ಅಭಿವೃದ್ಧಿ ಕಾರ್ಯಗಳು ನಡೆದರೂ ಒಂದಷ್ಟು ಸಮಸ್ಯೆಗಳು ಹಾಗೇ ಇವೆ !
Team Udayavani, Oct 7, 2019, 5:44 AM IST
ಪೋರ್ಟ್ ವಾರ್ಡ್‌ನ ಚಿತ್ರಣ.
ಮಹಾನಗರ: ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಬಂದರು ಪ್ರದೇಶದ ಅರ್ಧದಷ್ಟು ಭಾಗವನ್ನು ಪೋರ್ಟ್ ವಾರ್ಡ್ (ನಂ.45 ವಾರ್ಡ್) ಒಳಗೊಂಡಿದೆ.
ವಾಣಿಜ್ಯ ಬಂದರು, ಮೀನುಗಾರಿಕಾ ಧಕ್ಕೆ, ರೈಲ್ವೇ ಗೂಡ್ಸ್ ಶೆಡ್, ಜಿಲ್ಲಾಧಿಕಾರಿ ಕಚೇರಿ, ನಗರ ಪೊಲೀಸ್ ಆಯುಕ್ತರ ಕಚೇರಿ, ಜಿಲ್ಲಾ ಪೊಲೀಸ್ ಅಧೀಕ್ಷಕರ, ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರ ಕಚೇರಿಗಳು, ಬಂದರು, ಮೀನುಗಾರಿಕೆ ಇಲಾಖೆ ಕಚೇರಿಗಳು, ಕಾರ್ಪೊರೇಶನ್ ಬ್ಯಾಂಕ್ ಕೇಂದ್ರ ಕಚೇರಿ, ಕಸ್ಟಮ್ ಇಲಾಖೆಯ ಕಚೇರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರಮುಖ ಕಚೇರಿಗಳನ್ನು ಹೊಂದಿರುವುದು ಈ ವಾರ್ಡ್‌ನ ವಿಶೇಷಗಳಲ್ಲಿ ಒಂದು. ಇತಿಹಾಸ ಪ್ರಸಿದ್ಧ ರೊಸಾರಿಯೊ ಚರ್ಚ್, ನಿರೇಶ್ವಾಲ್ಯ ಶ್ರೀ ಸೋಮ ನಾಥ ದೇವಾಲಯ,ನಿತ್ಯಾನಂದ ಸ್ವಾಮಿಗಳ ಆಶ್ರಮ ಮುಂತಾದ ಧಾರ್ಮಿಕ ಕೇಂದ್ರಗಳನ್ನು ಇದು ಒಳ ಗೊಂಡಿದೆ. ತ್ರಿ-ಸ್ಟಾರ್ ಹೊಟೇಲ್ ಇಲ್ಲಿದ್ದು ರಾಷ್ಟ್ರ, ಅಂತಾರಾಷ್ಟ್ರೀಯ ಗಣ್ಯರು ಇಲ್ಲಿ ತಂಗುವುದರಿಂದ ಅಂತಾರಾಷ್ಟ್ರೀಯತೆಯ ಪ್ರಾಮುಖ್ಯವೂ ಇದೆ.
ಹದಗೆಟ್ಟ ರಸ್ತೆ, ಒಳಚರಂಡಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ವಾರ್ಡ್ ಇದೀಗ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾದಿಯತ್ತ ಸಾಗು ತ್ತಿದೆಯಾದರೂ ಸಮಸ್ಯೆಗೆ ಪೂರ್ಣ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಾರ್ಡ್‌ನ ಹಳೆ ವಾಣಿಜ್ಯ ಬಂದರು, ಮೀನುಗಾರಿಕಾ ಧಕ್ಕೆ, ನೆಲ್ಲಿಕಾಯಿ ರಸ್ತೆ ಮುಂತಾದ ಪ್ರದೇಶಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರ್ಪಡೆಯಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಬಲ ನೀಡಿದೆ. ಮನಪಾ ಅಂಕಿ-ಅಂಶದಂತೆ 5 ವರ್ಷಗಳಲ್ಲಿ ಈ ವಾರ್ಡ್‌ಗೆ ಹರಿದು ಬಂದಿರುವ ಒಟ್ಟು ಅನುದಾನ 5.03 ಕೋ.ರೂ. ಬಹಳಷ್ಟು ವರ್ಷದ ಸಮಸ್ಯೆಈ ವಾರ್ಡ್ ರೈಲ್ವೇ, ಬಂದರು ಇಲಾಖೆಯ ಪ್ರದೇಶಗಳನ್ನೂ ಒಳ ಗೊಂಡಿದ್ದು, ಅಲ್ಲಿ ರಸ್ತೆ ಅಭಿವೃದ್ಧಿ, ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳ ಬೇಕಾದರೆ ರೈಲ್ವೇ ಇಲಾಖೆಯ ನಿರಾಕ್ಷೇಪ ಣಾ ಪತ್ರ ಬೇಕು. ಇದಕ್ಕೆ ಪಾಲಕ್ಕಾಡ್ ರೈಲ್ವೇ ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬೇಕಾಗುತ್ತದೆ. ಇದರಿಂದಾಗಿ ಈ ಭಾಗದ ಕೆಲವು ಕಡೆ ಒಳಚರಂಡಿ ವ್ಯವಸ್ಥೆ, ರಸ್ತೆ ಉನ್ನತೀಕರಣಕ್ಕೆ ಅನುದಾನ ಮಂಜೂ ರಾಗಿದ್ದರೂ ಕಾಮಗಾರಿ ಕೈಗೊಳ್ಳಲು ಸಮಸ್ಯೆಯಾಗಿದೆ. ರೈಲ್ವೇ ಗೂಡ್ಸ್ ವ್ಯಾಗನ್ ಆಗಾಗ್ಗೆ ಚಲಿಸುತ್ತಿರುವುದರಿಂದ ಗೂಡ್ಸ್
ಶೆಡ್- ಹೊಗೆ ಬಜಾರ್ ನಡುವಣ ಜನರಿಗೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ಬಹಳ ಕಾಲದಿಂದ ಇದ್ದರೂ ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಪ್ರಮುಖ ಕಾಮಗಾರಿ
– ಹ್ಯಾಮಿಲ್ಟನ್ ವೃತ್ತದಿಂದ ಹಳೆ ಬಂದರು ರಸ್ತೆ ಅಭಿವೃದ್ಧಿ
– ಪಾಂಡೇಶ್ವರ ರಸ್ತೆಯಿಂದ ರೊಸಾರಿಯೋ ಶಾಲೆಗೆ ಹೋಗುವ ರಸ್ತೆ ಅಭಿವೃದ್ಧಿ
– ರೊಸಾರಿಯೋ ಚರ್ಚ್‌ನಿಂದ ಹೊಗೆ ಬಜಾರ್ ರೈಲ್ವೇ ಗೇಟ್‌ರಸ್ತೆ ಅಭಿವೃದ್ಧಿ
– ಬಂಬೂ ಬಜಾರ್ ರಸ್ತೆ ಅಭಿವೃದ್ಧಿ, ನಿರೇಶ್ವಾಲ್ಯ ಜಂಕ್ಷನ್ ಅಭಿವೃದ್ಧಿ
– ಹ್ಯಾಮಿಲ್ಟನ್ ವೃತ್ತದಿಂದ ಬದ್ರಿಯಾ ಕಾಲೇಜುವರೆಗೆ ಒಳಚರಂಡಿ ನವೀಕರಣ
– ಬಿ.ಆರ್. ಕರ್ಕೇರ ರಸ್ತೆ, ಮಹಾಲಿಂಗೇಶ್ವರ ದೇಗುಲ ರಸ್ತೆ ಅಭಿವೃದ್ಧಿ
– ರೊಸಾರಿಯೋ ಶಾಲೆ ರಸ್ತೆಯಿಂದ ನಿತ್ಯಾನಂದ ಆಶ್ರಮದ ಜಂಕ್ಷನ್ ವರೆಗೆ ಪೇವರ್ ಫಿನಿಶ್ ಡಾಮರು ಕಾಮಗಾರಿ,
– ನಿರೇಶ್ವಾಲ್ಯದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸ್ಮಾರ್ಟ್‌ಸಿಟಿಯಡಿ ಅಭಿವೃದ್ಧಿ
– ಪಟೇಲ್ ಕಾಂಪೌಂಡ್ ಕಾಲನಿಯ ವೈದ್ಯನಾಥ ಭಜನ ಮಂಡಳಿಯ ಮುಂದುವರಿದ ಕಾಮಗಾರಿ
– ಪಾಂಡೇಶ್ವರ -ಮಂಗಳಾದೇವಿ ಮುಖ್ಯ ರಸ್ತೆಯಿಂದ ಕೆನರಾ ಬ್ಯಾಂಕ್ ರಸ್ತೆ ತನಕ ಡಾಮಾರು ಪೇವರ್ ಫಿನಿಶ್
ಪೋರ್ಟ್ ವಾರ್ಡ್
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ: ಬಂದರು ಪೊಲೀಸ್ ಸೆÒàಷನ್‌ನಿಂದ ನೆಲ್ಲಿಕಾಯಿ ರಸ್ತೆ, ಕಂದುಕ, ಗೂಡ್ಸ್‌ಶೆಡ್, ಪಾಂಡೇಶ್ವರ ನ್ಯೂರೋಡ್, ಪಾಂಡೇಶ್ವರ ಮುಖ್ಯರಸ್ತೆ (ಟೆಲಿಕಾಂ) ಹೊಗೆ ಬಜಾರ್, ಸ್ಟೇಟ್‌ಬ್ಯಾಂಕ್, ರೊಸಾರಿಯೊ ಚರ್ಚ್ ರಸ್ತೆ, ಫೋರಂ ಮಹಲ್, ಹಳೆ ಬಂದರು ಪ್ರದೇಶ, ಡಿಸಿ ಕಚೇರಿ, ಮೀನುಗಾರಿಕಾ ಧಕ್ಕೆ ಪ್ರದೇಶ, ಫೋರಂಮಹಲ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರದೇಶ.
ಬಹಳಷ್ಟು ಅಭಿವೃದ್ದಿ 45-ಪೋರ್ಟ್ ವಾರ್ಡ್ ನಲ್ಲಿ ಕೆಲವು ಸಮಸ್ಯೆಗಳ ಹೊರತಾಗಿಯೂ 5 ವರ್ಷಗಳಲ್ಲಿ ಮೂಲ ಸೌಕರ್ಯಗಳು ಸಹಿತ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಾರ್ಡ್‌ನ ಕೆಲವು ಭಾಗಗಳು ಸೇರ್ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ವಾರ್ಡ್ ಇನ್ನಷ್ಟು ಅಭಿವೃದ್ಧಿ ಕಾಣಲಿದೆ.
-ಅಬ್ದುಲ್ ಲತೀಫ್
ಸುದಿನ ನೋಟ
ವಾರ್ಡ್‌ನಲ್ಲಿ ಸುತ್ತಾಡಿದಾಗ ಮೂಲ ಸೌಕರ್ಯಗಳು ಬಹಳಷ್ಟು ಅಭಿವೃದ್ಧಿಯಾಗಿರುವುದು ಗೋಚರಿಸಿದೆ. ಆದರೆ ಒಂದಷ್ಟು ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ, ರಸ್ತೆ ಉನ್ನತೀಕರಣ, ಸಂಚಾರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳು ಆಗಬೇಕಾದ ಆವಶ್ಯಕತೆ ಇದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Train; ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ?
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.