ತೇಪೆಯಲ್ಲೇ ಕಳೆಯಬೇಕು ಅಭಿವೃದ್ಧಿಗೆ ಕಾಯಬೇಕು
Team Udayavani, Nov 13, 2021, 4:30 AM IST
ಸುರತ್ಕಲ್: ಮಹಾನಗರ ಪಾಲಿಕೆಯ ಸುರತ್ಕಲ್ ವಲಯ ವ್ಯಾಪ್ತಿಯಲ್ಲಿ ಬರುವ ಕಾಟಿಪಳ್ಳ ಪೂರ್ವ ವಾರ್ಡ್‌ನ ಪ್ರದೇಶ ಹೆಚ್ಚಾಗಿ ನವ ಮಂಗಳೂರು ಬಂದರು ನಿರ್ಮಾಣದಿಂದ ನಿರ್ವಸಿತರಾದವರ ಪುನರ್ ವಸತಿ ಪ್ರದೇಶವಾಗಿದ್ದು, ಜನ ವಾಸಿತರ ಬಡಾವಣೆಯೇ ಹೆಚ್ಚು. ಇಲ್ಲಿನ ಒಳರಸ್ತೆಗಳು ಹೆಚ್ಚು ಅಗಲವಾಗಿದ್ದರೂ ಡಾಮರು ಕಾಮಗಾರಿ ಸಹಿತ ನಿರ್ವಹಣೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಡಾಮರು ಹಾಕಲಾದ ರಸ್ತೆಗಳು ತೇಪೆ ಕಾರ್ಯದಲ್ಲೇ ಹೆಚ್ಚು ವರ್ಷಗಳನ್ನು ಕಳೆದಿವೆ. ಆದರೆ ಇದೀಗ ಹಲವು ಕಡೆಗಳಲ್ಲಿ ರಸ್ತೆಗಳ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿವೆ. ಹೊಸ ಬಡಾವಣೆಗಳು ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದರೂ ಬಹುತೇಕ ಕಡೆಗಳಲ್ಲಿ ಮೂಲಸೌರ್ಯ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಬಹಳಷ್ಟು ಕಡೆ ಒಳರಸ್ತೆಗಳು ಕಚ್ಚಾ ರಸ್ತೆಗಳಾಗಿದ್ದು, ಡಾಮರು ಕಾಮಗಾರಿಗೆ ಕಾಯುತ್ತಿವೆ.
ಕಾಟಿಪಳ್ಳ ಪೂರ್ವ, ಸುರತ್ಕಲ್ ಪೂರ್ವ, ಇಡ್ಯಾ ಪೂರ್ವ, ಹೊಸಬೆಟ್ಟು ವಾರ್ಡ್ ವ್ಯಾಪ್ತಿಯು ಮಂಗಳೂರು ನಗರಕ್ಕೆ ಹೋಲಿಸಿದರೆ ಹೊರ ವಲಯದ ಪ್ರದೇಶಗಳು. ಈ ಕಾರಣದಿಂದಾಗಿ ಇಲ್ಲಿನ ವಾರ್ಡ್‌ಗಳಲ್ಲಿ ಒಳರಸ್ತೆಗಳು ಸಹಜವಾಗಿಯೇ ಕಚ್ಚಾ ರಸ್ತೆಗಳಾ ಗಿದ್ದು, ಹಂತ-ಹಂತವಾಗಿ ಡಾಮರು ಕಾಮಗಾರಿ ನಡೆಯಬೇಕಿದೆ. ಇನ್ನು ಸಾಮಾನ್ಯವಾಗಿ ಈ 4 ವಾರ್ಡ್‌ಗಳಲ್ಲಿ ಹಲವೆಡೆ ಒಳಚರಂಡಿಗಾಗಿ ಅಗೆದ ರಸ್ತೆಗಳು ಮರು ಡಾಮರು ಹಾಕಿಲ್ಲ. ರಸ್ತೆಯ ಇಕ್ಕೆಲಗಳಲ್ಲೂ ಡಾಮರು ಹಾಕಿದ್ದು, ಜೋರು ಮಳೆಗೆ ಕಿತ್ತು ಹೋಗಿದ್ದು, ತೇಪೆ ಕಾರ್ಯ ನಡೆಯಬೇಕಿದೆ. ಕುಡ್ಸೆಂಪ್ ಬಳಿ ನಿರ್ವಹಣ ಅನುದಾನವಿದ್ದರೂ ಕಾಮಗಾರಿ ಆಗಿಲ್ಲ. ಕೆಲವೆಡೆ ಮನೆ ಕಾಮಗಾರಿಗೆ ಬೇಕಾದ ಸಲಕರಣೆಗಳನ್ನು ರಸ್ತೆ ಬದಿಯಲ್ಲೇ ರಾಶಿ ಹಾಕಿರುವುದರಿಂದಲೂ ಡಾಮರು ಕಿತ್ತು ಹೋಗಿ ರಸ್ತೆಗಳು ದುಸ್ಥಿತಿಯಲ್ಲಿವೆ.
ಇಡ್ಯಾ ಪೂರ್ವ ವಾರ್ಡ್ 6ರಲ್ಲಿ ಜನತಾ ಕಾಲನಿ ಒಳರಸ್ತೆ ಸಂಪೂರ್ಣ ಹೊಂಡಮ ಯವಾಗಿದೆ. ರಸ್ತೆಯಂಚುಗಳು ಮಳೆ ನೀರಿಗೆ ಕೊಚ್ಚಿ ಹೋಗಿ ಸಂಚಾರ ಅಪಾಯಕಾರಿ ಯಾಗಿದೆ. ಇಲ್ಲಿ ಕಾಂಕ್ರೀಟ್ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ. ಆದರೆ ಹಲವೆಡೆ ಹೊಂಡಗಳು ಅಪಾಯಕಾರಿ ಹಂತದಲ್ಲಿರುವ ಕಾರಣ ಬಹಳ ತುರ್ತಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಪಾಲಿಕೆ ಗಮನಹರಿಸಬೇಕಿದೆ. ಇಲ್ಲಿನ ಹಿಂದುಳಿದ ಕಾಲನಿಗಳ ರಸ್ತೆಗಳಿಗೆ ಮರುಡಾಮರು ಹಾಕದ ಕಾರಣ ಬಹಳಷ್ಟು ಹಾಳಾಗಿವೆ. ಇನ್ನು ಹಲವೆಡೆ ಡಾಮರು ಮಣ್ಣು ಮಿಶ್ರಿತ ರಸ್ತೆ ಈಗಲೂ ಸಂಚಾರಕ್ಕೆ ಬಳಕೆಯಾಗುತ್ತಿದೆ. ಆಶ್ರಯ ಕಾಲನಿ ರಸ್ತೆ, ಕಟ್ಲ ಪ್ರದೇಶದ ಒಳರಸ್ತೆ ಭಾಗಶಃ ಕಾಂಕ್ರೀಟ್ ಹಾಕಿದ್ದಾರೆ. ಹಲವು ಕಡೆ ಗುಂಡಿ ಬಿದ್ದ ಡಾಮರು ರಸ್ತೆಯಲ್ಲಿಯೇ ಓಡಾಡಬೇಕಾದ ಅನಿವಾರ್ಯಯಿದೆ.
ಹೊಸಬೆಟ್ಟು ವಾರ್ಡ್‌ನಲ್ಲಿ ಗ್ರಾಮ ಸಂಘದ ಎದುರಿನ ರಸ್ತೆ ನೇರವಾಗಿ ದೀಪಾ ಫಾರ್ಮ್ ಬಳಿ ಸಂಪರ್ಕದ ಒಳರಸ್ತೆಯಾಗಿದ್ದು, ಬಹುತೇಕ ಕಡೆಗಳಲ್ಲಿ ಹೊಂಡ ಬಿದ್ದಿದೆ. ಪ್ರೇಮ್ ನಗರ ವ್ಯಾಪ್ತಿಯಲ್ಲೂ ರಸ್ತೆಗಳು ಸುಸ್ಥಿತಿಯಲ್ಲಿಲ್ಲ. ಹೊಸಬೆಟ್ಟು ನವಗಿರಿ ಪ್ರದೇಶ ಮತ್ತಿತರ ಒಳಪ್ರದೇಶಗಳ ರಸ್ತೆಗಳು ಕೂಡ ಸುಧಾರಿಸಿಲ್ಲ. ಹೊರ ವಲಯದ ವಾರ್ಡ್ ಗಳಲ್ಲಿಯೂ ನಾನಾ ಕಾಮಗಾರಿಗಳಿಗಾಗಿ ರಸ್ತೆಯನ್ನು ಅಗೆದು ಹಾಕಲಾಗುತ್ತಿದೆ. ಆದರೆ ಕಾಮಗಾರಿ ಮುಗಿದ ಬಳಿಕ ಹೊಂಡ ಮುಚ್ಚಲು ಹೆಚ್ಚಿನ ಗಮನ ನೀಡದೇ ಇರುವುದು ಕೂಡ ಇಲ್ಲಿನ ರಸ್ತೆಗಳು ಹಾಳಾಗುತ್ತಿರಲು ಪ್ರಮುಖ ಕಾರಣ. ಹಲವೆಡೆ ಕುಡ್ಸೆಂಪ್‌ನವರ ಅವಾಂತರದಿಂದ ಇದ್ದ ರಸ್ತೆಯೂ ಕೆಟ್ಟು ಹೋಗಿದೆ. ಸುರತ್ಕಲ್ ಪೂರ್ವ ವಾರ್ಡ್‌ನ ಕೃಷ್ಣಾಪುರ ಮಠದ ರಸ್ತೆ ಅಭಿವೃದ್ಧಿ ಪಡಿಸಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಆದರೆ ಇಲ್ಲಿನ ನಿವಾಸಿಗಳು ಇಷ್ಟೊಂದು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಈಗಲೂ ಅದು ಕೇವಲ ಭರವಸೆಯಾಗಿಯೇ ಉಳಿದುಕೊಂಡಿದೆ. ಕೊಡಿಪಾಡಿ ಮಠ ಸಂಪರ್ಕ ರಸ್ತೆ ಕೂಡ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಗೋಕುಲ್ ಡೈರಿ ಭಾಗದಲ್ಲಿ ಮಣ್ಣಿನ ರಸ್ತೆಯಿದ್ದು ಅಭಿವೃದ್ಧಿಗೆ ಕಾಯುತ್ತಿದೆ.
ಬೇಡಿಕೆಗಳು:
- ಕೃಷ್ಣಾಪುರ ಮಠದ ರಸ್ತೆ ಅಭಿವೃದ್ಧಿಪಡಿಸಿ ಎಂಬುದು ಬಹುಕಾಲದ ಬೇಡಿಕೆ.
- ಹೊಸಬೆಟ್ಟು ವಾರ್ಡ್‌ನಲ್ಲಿ ಮಳೆ ನೀರು ಹರಿದು ಹೋಗಿ ರಸ್ತೆ ಕೆಟ್ಟುಹೋಗಿದ್ದು, ದುರಸ್ತಿಯಾಗಬೇಕಿದೆ.
- ಇಡ್ಯಾ ಜನತಾ ಕಾಲನಿ ಒಳರಸ್ತೆ ಸಂಪೂರ್ಣ ಹೊಂಡಮಯವಾಗಿದೆ.
-ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.