ಸಭೆ, ಸಮಾರಂಭಗಳ ಸಂಖ್ಯೆ ಹೆಚ್ಚಳ 


Team Udayavani, Dec 10, 2017, 12:03 PM IST

10-Dec-7.jpg

ಮಹಾನಗರ: ಮಂಗಳೂರು ನಗರ ಬೆಳೆದಂತೆ ಸಭೆ, ಸಮಾರಂಭಗಳು, ಸಾಂಸ್ಕೃತಿಕ ಚಟುಟಿಕೆಗಳು, ಕಲಾ ಚಟುವಟಿಕೆಗಳು ಹೆಚ್ಚುತ್ತಿವೆ. ಇದಕ್ಕೆ ಅನುಗುಣವಾಗಿ ರಂಗಮಂದಿರ, ಸಭಾ ಭವನಗಳು ಅವಶ್ಯವಿರುತ್ತವೆ. ನಗರದ ಕೇಂದ್ರಭಾಗದಲ್ಲಿ ಸರಕಾರದ ವತಿಯಿಂದ ಪುರಭವನ ಇರುವುದರ ಜತೆಗೆ ಇತರ ಪ್ರಮುಖ ಭಾಗಗಳಲ್ಲೂ ಮಿನಿ ಪುರಭವನ ಗಳು ಇರುವುದು ನಾಗರಿಕರಿಗೆ ಸಭಾ ಭವನದ ಸೌಲಭ್ಯ ದೊರಕಿದಂತಾಗುತ್ತದೆ, ಪಾಲಿಕೆಗೂ ಆದಾಯ ಸೃಷ್ಟಿಯಾಗುತ್ತದೆ. 

ಪ್ರಸುತ್ತ ಕೇಂದ್ರ ಭಾಗದ ಹಂಪನ ಕಟ್ಟೆಯಲ್ಲಿ ಪುರಭವನವಿದೆ. ಅದರ ಪಕ್ಕದಲ್ಲೇ ಇನ್ನೊಂದು ಮಿನಿ ಪುರಭವನ ನಿರ್ಮಿಸಲಾಗಿದೆ. ಪುರಭವನ ನವೀಕರಣಗೊಂಡು ಹವಾನಿಯಂತ್ರಿತ ಸೌಲಭ್ಯ ಅಳವಡಿಕೆಯಾದ ಬಳಿಕ ಇದರ
ಬಾಡಿಗೆಯೂ ದುಬಾರಿಯಾದ ಹಿನ್ನಲೆಯಲ್ಲಿ ಕಲಾವಿದರಿಗೆ, ಜನಸಾಮಾನ್ಯರಿಗೆ ಕೈಗೆಟಕದ ಪರಿಸ್ಥಿತಿ ನಿರ್ಮಾಣವಾಯಿತು.

ಪರಿಣಾಮ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಂಠಿತಗೊಂಡಿವು. ಕಲಾವಿದರು ನಗರದಿಂದ ಹೊರಗಡೆ
ಹೋಗಿ ಕಲಾ ಚಟುವಟಿಕೆಗಳನ್ನು ಆಯೋಜಿಸತೊಡಗಿದರು. ಸಾಂಸ್ಕೃತಿಕ ವಲಯದಿಂದ, ನಾಗರಿಕರಿಂದ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಕದಲ್ಲಿ ಮಿನಿ ಪುರಭವನವನ್ನು ಸುಮಾರು 96 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಯಿತು. ಪುರಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಭೋಜನ ವ್ಯವಸ್ಥೆ ಮತ್ತು ಸಣ್ಣಮಟ್ಟದ ಕಾರ್ಯಕ್ರಮಗಳ ಆಯೋಜನೆಗೆ ಇದನ್ನು ನೀಡಲಾಗುತ್ತಿದೆ. ಇದರ ಜತೆಗೆ ಕಲಾವಿದರ ಬೇಡಿಕೆಗಳಿಗೆ ಸ್ಪಂದಿಸಿದ ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರು ಬಾಡಿಗೆ ದರವನ್ನು ಒಂದಷ್ಟು ಕಡಿಮೆ ಮಾಡಿದರು.

ಬಹುತೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಉಚಿತವಾಗಿ ಆಯೋಜನೆಗೊಳ್ಳುತ್ತವೆ. ಖಾಸಗಿ ಹಾಲ್‌
ಗಳ ಬಾಡಿಗೆ ನೀಡುವಷ್ಟು ಆರ್ಥಿಕ ಸಂಪನ್ಮೂಲ ಬಹಳಷ್ಟು ಕಲಾವಿದರು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋ
ಜಕರಿಗೆ ಇರುವುದಿಲ್ಲ. ಹೀಗಾಗಿ ಅವರು ಪುರಭವನವನ್ನು ಆಶ್ರಯಿಸಬೇಕಾಗುತ್ತದೆ. 

ಇದರಿಂದಾಗಿ ಪುರಭವನಕ್ಕೂ ಹೆಚ್ಚಿನ ಒತ್ತಡವಿರುತ್ತದೆ. ಪ್ರಸ್ತುತ ಮಂಗಳೂರು ಪುರಭವನದಲ್ಲಿ ಕಾರ್ಯಕ್ರಮಗಳಿಗೆ
ಬುಕ್ಕಿಂಗ್‌ ಮಾಡಲು ಪೈಪೋಟಿ ಇದ್ದು ಜಾಸ್ತಿ ಸಂಖ್ಯೆಯಲ್ಲಿ ಆಯೋಜಕರು, ಆಕಾಂಕ್ಷಿಗಳು ಇರು ವುದರಿಂದ ಲಾಟ್‌
ಗಳನ್ನು ತೆಗೆಯುವ ಮೂಲಕ ನಿರ್ಧರಿಸಲಾಗುತ್ತದೆ. ಇದರಿಂದಾಗಿ ಅವಕಾಶ ಸಿಗದವರು ಬೇರೆ ಸಭಾ ಭವನಗಳನ್ನು ಆಶ್ರಯಿಸಬೇಕಾಗುತ್ತದೆ. 

ಮಿನಿ ಪುರಭವನಗಳು ಪೂರಕ
ಪುರಭವನದ ಬಳಿಯಲ್ಲಿ ನಿರ್ಮಾಣಗೊಂಡಿರುವ ಮಿನಿಪುರಭವನದ ಮಾದರಿಯಲ್ಲೇ ನಗರದ ಕನಿಷ್ಠ ನಾಲ್ಕು ಕಡೆಗಳಲ್ಲಿ ಮಿನಿ ಪುರಭವನ ನಿರ್ಮಿಸುವುದರಿಂದ ಸಾಂಸ್ಕೃತಿಕ ಚುಟುವಟಿಕೆಗಳು ಸೇರಿದಂತೆ ಕಾರ್ಯಕ್ರಮಗಳ ಆಯೋಜಕರಿಗೆ ಸಹಾಯವಾಗುತ್ತದೆ. ಮಿನಿ ಪುರಭವನ ಮಧ್ಯಮ ಗಾತ್ರದ ಸಭಾಭವನದ ಮಾದರಿಯಲ್ಲಿರುವುದರಿಂದ ಬಾಡಿಗೆ ಯನ್ನು ಕೈಗೆಟಕುವ ರೀತಿಯಲ್ಲಿ ನಿಗದಿಪಡಿಸಲು ಸಾಧ್ಯವಾಗುತ್ತದೆ. ಕಾರ್ಯಕ್ರಮ ಆಯೋಜಕರಿಗೂ ತಮ್ಮ ಬಜೆಟ್‌ಗೆ ಅನುಗುಣವಾಗಿ ಇದನ್ನು ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ.

ನನಸಾಗದ ರಂಗಮಂದಿರ
ಮಂಗಳೂರಿನಲ್ಲಿ ಸುಮಾರು 25 ವರ್ಷಗಳಿಂದ ಸುದ್ದಿಯಲ್ಲಿರುವ ರಂಗ ಮಂದಿರ ಇನ್ನೂ ನಿರ್ಮಾಣಗೊಂಡಿಲ್ಲ.
ಬೊಂದೇಲ್‌ನ ಮಹಿಳಾ ಪಾಲಿಟೆಕ್ನಿಕ್‌ ಸಮೀಪ ಲಭ್ಯವಿರುವ 7 ಎಕರೆ ಸರಕಾರಿ ಜಾಗದಲ್ಲಿ ಸುಮಾರು 3.35 ಎಕರೆ ಪ್ರದೇಶವನ್ನು ಇದಕ್ಕೆ ಮೀಸಲಿರಿಸಲಾಗಿದೆ. ಇದು ಆಗಿ 3 ವರ್ಷಗಳಾಗುತ್ತಾ ಬಂದರೂ ಅನುದಾನದ ಹೊಂದಾಣಿಕೆ ಸಮಸ್ಯೆಯಿಂದಾಗಿ ನಿರ್ಮಾಣಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಇನ್ನೂ ಸಾಧ್ಯವಾಗಿಲ್ಲ .

ರಂಗ ಮಂದಿರದ ಪ್ರಸ್ತುತ ವಿನ್ಯಾಸದಂತೆ ಇದರಲ್ಲಿ ಮುಖ್ಯ ಸಭಾಂಗಣ (1,200 ಪ್ಲಸ್‌ ಸಾಮರ್ಥ್ಯ), ಸಣ್ಣ ಸಭಾಂಗಣ (500ಮಂದಿ ಸಾಮರ್ಥ್ಯ)ಗಳಿರುತ್ತವೆ. ಜತೆಗೆ ನಾಟಕ ಇತ್ಯಾದಿಗಳನ್ನು ಅಭ್ಯಾಸ ಮಾಡುವ ಕೊಠಡಿ, ಕೊಂಕಣಿ, ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಕಚೇರಿಗಳು, ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಳು, ಕ್ಯಾಂಟೀನ್‌ ಇರುತ್ತವೆ.

ಲೈಬ್ರೈರಿ, ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸುವ ರಂಗ ಮಂದಿರದಲ್ಲಿ ಆಕರ್ಷಕ ರೀತಿಯ ಒಳವಿನ್ಯಾಸರೂಪಿಸಲು
ನಿರ್ಧರಿಸಲಾಗಿತ್ತು. ರಂಗ ಮಂದಿರ ನಿರ್ಮಾಣವಾದರೆ ರಂಗ ಚುಟುವಟಿಕೆಗಳು, ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ಅನುಕೂಲವಾಗುತ್ತದೆ. ಆದರೆ ಇದು ಸದ್ಯದ ಮಟ್ಟಿಗೆ ಸಾಕಾರಗೊಳಿಸುವ ಸಾಧ್ಯತೆಗಳು ಗೋಚರಿಸುತ್ತಿಲ್ಲ

ಮಿನಿ ಪುರಭವನ ನಿರ್ಮಿಸ ಬಹುದಾದ ಸ್ಥಳಗಳು
ಮುಖ್ಯವಾಗಿ ಉಪನಗರಗಳಾಗಿ ಅಭಿವೃದ್ದಿ ಹೊಂದುತ್ತಿರುವ ಸುರತ್ಕಲ್‌, ಕಾವೂರು, ವಾಮಂಜೂರು, ಜೆಪ್ಪು , ಪಡೀಲ್‌
ಪ್ರದೇಶಗಳಲ್ಲಿ ಮಿನಿ ಪುರಭವನಗಳನ್ನು ನಿರ್ಮಿಸಬಹುದಾಗಿದೆ. ಇದರಿಂದ ಆ ಭಾಗದ ಜನರು ಕಾರ್ಯಕ್ರಮಗಳಿಗೆ ಕೇಂದ್ರ ಪುರಭವನನ್ನು ಆಶ್ರಯಿಸುವುದು ತಪ್ಪುತ್ತದೆ. ಪುರಭವನದ ಮೇಲಿನ ಒತ್ತಡವು ಕಡಿಮೆಯಾಗುತ್ತದೆ.

ಪುರಭವನ ನಿರ್ಮಿಸುವುದು ಉತ್ತಮ
ಮಂಗಳೂರು ನಗರದಲ್ಲಿ ಸಭೆ, ಸಮಾರಂಭಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಂಪನಕಟ್ಟೆಯಲ್ಲಿರುವ ಪುರಭವನವನ್ನೇ ಅವಲಂಬಿಸುವ ಬದಲು ನಗರದ ಕೆಲವು ಪ್ರಮುಖ ಪ್ರದೇಶಗಳಲ್ಲಿ ಮಿನಿ ಪುರಭವನಗಳನ್ನು ನಿರ್ಮಿಸುವುದು ಉತ್ತಮ. ಇದರಿಂದ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೂ ಅನುಕೂಲವಾಗುತ್ತದೆ ಮತ್ತು ಸ್ಥಳೀಯವಾಗಿಯೂ ಸಭಾಭವನ ಲಭ್ಯವಾಗುತ್ತದೆ. ಇದರ ಸಾಧ್ಯಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ಪೂರಕ ಕ್ರಮಗಳ ಕುರಿತು ಚಿಂತನೆ ನಡೆಸಲಾಗುವುದು.
ಕವಿತಾ ಸನಿಲ್‌,ಮೇಯರ್‌,
   ಮಂಗಳೂರು ಮಹಾನಗರ ಪಾಲಿಕೆ 

  ಕೇಶವ ಕುಂದರ್‌

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.