ಚೀನ ವಸ್ತುಗಳ ರದ್ದತಿಗೆ ಪತ್ರ ಬರೆಯಲು ನಿರ್ಣಯ
Team Udayavani, Aug 22, 2017, 6:30 AM IST
ಕುಂಬ್ರ : ಚೀನಿ ವಸ್ತುಗಳ ಆಮದು ರದ್ದುಗೊಳಿಸುವಂತೆ ಸರಕಾರಕ್ಕೆ ಬರೆಯಲು ಒಳಮೊಗ್ರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ.
ಚೀನದಲ್ಲಿ ಉತ್ಪಾದಿಸಿದ ವಸ್ತುಗಳ ಮಾರಾಟದ ಶೇ. 7 ರೂಪಾಯಿಯಷ್ಟು ದೇಶದ ರಕ್ಷಣೆಗೋಸ್ಕರ ಹೋಗುತ್ತದೆ. ಇದರಿಂದ ಅಲ್ಲಿನ ರಕ್ಷಣೆ ಬಲಿಷ್ಠವಾಗಿದೆ. ಆದ್ದರಿಂದ ನಮ್ಮ ದೇಶ, ರಾಜ್ಯ, ಜಿಲ್ಲೆಗಳಲ್ಲಿ ಚೀನಿ ವಸ್ತುಗಳನ್ನು ಬಳಸದಂತೆ, ಖರೀದಿಸದಂತೆ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ಮಹೇಶ್ ರೈ ತಿಳಿಸಿದರು.
ಈ ಬಗ್ಗೆ ಧ್ವನಿಗೂಡಿಸಿದ ಪಿ.ಎಂ.ಅಬ್ದುಲ್ ರಹಿಮಾನ್, ಸರಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನಾವು ಜನರಲ್ಲಿ ತೆಗೆದುಕೊಳ್ಳಬೇಡಿ ಎಂದರೆ ಯಾರೂ ಮಾತು ಕೇಳುವುದಿಲ್ಲ. ಚೀನ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕಷ್ಟೆ ಎಂದರು.
ಈ ಬಗ್ಗೆ ಅಧ್ಯಕ್ಷ ಯತಿರಾಜ್ ರೈ ಮಾತನಾಡಿ, ಸರಕಾರವೇ ಚೀನಿ ವಸ್ತುಗಳ ಆಮದು ಮಾಡಿಕೊಳ್ಳುವುದನ್ನು ರದ್ದು ಪಡಿಸುವಂತೆ ಸರಕಾರಕ್ಕೆ ಬರೆಯೋಣ ಎಂದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.
ಪರ್ಪುಂಜದಿಂದ ಕುಂಬ್ರದ ವರೆಗಿನ ಫ್ಲೆಕ್ಸ್ ಬ್ಯಾನರ್ ಕಂಬಗಳನ್ನು ತೆರವು ಗೊಳಿಸುವಂತೆ ಸದಸ್ಯ ಮಹೇಶ್ ರೈ ಅಗ್ರಹಿಸಿದರು.
ಕಾರ್ಯಕ್ರಮ ಮುಗಿದ ಮರುದಿನವೇ ಡೆಪೊಸಿಟ್ ನೀಡಿದ ಹಣವನ್ನು ತಗೆದುಕೊಂಡು ಹೋಗಲು ಬರುತ್ತಾರೆ. ಫ್ಲೆಕ್ಸ್ ತೆಗೆಯುತ್ತಾರೆ. ಕಂಬವನ್ನು ಹಾಗೇ ಉಳಿಸುತ್ತಾರೆ. ಇದರಿಂದ ವಾಹನ ಸಂಚಾರಕ್ಕೆ ಅಪಾಯ ಉಂಟಾಗುತ್ತದೆ ಎಂದರು. ಈ ಬಗ್ಗೆ ಚರ್ಚಿಸಿ ತೆರವುಗೊಳಿಸುಲು ನಿರ್ಣಯ ಮಾಡಲಾಯಿತು. ಫ್ಲೆಕ್ಸ್ ಬ್ಯಾನರಿಗೆ ಚ.ಮೀ.ಗೆ 3ರೂ. ಹಾಗೂ ಡೆಪೊಸಿಟ್ 500ರೂಪಾಯಿ ದರ ಪರಿಷ್ಕರಣೆ ಮಾಡಿ ನಿಗದಿ ಮಾಡಲಾಯಿತು. ದೇವಾಲಯ, ಮಸೀದಿ ಹಾಗೂ ಸಂಘಸಂಸ್ಥೆಗಳು ಕಾರ್ಯಕ್ರಮದ ಬಗ್ಗೆ ಲಿಖೀತ ಬರವಣಿಗೆ ಮೂಲಕ ಪತ್ರ ನೀಡಬೇಕು. ಈ ಬಗ್ಗೆ ನಿರ್ಣಯ ಮಾಡಲಾಯಿತು.
ಮಹಿಳಾ ಗ್ರಾಮ ಸಭೆ
ಆ. 29ರಂದು ಮಹಿಳಾ ಗ್ರಾಮ ಸಭೆ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಸಭೆಯು ಗ್ರಾಮ ಪಂಚಾಯತ್‌ಅಧ್ಯಕ್ಯ ಯತಿರಾಜ್ ರೈ ನಿಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಆ. 19ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಉಪಾಧ್ಯಕ್ಷೆ ಸುನಂದಾ ಉಪಸ್ಥಿತರಿದ್ದರು
ಗ್ರಾ.ಪಂ. ಸದಸ್ಯರಾದ, ವಿಶ್ವನಾಥ ಪಿ, ಶೀವಪ್ಪ ನಾಯ್ಕ, ಸುಂದರಿ, ಪಿ.ಎಂ.ಅಬ್ದುಲ್ ರಹಿಮಾನ್, ವಸಂತಿ ಡಿ., ತ್ರಿವೇಣಿ ಕೆ., ಭಾಗೀರಥಿ ಬಿ., ಮಹೇಶ್ ರೈ, ವಸಂತಿ ಆರ್. ಶೆಟ್ಟಿ, ಶಶಿಕಿರಣ್ ರೈ ಎನ್. ಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯದರ್ಶಿ, ದಾಮೋದರ ಸ್ವಾಗತಿಸಿ, ವಂದಿಸಿದರು. ಪಿಡಿಒ ಗೀತಾ ಬಿ.ಎಸ್. ವರದಿ ಮಂಡಿಸಿದರು. ಗುಮಾಸ್ತ ಜಯಶೀಲಾ ರೈ, ನೀರು ನಿರ್ವಾಹಕ ಕೇಶವ ಕೆ., ಬಿಲ್ ಕಲೆಕ್ಟರ್ ಗುಲಾಬಿ ಸಹಕಾರಿಸಿದರು.
ದಾರಿ ದೀಪ ವ್ಯವಸ್ಥೆಯಾಗಲಿ
ಪ್ರತಿ ವಾರ್ಡ್ ನಲ್ಲಿಯೂ ದಾರಿ ದೀಪ ವ್ಯವಸ್ಥೆ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗಬೇಕು ಎಂದು ಸದಸ್ಯ ಪಿ.ಎಂ. ಅಬ್ದುಲ್ ರಹಿಮಾನ್ ತಿಳಿಸಿದರು. ಈ ಬಗ್ಗೆ ಅಧ್ಯಕ್ಷ ಯತಿರಾಜ್ ರೈ ಮಾತನಾಡಿ, ಪಂಚಾಯತ್ ಮಟ್ಟದಲ್ಲಿ ದಾರಿ ದೀಪ ವ್ಯವಸ್ಥೆ ನಿರ್ವಹಣೆಗೆ ಒಬ್ಬರಿಗೆ ಜವಾಬ್ದಾರಿ ನೀಡುವುದು ಆತ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಇಲ್ಲಿ ಅಪಾಯ ಇದೆ. ಲೈನ್ ಕಡಿತಗೊಳಿಸಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.