Fisheries ಮತ್ಸ್ಯ ಸಂಪದ ಯೋಜನೆಯ ವಿನ್ಯಾಸ ಪರಿಷ್ಕರಣೆ: ಕೇಂದ್ರ ಮೀನುಗಾರಿಕೆ ಸಚಿವರಿಗೆ ಮನವಿ
Team Udayavani, Dec 23, 2023, 12:40 AM IST
ಮಂಗಳೂರು: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಆಳಸಮುದ್ರದ ಮೀನುಗಾರಿಕೆ ಗಿಲ್ ನೆಟ್ ದೋಣಿಗಳ ವಿನ್ಯಾಸದಲ್ಲಿ ಆಗಬೇಕಾದ ಬದಲಾವಣೆಗಳನ್ನು ಮುಂದಿಟ್ಟು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಕೇಂದ್ರ ಅಖಿಲ ಭಾರತ ಪರ್ಸಿನ್ ಮೀನುಗಾರರ ಸಂಘದ ಪದಾಧಿಕಾರಿಗಳು ಮೀನುಗಾರಿಕೆ ಸಚಿವ ಪರುಷೋತ್ತಮ್ ರೂಪಾಲ ಅವರಿಗೆ ಮನವಿ ಸಲ್ಲಿಸಿದರು.
ದೋಣಿಯ ಉದ್ದವನ್ನು 22.70 ಮೀ.ನಿಂದ 24 ಮೀ.ಗೆ, ಅಗಲವನ್ನು 6.40 ಮೀ.ನಿಂದ 7.20 ಮೀ.ಗೆ ಹೆಚ್ಚಿಸಬೇಕು, ಎಂಜಿನ್ ಅಶ್ವಶಕ್ತಿಯನ್ನು 200 ಎಚ್‌ಪಿಯಿಂದ 350ಕ್ಕೆ ಏರಿಸಬೇಕು, ದೋಣಿಯ ಹಿಂಭಾಗದಲ್ಲಿರುವ ಕ್ಯಾಬಿನ್ ಅನ್ನು ದೋಣಿಯ ಮಧ್ಯಕ್ಕೆ ಬದಲಾಯಿಸುವುದು, ಆಳ ಸಮುದ್ರದ ಮೀನುಗಾರಿಕೆ ಗಿಲ್‌ನೆಟ್/ಲಾಂಗ್ ಲೈನರ್ ಬೋಟ್ ಜತೆಗೆ ಪರ್ಸಿನ್ ಬೋಟ್ ನಿರ್ಮಾಣಕ್ಕೆ ಅನುಮತಿ ನೀಡುವುದು ಸೇರಿದಂತೆ ಮೀನುಗಾರರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಸಂಸದರ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಅಖೀಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಸುನಿಲ್, ನವಿಲ್ ದಾಸ್, ವಿವೇಕಾನಂದ, ಲೋಕನಾಥ್ ಹಾಗೂ ವಿಲಿಯಂ ಫ್ರಾನ್ಸಿಸ್ ಅವರು ನಿಯೋಗದಲ್ಲಿದ್ದರು.
ಜಿಎಂಪಿಎಲ್‌ನಲ್ಲಿ ಉದ್ಯೋಗಕ್ಕೆ ಮನವಿ
ಗೈಲ್ ಮಂಗಳೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್-ಜಿಎಂಪಿಎಲ್ (ಹಿಂದಿನ ಜೆಬಿಎಫ್ ಪಿಎಲ್) ಕಂಪೆನಿಯಲ್ಲಿ ಎಂಎಸ್‌ಇಝಡ್ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟು ಸ್ಥಳಾಂತರ ಹೊಂದಿದ್ದ ಕುಟುಂಬ ಸದಸ್ಯ ರ ನೆಲೆಯಲ್ಲಿ (ಪಿಡಿಎಫ್) ಉದ್ಯೋಗ ಪಡೆದಿದ್ದ 115 ಮಂದಿ ಹಾಗೂ ನೇರ ನೇಮಕಾತಿಯಲ್ಲಿ ನೇಮಕಗೊಂಡ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ಪೆಟ್ರೋಲಿಯಂ
ಸಚಿವ ಹರ್‌ದೀಪ್ ಸಿಂಗ್ ಪುರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಎಂಎಸ್‌ಇಝಡ್ ಸ್ಥಾಪನೆಗೆ ಸ್ಥಳ ನೀಡಿದ್ದ ನೆಲೆಯಲ್ಲಿ ಕೆಲಸ ನೀಡಲಾಗಿದ್ದ ಎಲ್ಲ ಉದ್ಯೋಗಿಗಳಿಗೆ ಜಿಎಂಪಿಎಲ್‌ನಲ್ಲಿ ಯಾವುದೇ ಲಿಖೀತ ಪರೀಕ್ಷೆ ಹಾಗೂ ಸಂದರ್ಶನ ನಡೆಸದೆ ಉದ್ಯೋಗ ನೀಡುವುದು ಹಾಗೂ ಜೆಬಿಎಫ್‌ಪಿಎಲ್‌ನಲ್ಲಿ ನೇರ ನೇಮಕಾತಿ ಮೂಲಕ (ನಾನ್ ಪಿಡಿಎಫ್) ಉದ್ಯೋಗಿಗಳಾಗಿದ್ದ ಎಲ್ಲ ಸ್ಥಳೀಯರಿಗೂ ಖಾಯಂ ಉದ್ಯೋಗ ನೀಡುವಂತೆ ಜಿಎಂಪಿಎಲ್ ಆಡಳಿತ ಮಂಡಳಿಗೆ ಸೂಚಿಸುವಂತೆ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.