ರೋಗನಿರೋಧಕ ತಳಿ ಅಭಿವೃದ್ಧಿಗೆ ನಿರ್ಧಾರ
ಪ್ಲಾಸ್ಟಿಕ್ ಹೊದಿಕೆ ಅಳವಡಿಕೆಯಿಂದ ರೋಗ ವಿಸ್ತರಣೆ ಕಡಿಮೆ: ವರದಿ
Team Udayavani, Oct 12, 2021, 5:06 AM IST
ಪುತ್ತೂರು: ಅಡಿಕೆ ಹಳದಿ ಎಲೆರೋಗ ವಿಸ್ತರಣೆ ತಡೆಗೆ ಹಾಗೂ ಹಳದಿ ಎಲೆ ರೋಗ ಬಾಧಿತ ಅಡಿಕೆ ಮರಗಳಿಗೆ ಪೋಷಕಾಂಶಗಳ ನಿರ್ವಹಣೆಯ ದೃಷ್ಟಿಯಿಂದ ಅಳವಡಿಕೆ ಮಾಡಿದ್ದ ಪ್ಲಾಸ್ಟಿಕ್ ಹೊದಿಕೆಗಳ ವೀಕ್ಷಣೆ ಹಾಗೂ ಅಧ್ಯಯನ ವರದಿಯ ಬಗ್ಗೆ ಬೆಳೆಗಾರರಿಗೆ ಸಿಪಿಸಿಆರ್‌ಐ ವಿಜ್ಞಾನಿಗಳು ಸೋಮವಾರ ಮಾಹಿತಿ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ಎಲೆರೋಗ ಬಾಧಿತ ಪ್ರದೇಶಗಳಲ್ಲಿ ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಡಿಕೆ ತೋಟದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ ಮಾಡಿತ್ತು. ಐದು ವರ್ಷಗಳ ಹಿಂದೆ ಕಲ್ಮಕಾರಿನ ಒಂದು ತೋಟದಲ್ಲಿ ಹಾಗೂ ಮರ್ಕಂಜದ ಎರಡು ತೋಟ ಹಾಗೂ ಶೃಂಗೇರಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಪೋಷಕಾಂಶಗಳ ನಿರ್ವಹಣೆ ಕುರಿತು ಅಧ್ಯಯನ ನಡೆಸಿದ್ದರು. ಈ ಅಧ್ಯಯನ ವರದಿ ಪ್ರಕಾರ ಅಡಿಕೆ ಹಳದಿ ಎಲೆರೋಗ ವಿಸ್ತರಣೆ ಕಡಿಮೆಯಾಗಿದೆ ಹಾಗೂ ಪೋಷಕಾಂಶಗಳು ಮರಗಳಿಗೆ ಸರಿಯಾಗಿ ಲಭ್ಯವಾಗುವುದರಿಂದ ಮರಗಳ ಬೇರು ಆರೋಗ್ಯಯುತವಾಗಿರುವುದು ಕಂಡುಬಂದಿದೆ ಎಂದು ವಿಜ್ಞಾನಿಗಳ ತಂಡ ಕಂಡುಕೊಂಡಿದೆ.
ಈ ಅಧ್ಯಯನದ ಜತೆಗೆ ಎಲೆರೋಗ ಪೀಡಿತ ಪ್ರದೇಶದಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿ ಹಾಗೂ ಟಿಶ್ಯೂ ಕಲ್ಚರ್ ಗಿಡಗಳನ್ನು ಅಭಿವೃದ್ಧಿ ಮಾಡಲು ಸಿಪಿಸಿಆರ್‌ಐ ವಿಜ್ಞಾನಿಗಳು ಮುಂದೆ ಬಂದಿದ್ದಾರೆ ಎಂದು ಸಿಪಿಸಿಆರ್‌ಐ ನಿರ್ದೇಶಕಿ ಡಾ| ಅನಿತಾ ಕರುಣ್ ತಿಳಿಸಿದ್ದಾರೆ.
ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ
ಸೋಮವಾರ ಕಲ್ಮಕಾರಿನ ನವೀನ್ ದಂಬೆಕೋಡಿ ಅವರ ತೋಟ ಹಾಗೂ ಮರ್ಕಂಜದ ಪವಿತ್ರ ಗುಂಡಿ ಅವರ ಅಡಿಕೆ ತೋಟಗಳಿಗೆ ಅಳವಡಿಸಿದ್ದ ಪ್ಲಾಸ್ಟಿಕ್ ಹೊದಿಕೆಗಳನ್ನು ವಿಜ್ಞಾನಿಗಳ ತಂಡ ವೀಕ್ಷಿಸಿತು. ಈ ತಂಡದಲ್ಲಿ ಸಿಪಿಸಿಆರ್‌ಐ ಕಾಸರಗೋಡು ಸಮಾಜವಿಜ್ಞಾನ ವಿಭಾಗ ಮುಖ್ಯಸ್ಥ ಡಾ| ಮುರಳೀಧರನ್, ಡಾ| ರವಿ ಭಟ್, ಡಾ| ವಿನಾಯಕ ಹೆಗಡೆ, ವಿಜ್ಞಾನಿ ಡಾ| ಭವಿಷ್ಯ ಇದ್ದರು. ಇವರು ಬೆಳೆಗಾರರೊಂದಿಗೆ ಮಾತುಕತೆ ನಡೆಸಿ ಅಡಿಕೆ ಬೆಳೆಗಾರರ ಅಭಿಪ್ರಾಯ ಪಡೆದರು.
ಈ ಸಂದರ್ಭ ಕಲ್ಮಕಾರು ಗ್ರಾ. ಪಂ. ಅಧ್ಯಕ್ಷ ಉದಯಕುಮಾರ್ ಕೊಪ್ಪಡ್ಕ, ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಸ್ಥಳೀಯರಾದ ಕೆ.ಸಿ. ಸುಬ್ರಹ್ಮಣ್ಯ ಕೊಪ್ಪಡ್ಕ, , ಕೆ.ಪಿ. ಚಂದ್ರಶೇಖರ್ ಕೊಪ್ಪಡ್ಕ, ಮಹೇಶ್ ಪುಚ್ಚಪ್ಪಾಡಿ, ಬಾಲಕೃಷ್ಣ ಕೊಪ್ಪಡ್ಕ, ಮೋಹನ ಉಳುವಾಲು, ಡ್ಯಾನಿ ಆಲದಾಳು, ನರೇಂದ್ರ ಬಿಳಿಮಲೆ, ಗಂಗಾಧರ ಇಡ್ಯಡ್ಕ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.