![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 6, 2019, 1:00 AM IST
ವೇಣೂರು: ಸೋಮವಾರ ನಿಧನಹೊಂದಿದ ಕೇಂದ್ರದ ಮಾಜಿ ಸಚಿವ ವಿ. ಧನಂಜಯ ಕುಮಾರ್ ಅವರ ಅಂತ್ಯಸಂಸ್ಕಾರ ಮಂಗಳವಾರ ಹುಟ್ಟೂರಾದ ಬೆಳ್ತಂಗಡಿ ತಾಲೂಕು ವೇಣೂರಿನಲ್ಲಿ ನೆರವೇರಿತು.
ಮಂಗಳೂರಿನ ಅವರ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಪೂರ್ವಾಹ್ನ 11.50ಕ್ಕೆ ಪಾರ್ಥಿವ ಶರೀರವನ್ನು ವೇಣೂರಿಗೆ ತರಲಾಯಿತು. ಮೆರವಣಿಗೆ ಮೂಲಕ ಶ್ರೀ ಪಾರ್ಶ್ವನಾಥ ಬಸದಿಗೆ ತೆರಳಿ ಪೂಜೆ ಸಲ್ಲಿಸಿ 12.35ಕ್ಕೆ ಪಂಜಾಲುಬೈಲು ಮನೆಗೆ ತರಲಾಯಿತು. ಬಳಿಕ ಜೈನ ಸಂಪ್ರದಾಯದಂತೆ ಅಂತ್ಯ ವಿಧಿ ನೆರವೇರಿಸಲಾಯಿತು. ಪುತ್ರ ಪರಿಣಿತ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ತಾಯಿ ಗುಣವತಿಯಮ್ಮ, ಪತ್ನಿ ವನಿತಾ, ಪುತ್ರಿ ಪವಿತ್ರಾ, ಅಳಿಯ ವಿಕಾಸ್, ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.
ಸಚಿವ ಯು.ಟಿ. ಖಾದರ್, ಜಿಲ್ಲಾಧಿಕಾರಿ ಡಾ| ಶಶಿಕಾಂತ ಶೆಂಥಿಲ್, ಎಸ್‌ಪಿ ಬಿ.ಎಂ. ಲಕ್ಷ್ಮೀಪ್ರಸಾದ್, ಸಹಾಯಕ ಅಧೀಕ್ಷಕ ಸೈದುಲ್ಲಾ ಅಧಾವತ್, ಪುತ್ತೂರು ಎಸಿಡಾ| ಎಚ್.ಸಿ. ಕೃಷ್ಣಮೂರ್ತಿ, ಗಣ್ಯರಾದ ಬಿ. ರಮಾನಾಥ ರೈ, ಕೆ. ಅಭಯಚಂದ್ರ, ಕೆ. ವಸಂತ ಬಂಗೇರ, ಸಂಜೀವ ಮಠಂದೂರು, ಡಿ. ಹಷೇಂದ್ರ ಕುಮಾರ್, ಡಾ| ಯಶೋವರ್ಮ, ಡಾ| ಎಂ. ಮೋಹನ ಆಳ್ವ, ಕ್ಯಾ| ಗಣೇಶ ಕಾರ್ಣಿಕ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಅವರು ಸೋಮವಾರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.
ಬಿಜೈಯಲ್ಲಿ ಅಂತಿಮ ದರ್ಶನ
ಮಂಗಳೂರು: ವಿ. ಧನಂಜಯ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಗ್ಗೆ 7ರಿಂದ 10.30ರ ವರೆಗೆ ಬಿಜೈಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜನಪ್ರತಿನಿಧಿಗಳಾದ ನಳಿನ್ ಕುಮಾರ್ ಕಟೀಲು, ಯು.ಟಿ. ಖಾದರ್, ವೇದವ್ಯಾಸ ಕಾಮತ್, ಗಣ್ಯರಾದ ಬಿ. ಇಬ್ರಾಹಿಂ, ಯೋಗೀಶ್ ಭಟ್, ಜೆ.ಆರ್. ಲೋಬೋ, ಹರೀಶ್ ಕುಮಾರ್, ಮೋನಪ್ಪ ಭಂಡಾರಿ, ರುಕ್ಮಯ ಪೂಜಾರಿ, ಸವಣೂರು ಸೀತಾರಾಮ ರೈ, ಸಂತೋಷ್ ಬೋಳಿಯಾರ್, ಕ್ಯಾ| ಗಣೇಶ ಕಾರ್ಣಿಕ್, ಎಸ್.ಪಿ. ಚಂಗಪ್ಪ, ವಿಜಯ ಕುಮಾರ್ ಶೆಟ್ಟಿ, ಕಾರ್ಪೊರೇಟರ್ ಅಶೋಕ್ ಡಿ.ಕೆ. ಲ್ಯಾನ್ಸ್‌ಲಾಟ್ ಪಿಂಟೋ, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಬೃಜೇಶ್ ಚೌಟ ಮೊದಲಾದವರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಪೇಟೆ ಬಂದ್
ಪಾರ್ಥಿವ ಶರೀರವನ್ನು ವೇಣೂರು ಚರ್ಚ್ ಬಳಿಯಿಂದ ಮೆರವಣಿಗೆ ಮೂಲಕ ಶ್ರೀ ಮಹಾವೀರ ನಗರಕ್ಕೆ, ಬಳಿಕ ಶ್ರೀರಾಮನಗರದ ಮೂಲಕ ಪಂಜಾಲುಬೈಲು ಮನೆಗೆ ಸಾಗಿಸಲಾಯಿತು. ಈ ಸಂದರ್ಭ ಶ್ರೀರಾಮ ನಗರದ ಎಲ್ಲ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಗೌರವ ಸಲ್ಲಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.