Mangaluru: ಮೀನುಗಾರಿಕಾ ಸಾಮಗ್ರಿಗಳ ನಾಶ: ಪೊಲೀಸರಿಗೆ ದೂರು
Team Udayavani, Jan 7, 2025, 9:25 PM IST
ಮಂಗಳೂರು: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯ ಸಮೀಪ ಯಾಂತ್ರೀಕೃತ ಬೋಟ್ ಹಾದು ಹೋದ ಪರಿಣಾಮ ಬಲೆ, ಹಗ್ಗ ಸೇರಿದಂತೆ ಸುಮಾರು 1.90 ಲ.ರೂ ನಷ್ಟ ಸಂಭವಿಸಿರುವ ಬಗ್ಗೆ ಕರಾವಳಿ ಕಾವಲು ಪೊಲೀಸರಿಗೆ ದೂರು ನೀಡಲಾಗಿದೆ.
ಮೂರು ಮಂದಿ ಮೀನುಗಾರರು ಡಿ. 24ರಂದು ರಾತ್ರಿ 11ಕ್ಕೆ ಸಿದ್ದಿವಿನಾಯಕ ಗಿಲ್ನೆಟ್ ದೋಣಿಯಲ್ಲಿ ನವಮಂಗಳೂರು ಬಂದರಿನ ಪಶ್ಚಿಮ ದಿಕ್ಕಿಗೆ ಸುಮಾರು 20 ನಾಟಿಕಲ್ ಮೈಲು ದೂರದಲ್ಲಿ ಬಲೆ ಹಾಕಿ ಮೀನುಗಾರಿಕೆ ನಡೆಸುತ್ತಿದ್ದರು. ಆಗ ಎಲ್ಲ ಬೆಳಕನ್ನು ಬಂದ್ ಮಾಡಿ ಬಂದ ಅನಾಮಧೇಯ ಯಾಂತ್ರೀಕೃತ ಬೋಟೊಂದು ಬಲೆಯನ್ನು ಎಳೆದುಕೊಂಡು ಹೋಗಿದೆ.
ಅಲ್ಲದೆ ಮೀನುಗಾರಿಕೆ ಸಾಮಗ್ರಿಗಳಾದ ರೋಪ್, ಬೋಯ್ಗಳು ಸಮುದ್ರ ಪಾಲಾಗಿದೆ. ಇದರಿಂದ ಸುಮಾರು 400 ಕೆ.ಜಿ ಬಲೆ ಹಾಗೂ ಇತರ ಮೀನುಗಾರಿಕ ಸಾಮಗ್ರಿಗಳು ನಾಶವಾಗಿ 1.90 ಲ.ರೂ. ನಷ್ಟ ಉಂಟಾಗಿದೆ ಎಂದು ದೋಣಿಯ ಮಾಲಕ ಅಕ್ಷಯ ಆರ್. ಕಾಂಚನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
Kollywood: ಸೂರ್ಯ – ಕಾರ್ತಿಕ್ ಸುಬ್ಬರಾಜ್ ʼರೆಟ್ರೋʼ ರಿಲೀಸ್ಗೆ ಡೇಟ್ ಫಿಕ್ಸ್
Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.