ಮಂಗಳೂರು ದಕ್ಷಿಣ-ಉತ್ತರ ವಲಯಕ್ಕೆ 1.32  .ರೂ.ಅನುದಾನ


Team Udayavani, May 26, 2018, 10:24 AM IST

26-may-1.jpg

ಮಹಾನಗರ: ಸರಕಾರಿ ಶಾಲೆಗಳೆಂದರೆ ಅಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳೂ ಕೂಡ ಸರಕಾರದ ನಿರ್ದೇಶನದಂತೆಯೇ ನಡೆಯಬೇಕಾಗುತ್ತದೆ. ಅಲ್ಲಿನ ಹೆಚ್ಚಿನ ಅಭಿವೃದ್ಧಿಕಾರ್ಯಗಳು ಸರಕಾರದ ಅನುದಾನ ದಿಂದಲೇ ನಡೆಯಬೇಕಾಗುತ್ತದೆ. ಪ್ರಸ್ತುತ ಮಂಗಳೂರಿನ (ದಕ್ಷಿಣ ಹಾಗೂ ಉತ್ತರ ವಲಯ) ಸರಕಾರಿ ಶಾಲೆಗಳಿಗೆ 2017-18ನೇ ಸಾಲಿನಲ್ಲಿ ಒಟ್ಟು 1.32 ಕೋ.ರೂ.ಅನುದಾನ ಬಿಡುಗಡೆಗೊಂಡಿದೆ.

ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 5 ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ 45.2 ಲಕ್ಷ ರೂ. ಹಾಗೂ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 11 ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ 87.15 ಲಕ್ಷ ರೂ.ಬಿಡುಗಡೆಗೊಂಡಿದೆ.

ಮಂಗಳೂರು ಉತ್ತರ
ಬೆಂಗ್ರೆ ಕಸಬ ಹಿ.ಪ್ರಾ.ಶಾಲೆಯ ಮೇಲ್ಛಾವಣಿ ದುರಸ್ತಿ ಹಾಗೂ ಮುಂಭಾಗದ ಗೋಡೆ ದುರಸ್ತಿ ಕಾರ್ಯಕ್ಕೆ 8.70 ಲಕ್ಷ ರೂ., ಕವತ್ತಾರ್‌ ಹಿ.ಪ್ರಾ.ಶಾಲೆಯ 2 ತರಗತಿ ಕೋಣೆಗಳ ಮೇಲ್ಛಾವಣಿ ದುರಸ್ತಿ ಮತ್ತು 1 ತರಗತಿಯ ನೆಲ ದುರಸ್ತಿ ಕಾರ್ಯಕ್ಕೆ 2 ಲಕ್ಷ ರೂ., ಸುರತ್ಕಲ್‌  ಹಿ.ಪ್ರಾ.ಶಾಲೆಯ ಮೇಲ್ಛಾವಣಿ, ಕಿಟಕಿ ಹಾಗೂ ಗೋಡೆ ದುರಸ್ತಿ ಕಾರ್ಯಕ್ಕೆ 1.5 ಲಕ್ಷ ರೂ.ಬಿಡುಗಡೆಗೊಂಡು, ಕಾಮಗಾರಿ ಪೂರ್ತಿಗೊಂಡಿದೆ.

ಕೆ.ಎಸ್‌.ರಾವ್‌ ನಗರ ಮೂಲ್ಕಿ ಲಿಂಗಪ್ಪಯ್ಯ ಕಾಡು ಶಾಲೆಯ 2 ತರಗತಿ ಕೋಣೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶಾಸಕರ ಅನುದಾನದ ಒಂದು ಕೊಠಡಿಯ ಪಿಲ್ಲರ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕಾಗಿ ಒಟ್ಟು 25 ಲಕ್ಷ ರೂ.ಬಿಡುಗಡೆಗೊಂಡಿದೆ. ಕಾಪಿಕಾಡು ಹಿ.ಪ್ರಾ.ಶಾಲೆಗೆ ಜಿ.ಪಂ.ವತಿಯಿಂದ 8 ಲಕ್ಷ ರೂ.ಗಳ ತರಗತಿ ಕೋಣೆ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. 

ಮಂಗಳೂರು ದಕ್ಷಿಣ
ಇನೋಳಿ ಹಿ.ಪ್ರಾ.ಶಾಲೆಯ 2 ತರಗತಿ ಕೋಣೆಗಳ ದುರಸ್ತಿ 3 ಲಕ್ಷ ರೂ, ಬೋಳಾರ ಹಿ.ಪ್ರಾ.ಶಾಲೆಯ 2 ತರಗತಿ ಕೋಣೆಗಳ ದುರಸ್ತಿ 3 ಲಕ್ಷ ರೂ, ಕಲ್ಕಟ್ಟ ಸರಕಾರಿ ಪ್ರೌಢಶಾಲೆಗೆ ಕೊಠಡಿ ನಿರ್ಮಾಣ/ದುರಸ್ತಿ 2 ಲಕ್ಷ ರೂ, ಪಾವೂರು ಸರಕಾರಿ ಪ್ರೌಢ ಶಾಲೆ ಕೊಠಡಿ ನಿರ್ಮಾಣ/ದುರಸ್ತಿ 2 ಲಕ್ಷ ರೂ.ಬಿಡುಗಡೆಗೊಂಡಿದ್ದು, ಕಾಮಗಾರಿ ಪೂರ್ಣಗೊಂಡಿದೆ.

ರಾಜಗುಡ್ಡೆ ಹಿ.ಪ್ರಾ.ಶಾಲೆಗೆ ಒಂದು ಕೊಠಡಿ ನಿರ್ಮಾಣ 8.70 ಲಕ್ಷ ರೂ, ಮಳಲಿ ಸರಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ/ದುರಸ್ತಿ 8 ಲಕ್ಷ ರೂ, ಕುಪ್ಪೆ ಪದವು ಸರಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ/ದುರಸ್ತಿ 10 ಲಕ್ಷ ರೂ, ಗುರುಪುರ ಸರಕಾರಿ ಪ್ರೌಢಶಾಲೆಗೆ 26.50 ಲಕ್ಷ ರೂ.ಗಳ 2 ಕೊಠಡಿ ನಿರ್ಮಾಣ, ಕಲ್ಕಟ್ಟ ಸರಕಾರಿ ಪ್ರೌಢಶಾಲೆಗೆ 13.25 ಲಕ್ಷ ರೂ.ಗಳ ಒಂದು ಕೊಠಡಿ ನಿರ್ಮಾಣ, ಕಂಕನಾಡಿ ಹಿ.ಪ್ರಾ.ಶಾಲೆಯ 2 ಕೊಠಡಿ ದುರಸ್ತಿ 2ಲಕ್ಷ ರೂ, ಇನೋಳಿ ಹಿ.ಪ್ರಾ. ಶಾಲೆಯ 8.70 ಲಕ್ಷ ರೂ.ಗಳ ಕೊಠಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಜತೆಗೆ ಜಿಲ್ಲಾ ಪಂಚಾಯತ್‌ ಕಾರ್ಯಕ್ರಮದಡಿಯಲ್ಲಿ ಬೋಳಿ ಯಾರು, ಕೀನ್ಯ ಬೆಳರಿಂಗೆ, ಕಲ್ಕಟ್ಟ ಮಂಜುನಾಡಿ ಹಿ.ಪ್ರಾ. ಶಾಲೆಗಳು, ಪೆರ್ಮನ್ನೂರು, ಅದ್ಯಪಾಡಿ,ಕುಪ್ಪೆಪದವು, ಕಿನ್ನಿಕಂಬಳ, ಸೋಮೇಶ್ವರ ಉಚ್ಚಿಲ, ಮುಚ್ಚಾರು ಹಾಗೂ ಕಲ್ಲಾಡಿ ಯ ಸರಕಾರಿ ಪ್ರೌಢಶಾಲೆಗಳಿಗೆ ತಲಾ 70 ಸಾವಿರ ರೂ.ಗಳಂತೆ 7 ಲಕ್ಷ ರೂ. ಮಂಜೂರುಗೊಂಡು ಕಾಮಗಾರಿ ಮುಗಿದಿದೆ. ಜಿ.ಪಂ.ನ ಸಾಮಾಗ್ರಿ ಸರಬರಾಜು ಯೋಜನೆಯಲ್ಲಿ ಪಾವೂರು, ನ್ಯೂ ಪಡ್ಪು , ಮೂಡುಶೆಡ್ಡೆ, ಕಲ್ಲಟ, ಮುತ್ತೂರು ಸರಕಾರಿ ಪ್ರೌಢಶಾಲೆಗಳಿಗೆ ತಲಾ 69,800 ರೂ.ಗಳಂತೆ ಒಟ್ಟು 3.49 ಲಕ್ಷ ರೂ.ಬಿಡುಗಡೆಗೊಂಡಿದೆ.

ಶಾಲೆಗಳ ಅಭಿವೃದ್ಧಿ
ವಿದ್ಯಾರ್ಥಿಗಳ ಬೇಸಗೆ ರಜೆ ಮುಗಿದು ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೆ ಕೇವಲ 2 ದಿನಗಳು ಮಾತ್ರ ಉಳಿದಿದ್ದು, ಎಲ್ಲ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ವಾಗತಿಸುವುದಕ್ಕೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳು ಕೂಡ ವಿದ್ಯಾರ್ಥಿ ಸ್ನೇಹಿಯಾಗಿ ಅಭಿವೃದ್ಧಿಗೊಳ್ಳಬೇಕಿದ್ದು, ಅದಕ್ಕಾಗಿ ಬಹುತೇಕ ಶಾಲೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. 

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.