈಸೂರು, ಬಿಸಿಲೆ – ಬೆಂಗಳೂರು ಮಾರ್ಗಗಳಲ್ಲಿ ಹೊಸ ಬಸ್‌ಗಳ ಓಡಾಟ ಆರಂಭವಾಗಿದೆ. ಹೆಚ್ಚುವರಿ ಎಂದು ಸುಬ್ರಹ್ಮಣ್ಯ-5, ಉಬರಡ್ಕ-1 ಮಂಡೆಕೋಲು-1, ಮಡಪ್ಪಾಡಿ-1 ಬಸ್ ಓಡಾಟ ವ್ಯವಸ್ಥೆಯಷ್ಟೆ ಆಗಿದೆ.
ಖಾಸಗಿ ಮೊರೆ
ಅನಿವಾರ್ಯ ಗ್ರಾಮೀಣ ಭಾಗಕ್ಕೆ ಸಾಕಷ್ಟು ಬಸ್ ವ್ಯವಸ್ಥೆ ಕಲ್ಪಿಸಬೇಕು, ಸರ್ಕಾರಿ ಬಸ್‌ನ ವ್ಯವಸ್ಥೆ ಇದ್ದಲ್ಲಿ ಜನ ಅದನ್ನೆ ಆಶ್ರಯಿಸಿ ಪ್ರಯಾಣಿಸುತ್ತಾರೆ. ಅದು ಕೈ ಕೊಟ್ಟಾಗ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಬಸ್ ಒದಗಿಸುವಂತೆ ಸಂಸ್ಥೆಗೆ ಮನವಿ ಮಾಡಿದ್ದೇವೆ.
– ಸತೀಶ ಕೊಮ್ಮೆಮನೆ
ಕಲ್ಮಕಾರು ನಿವಾಸಿ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.