‘ಪ್ರಾಪರ್ಟಿ ಕಾರ್ಡ್‌ ನಿಮ್ಮ ಆಸ್ತಿಯ ಆಧಾರ್‌ ಕಾರ್ಡ್‌’


Team Udayavani, Nov 17, 2018, 11:11 AM IST

17-november-5.gif

ಜಿಲ್ಲಾಡಳಿತವು ಡಿಸೆಂಬರ್‌ 1ರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್‌(ನಗರ ಆಸ್ತಿ ಮಾಲಕತ್ವದ ದಾಖಲೆ-ಯುಪಿಒಆರ್‌) ಅನ್ನು ಈಗಾಗಲೇ ಕಡ್ಡಾಯ ಗೊಳಿಸಿದ್ದು, ಅದರಂತೆ ಆಸ್ತಿ ಮಾಲಕರ ನೋಂದಣಿ ಪ್ರಕ್ರಿಯೆಯು ಕ್ಷಿಪ್ರಗತಿಯಲ್ಲಿದೆ. ಸುದಿನವು ಮೂರು ದಿನಗಳಿಂದ ಈ ವಿಷಯದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುವ ಸಮಗ್ರ ವರದಿಗಳನ್ನು ಪ್ರಕಟಿಸಿದೆ. ಸಾರ್ವಜನಿಕರಿಗೆ ಬಹಳ ಉಪಯುಕ್ತ ಹಾಗೂ ಸಮಯೋಚಿತವಾಗಿರುವ ಈ ಸರಣಿಗೆ ಓದುಗರಿಂದ ಉತ್ತಮ ಸ್ಪಂದನೆ-ಮೆಚ್ಚುಗೆ ವ್ಯಕ್ತವಾಗಿದೆ. ಈ ಸರಣಿಯಲ್ಲಿ ಪತ್ರಿಕೆಗೆ ಓದುಗರಿಂದ ಬಂದಿರುವ ದೂರು-ಸಲಹೆ ಹಾಗೂ ಸಂದೇಹಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ದಿನೇಶ್‌ ಇರಾ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಇದು ಸರಣಿಯ ಕೊನೆಯ ಕಂತು. 

. ಡಿಸೆಂಬರ್‌ ಬಳಿಕವೂ ಪ್ರಾಪರ್ಟಿ ಕಾರ್ಡ್‌ಗಾಗಿ ಆಸ್ತಿ ಮಾಲಕರು ಅರ್ಜಿ ನೀಡಬಹುದೇ ?
ಖಂಡಿತಾ ನೀಡಬಹುದು. ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆಸ್ತಿ ಮಾರಾಟ ಮಾಡಲು ಆವಶ್ಯಕತೆ ಇರುವವರು ಮಾತ್ರ ಈಗ ಪ್ರಾಪರ್ಟಿ ಕಾರ್ಡ್‌ ಮಾಡಿಸಬೇಕು. ಡಿ. 1ರಿಂದ ಆಸ್ತಿ ಮಾರಾಟ ಸಂಬಂಧಿತ ವ್ಯವಹಾರಕ್ಕೆ ಮಾತ್ರ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ. ಹೀಗಾಗಿ ಉಳಿದವರು ಆರಾಮವಾಗಿ ಕಾರ್ಡ್‌ ಮಾಡಿಸಲು ದಾಖಲೆ ನೀಡಬಹುದು.

. ಹಳೆಯ ಅಪಾರ್ಟ್‌ಮೆಂಟ್‌ ಗಳಲ್ಲಿ ವಾಸವಾಗಿದ್ದ ಪೈಕಿ ಕೆಲವರಿಗೆ ಡೀಡ್‌ ಆಫ್‌ ಡಿಕ್ಲರೇಷನ್‌ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಏನು ಮಾಡಬೇಕು ?
ನಾವು ಡೀಡ್‌ ಆಫ್‌ ಡಿಕ್ಲರೇಷನ್‌ ಅಥವಾ ಮಾಲಕತ್ವ ದಾಖಲೆಗಳನ್ನು ನೋಡುತ್ತೇವೆ. ಸದ್ಯಕ್ಕೆ ಪೂರ್ಣ ದಾಖಲೆ ಯಾರಲ್ಲಿ ಇಲ್ಲವೋ ಅಂಥವರ ದಾಖಲೆಗಳನ್ನು ಸ್ಟಾಂಡ್  ಬೈ ಇಟ್ಟಿರುತ್ತೇವೆ. ನನ್ನ ನೇತೃತ್ವದಲ್ಲಿ ವಾರದಲ್ಲಿ ಎರಡು ಬಾರಿ ವಿಶೇಷ ಸಮಿತಿ ಸಭೆ ನಡೆಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ತೆರಿಗೆ ಪಾವತಿ ಸಹಿತ ಪೂರಕ ದಾಖಲೆಗಳು ಅವರಲ್ಲಿ ಇದ್ದರೆ ಸರಕಾರದಿಂದ ಅನುಮತಿ ಪಡೆದು ಪ್ರಾಪರ್ಟಿ ಕಾರ್ಡ್‌ ಮಾಡಲು ಅವಕಾಶ ಕಲ್ಪಿಸಲು ಯೋಚಿಸಲಾಗಿದೆ.  

. ಕೆಲವು ಮಾಲಕರಲ್ಲಿ ಎನ್‌ ಒಸಿ ಪತ್ರ ಇಲ್ಲ, ಕೆಲವರಿಗೆ ಬ್ಯಾಂಕ್‌ ಸಾಲವಿದೆ; ಒತ್ತುವರಿ ಸಮಸ್ಯೆ ಸಹಿತ ಬೇರೆ ಬೇರೆ ರೀತಿಯ ಭೂ ದಾಖಲೆಗಳ ಸಮಸ್ಯೆ ಇದ್ದವರು ಪ್ರಾಪರ್ಟಿ ಕಾರ್ಡ್‌ ಪಡೆಯುವುದಕ್ಕೆ ನಿಮ್ಮ ಸಲಹೆ ಏನು?
ಪೂರಕ ದಾಖಲೆಗಳು ಇಲ್ಲದಿದ್ದರೆ ಇರುವ ದಾಖಲೆಗಳ ಆಧಾರದಲ್ಲಿ ಆಯಾ ಮಾಲಕರಿಗೆ ಪ್ರಾಪರ್ಟಿ ಕಾರ್ಡ್‌ ನೀಡಲಾಗುತ್ತದೆ. ಆದರೆ, ಸೂಕ್ತ ದಾಖಲೆ ಇಲ್ಲದಿದ್ದರೆ ಆ ಬಗ್ಗೆ ಕಾರ್ಡ್ ನಲ್ಲಿಯೇ ನಮೂದಿಸುತ್ತೇವೆ. ಒಂದುವೇಳೆ ಕೆಲವರಲ್ಲಿ ಎನ್‌ಒಸಿ ಇಲ್ಲದಿದ್ದರೆ ಅಂಥವರ ಪ್ರಾಪರ್ಟಿ ಕಾರ್ಡ್‌ನಲ್ಲಿ ‘ಮನಪಾ ಎನ್‌ಒಸಿ ನೀಡಿಲ್ಲ’ ಎಂದು ನಮೂದಿಸಿ ಕಾರ್ಡ್‌ ನೀಡಲಾಗುತ್ತದೆ. 

ಮೊನ್ನೆಯವರೆಗೆ ಒಂದು ದಾಖಲೆ ಇಲ್ಲದಿದ್ದರೂ ಪ್ರಾಪರ್ಟಿ ಕಾರ್ಡ್‌ ನೀಡಲು ಸಾಧ್ಯವಿರಲಿಲ್ಲ. ಆದರೆ ಈಗ ಈ ನಿಯಮದಲ್ಲಿ ಸರಳೀಕರಣ ಮಾಡಲಾಗಿದೆ. ಆಸ್ತಿ ಸಂಬಂಧಿಸಿ ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದರೆ ಆ ವಿಚಾರವನ್ನು ಕೂಡ ಕಾರ್ಡ್‌ನಲ್ಲಿ ಪ್ರತ್ಯೇಕವಾಗಿ ವಿವರ ನಮೂದಿಸಲಾಗುತ್ತದೆ.

. ವಸತಿ ಸಮುಚ್ಚಯದಲ್ಲಿರುವವರು ಅಸೋಸಿಯೇಶನ್‌ ಮೂಲಕ ಪ್ರಾಪರ್ಟಿ ಕಾರ್ಡ್‌ ಮಾಡಿಸಲು ಸಾಧ್ಯವಿಲ್ಲವೇ?
ವಸತಿ ಸಮುಚ್ಚಯದವರು ಅಧಿಕ ಜನ ಈಗಾಗಲೇ ಮಾಡುತ್ತಿದ್ದಾರೆ. ಮೈನ್‌ ಚಾಲ್ತಾ ಹಾಗೂ ಸಬ್‌ ಚಾಲ್ತಾ ಪ್ರಾಪರ್ಟಿ ಕಾರ್ಡ್‌ ನೀಡಲಾಗುತ್ತದೆ. ಸಮುಚ್ಚಯದ ಮಾಲಕರೇ ಬಂದು ಅವರ ಆಸ್ತಿ ಕುರಿತಂತೆ ಮೈನ್‌ ಚಾಲ್ತಾ ಮಾಡಿಸುತ್ತಿದ್ದಾರೆ. ಈ ಬಗ್ಗೆ ವಸತಿ ಸಮುಚ್ಚಯದವರಿಗೆ ಮಾಹಿತಿ ನೀಡಲಾಗಿದೆ. ಉಳಿದಂತೆ ಪ್ಲ್ಯಾಟ್‌ನಲ್ಲಿ ವಾಸವಾಗಿರುವವರು ಬಯೋಮೆಟ್ರಿಕ್‌ ಸಹಿತ ವಿವಿಧ ದಾಖಲೆಗಳನ್ನು ಅವರೇ ನೀಡಬೇಕಾಗಿರುವುದರಿಂದ ನಿಗದಿತ ಸಮಯದಲ್ಲಿ ಬಂದು ಕಾರ್ಡ್‌ ಮಾಡಿದರೆ ಉತ್ತಮ.

. ಪ್ರಾಪರ್ಟಿ ಕಾರ್ಡ್‌ ಯೋಜನ ಘಟಕ ಹೆಚ್ಚುವರಿ ಕಚೇರಿ ಆರಂಭಿಸುವ ನಿರ್ಧಾರವಿದೆಯೇ ?
ಮಹಾನಗರ ಪಾಲಿಕೆ ಕಚೇರಿ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಈ ಕುರಿತ ಮಾಹಿತಿ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು.

. ಪ್ರಾಪರ್ಟಿ ಕಾರ್ಡ್‌ ವಿಚಾರದಲ್ಲಿಯೂ ಮಧ್ಯವರ್ತಿಗಳ ಹಾವಳಿ ತಡೆಗೆ ಏನು ಮಾಡುವಿರಿ?
ಇಲ್ಲಿಯವರಿಗೆ ಮಧ್ಯವರ್ತಿ ಹಾವಳಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆದರೆ, ಸಾರ್ವಜನಿಕರು ಯಾರೂ ಕೂಡ ಮಧ್ಯವರ್ತಿಗಳ ಮೂಲಕ ವ್ಯವಹರಿಸಬೇಡಿ. ಸಾರ್ವಜನಿಕ ಸ್ನೇಹಿ ವಾತಾವರಣದಿಂದ ನಮ್ಮ ಘಟಕ ಕಾರ್ಯ ನಿರ್ವಹಿಸುತ್ತಿದೆ. ಶೀಘ್ರದಲ್ಲೇ ಆನ್‌ಲೈನ್‌ ಮೂಲಕವೂ ಮನೆಯಲ್ಲಿ ಕುಳಿತು ಪ್ರಾಪರ್ಟಿ ಕಾರ್ಡ್‌ ನೋಂದಣಿ ವ್ಯವಸ್ಥೆ ಜಾರಿಯಾಗುತ್ತದೆ.

. ಪ್ರಾಪರ್ಟಿ ಕಾರ್ಡ್‌ಗಾಗಿ 2012ರಲ್ಲೇ ಅರ್ಜಿ-ದಾಖಲೆ ನೀಡಿದ್ದರೂ ಇನ್ನೂ ಕಾರ್ಡ್‌ ಸಿಕ್ಕಿಲ್ಲ ಎಂಬ ಬಗ್ಗೆ ಸಾಕಷ್ಟು ದೂರು ಬಂದಿವೆ?
ಪ್ರಾಪರ್ಟಿ ಕಾರ್ಡ್‌ಗೆ ಈಗಾಗಲೇ ಮಂಗಳೂರಿನ 77,381ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸಲಾಗಿದೆ. 33,000ಆಸ್ತಿಗಳ ಕರಡು ಪಿಆರ್‌ ಕಾರ್ಡ್ ಗಳನ್ನು ತಯಾರಿಸಲಾಗಿದೆ. ಆ ಪೈಕಿ 18,000 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಉಳಿದ ಸುಮಾರು 15,000 ಕಾರ್ಡ್ ದಾರರು ಯುಪಿಒಆರ್‌ ಘಟಕಕ್ಕೆ ಬಂದು ಕಾರ್ಡ್‌ ಪಡೆದುಕೊಳ್ಳಬಹುದು. ಉಳಿದ ಸುಮಾರು 40,000 ಮಂದಿಯ ದಾಖಲೆಗಳನ್ನು ಪರಿಶೀಲಿಸಿ ದಾಖಲೆ ಕೊರತೆ ಕಾರಣಕ್ಕೆ ಬಾಕಿ ಇರಿಸಲಾಗಿತ್ತು. ಇದೀಗ ದಾಖಲೆ ಕೊರತೆ ಇದ್ದರೂ ಮಾಲಕರು ಕೊಟ್ಟ ದಾಖಲೆಗಳ ಆಧಾರದಲ್ಲಿ ಕಾರ್ಡ್‌ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಡಿಸೆಂಬರ್‌ 1ರ ಮೊದಲು ಬಾಕಿಯಿರುವ ಈ ಎಲ್ಲ ಕಾರ್ಡ್‌ ಗಳನ್ನು ವಿತರಿಲಾಗುವುದು. 

ಭವಿಷ್ಯದ ಅಮೂಲ್ಯ ಕಾರ್ಡ್‌ ನಮ್ಮ ಇರುವಿಕೆಗಾಗಿ ಆಧಾರ್‌
ಕಾರ್ಡ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸೆನ್ಸ್‌, ಪಾಸ್‌ಪೋರ್ಟ್‌ ಸೇರಿದಂತೆ ಬೇರೆ ಬೇರೆ ಗುರುತಿನ ದಾಖಲೆಗಳೆಲ್ಲ ಇದ್ದರೂ ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಸಂಬಂಧಿತ ಒಂದೆರಡು ದಾಖಲೆಗಳು ಮಾತ್ರ ಪೂರ್ಣ ಮಟ್ಟದಲ್ಲಿ ಪ್ರಸ್ತುತ ಬಳಕೆಗೆ ಬರುತ್ತಿದೆ. ಇದೇರೀತಿ ಕಂದಾಯ ಇಲಾಖೆಯಿಂದ ಇದುವರೆಗೆ ನಗರ ವ್ಯಾಪ್ತಿಯಲ್ಲಿ ಖಾತಾ ಇದ್ದರೂ ಅದು ಬೇರೆ ಕಾರ್ಡ್‌ನಂತೆ ಮುಂದೆ ಬಳಕೆಯಲ್ಲಿರುತ್ತದೆ. ಆದರೆ, ಇನ್ನುಮುಂದೆ ಈ ಪ್ರಾಪರ್ಟಿ ಕಾರ್ಡ್‌ ನಮ್ಮ ಆಸ್ತಿಯ ಆಧಾರ್‌ ಕಾರ್ಡ್‌ನಂತೆ ಕಾರ್ಯ ನಿರ್ವಹಿಸಲಿದೆ. ಮುಂದೆ ಆಸ್ತಿಯ ಯಾವುದೇ ವ್ಯವಹಾರಗಳಿಗೆ, ಬ್ಯಾಂಕ್‌ ಲೋನ್‌ಗಳಿಗೆ ಪ್ರಾಪರ್ಟಿ ಕಾರ್ಡ್‌ನ ನಂಬರನ್ನೇ ಪಡೆಯಲಾಗುತ್ತದೆ. ಹೀಗಾಗಿ ಆಧಾರ್‌ ಕಾರ್ಡ್‌ ನಂಬರ್‌ ಹೇಗೆ ನಮ್ಮ ದೈನಂದಿನ ಜೀವನದಲ್ಲಿ  ಪ್ರಾಮುಖ್ಯ ಪಡೆದುಕೊಳ್ಳುತ್ತಿದೆಯೋ, ಅದೇರೀತಿ ಪ್ರಾಪರ್ಟಿ ಕಾರ್ಡ್‌ ನಂಬರ್‌ ಕೂಡ ಭವಿಷ್ಯದಲ್ಲಿ ಆಸ್ತಿ ಮಾಲಕರಿಗೆ ಅನುಕೂಲಕ್ಕೆ ಬರಲಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌. 

ಉದಯವಾಣಿಯ ಮಾದರಿ ಕಾರ್ಯ: ಡಿಸಿ ಶ್ಲಾಘನೆ 
ನಗರದಲ್ಲಿ ಪ್ರಾಪರ್ಟಿ ಕಾರ್ಡ್‌ ಮಾಡುವ ಕುರಿತಂತೆ ಜನರಿಗೆ ಜಿಲ್ಲಾಡಳಿತ ಮಾಹಿತಿ ನೀಡುತ್ತಿರಬೇಕಾದರೆ ಜವಾಬ್ದಾರಿಯುತ ಮಾಧ್ಯಮವಾಗಿ ಉದಯವಾಣಿಯ ಸುದಿನವು ನಗರವಾಸಿಗಳಲ್ಲಿ ಈ ರೀತಿ ಅಗತ್ಯ ಮಾಹಿತಿ ನೀಡುವ ಮೂಲಕ ಜಾಗೃತಿ ಕಾರ್ಯದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ. ಕಾರ್ಡ್‌ ಕುರಿತಂತೆ ಸಂಪೂರ್ಣ ವಿವರವನ್ನು ಜನರಿಗೆ ನೀಡಿರುವುದರಿಂದ ಬಹುತೇಕ ಜನರ ಗೊಂದಲ ಬಗೆಹರಿಸುವ ಕೆಲಸವನ್ನು ಸುದಿನ ಮಾಡಿರುವುದು ನನಗೆ ಖುಷಿ ತಂದಿದೆ. ಉದಯವಾಣಿ ಪತ್ರಿಕೆಯ ಈ ರೀತಿಯ ನಡೆಯು ನಿಜಕ್ಕೂ ಮಾದರಿ ಎಂದು ಜಿಲ್ಲಾಧಿಕಾರಿ ಸೆಂಥಿಲ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಾಪರ್ಟಿ ಕಾರ್ಡ್‌: ಸಂಪರ್ಕಿಸಬೇಕಾದ ವಿಳಾಸ 
ಯು.ಪಿ.ಒ.ಆರ್‌. ಯೋಜನ ಘಟಕ 
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ),
1ನೇ ಮಹಡಿ, ಹಳೆ ತಾಲೂಕು ಕಚೇರಿ ಆವರಣ
ಹಂಪನಕಟ್ಟೆ, ಮಂಗಳೂರು-575001
ಇ ಮೈಲ್‌:  [email protected] 
ಮೊಬೈಲ್‌ ಸಂಖ್ಯೆ: 9632808962

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.