ದೇರಾಜೆ: ಗುಡ್ಡ ಕುಸಿದು ಕೃಷಿ ತೋಟಗಳಿಗೆ ಹಾನಿ
Team Udayavani, Aug 22, 2018, 12:11 PM IST
ಕಡಬ: ವಿಪರೀತ ಮಳೆಗೆ ಬಲ್ಯ ಗ್ರಾಮದ ದೇರಾಜೆಯಲ್ಲಿ ಗುಡ್ಡ ಕುಸಿದು ಮನೆಯೊಂದು ಅಪಾಯದ ಸ್ಥಿತಿಯಲ್ಲಿದ್ದು, ಪರಿಸರದ ಹಲವಾರು ಕೃಷಿಕರ ತೋಟಗಳಿಗೆ ಹಾನಿಯಾಗಿದೆ. ಗುಡ್ಡ ಕುಸಿತದ ಪರಿಣಾಮವಾಗಿ ಮಣ್ಣು ಜರಿದು ಬಿದ್ದ ಪರಿಣಾಮ ನೀರು ಹರಿಯಲು ತೋಡಿನಲ್ಲಿ ತಡೆಯುಂಟಾಗಿ ಸ್ಥಳೀಯ ಕೃಷಿಕ ಡೊಂಬಯ್ಯ ಗೌಡ ಅವರ ಕೃಷಿ ತೋಟಕ್ಕೆ ಮಳೆ ನೀರು ನುಗ್ಗಿ ಹಲವಾರು ಅಡಿಕೆ, ತೆಂಗು, ರಬ್ಬರ್ ಗಿಡಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಅವರ ಮನೆಯೂ ಅಪಾಯ ಸ್ಥಿತಿಯಲ್ಲಿದೆ. ಘಟನೆಯಿಂದ 40 ಸಾವಿರ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಲಕ್ಷ್ಮೀ ದೇರಾಜೆ ಎಂಬವರಿಗೆ ಸೇರಿದ 600 ಅಡಿಕೆ ಗಿಡಗಳಿರುವ ತೋಟದಲ್ಲಿ ತೋಡಿನ ನೀರು ಹರಿಯುತ್ತಿದ್ದು, ಗಿಡಗಳು ನಾಶವಾಗುವ ಭೀತಿ ಎದುರಾಗಿದೆ. ಅದೇ ಪರಿಸರದ ಸದಾಶಿವ ಅವರ ತೋಟದ ಹಲವಾರು ಅಡಿಕೆ, ತೆಂಗು, ವೆಂಕಟ್ರಮಣ ಎಂಬವರ 400 ಅಡಿಕೆ ಗಿಡವಿರುವ ತೋಟ ನೆರೆ ನೀರಿನಿಂದ ಮುಳುಗಡೆಯಾಗಿದೆ. ದೇವಿ ಕುಮಾರಿ ಅವರಿಗೆ ಸೇರಿದ ರಬ್ಬರ್ ಹಾಗೂ ಅಡಿಕೆ ತೋಟ ಮುಳುಗಡೆಯಾಗಿದೆ. ತೋಟದಲ್ಲಿ ಸಸಿ ನೆಡಲು ಹಾಕಲಾದ ಮಣ್ಣು ನೆರೆ ನೀರಿಗೆ ಕೊಚ್ಚಿ ಹೋಗಿದೆ. ತಲಾ 75 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.