1,750 ಕಿ. ಮೀ. ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್‌ನಲ್ಲಿ ಧನರಾಜ್ ಅಮೋಘ
Team Udayavani, Feb 4, 2019, 6:22 AM IST
ಮಹಾನಗರ : ವಿಆರ್ ಸೈಕ್ಲಿಂಗ್ ಮಂಗಳೂರು ತಂಡದ ಧನರಾಜ್ ಕರ್ಕೇರ ಅವರು 1750 ಕಿ.ಮೀ. ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್‌ನಲ್ಲಿ ಭಾಗವಹಿಸಿ ಅದನ್ನು ಪೂರ್ಣಗೊಳಿಸಿದ ಮೊತ್ತ ಮೊದಲ ಕನ್ನಡಿಗ ಹಾಗೂ ಮಂಗಳೂರಿನ ಮೊದಲ ಸೈಕ್ಲಿಸ್ಟ್‌ಅನ್ನಿಸಿಕೊಂಡರು.
ಅಲ್ಟ್ರಾ ಸ್ಪೈಸ್ ಎನ್ನುವುದು ಇನ್ಸ್ಪಿಯರ್ ಇಂಡಿಯಾ ನಡೆಸುವ ಭಾರತದ ಅತ್ಯಂತ ಕಠಿಣ ಮತ್ತು ಬಹು ದೂರದ, ಸಹಿಷ್ಣುತೆಯ ಸೆ„ಕಲ್ ರೇಸ್. ಇದರ 3ನೇ ಆವೃತ್ತಿಯಲ್ಲಿ, ದೇಶದ ವಿವಿಧ ಭಾಗಗಳಿಂದ ಬಂದ 11 ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು.
ಗೋವಾದ ಕಡಲತೀರದಿಂದ ಪ್ರಾರಂಭವಾಗುವ ಈ ಸೈಕ್ಲಿಂಗ್ ಸ್ಪರ್ಧೆ, ಕರಾವಳಿಯ ರಸ್ತೆಗಳಲ್ಲಿ ಹಾದುಹೋಗಿ ಹೊನ್ನಾವರದಲ್ಲಿ ಒಳನಾಡಿಗೆ ತಿರುಗುತ್ತದೆ. ಪಶ್ಚಿಮ ಘಟ್ಟದ ಸಿರಿಮೆ, ಜೋಗದ ಜಲಪಾತದ ಮೂಲಕ ಹಾದುಹೋಗಿ ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ವಿರಾಜಪೇಟೆ, ವಾಯ್ನಾಡ್, ಗುಡಲೂರು ಮೂಲಕ ಊಟಿ ತಲುಪುತ್ತದೆ. ಅದೇ ಮಾರ್ಗದಲ್ಲಿ ಹಿಂದಿರುಗಿ, ಗೋವಾದಲ್ಲಿ ಪೂರ್ಣಗೊಳ್ಳುತ್ತದೆ.4 ರಾಜ್ಯಗಳ ಮೂಲಕ ಹಾದುಹೋಗುವ ಈ ಮಾರ್ಗದಲ್ಲಿ, ಹಲವಾರು ಏರು ಇಳಿಕೆಯ ಪ್ರದೇಶಗಳನ್ನು ಕ್ರಮಿಸುತ್ತ ಸವಾರರು, ಸುಮಾರು 22,500 ಮೀಟರುಗಳಷ್ಟು ಎತ್ತರ ಹಲವಾರು ಕೊರತೆಗಳನ್ನು ನಿಭಾಯಿಸಿ ಮುಂದುವರಿಯಬೇಕಾಗುತ್ತದೆ. ಇಂತಹ ಕಠಿಣಸ್ಪರ್ಧೆಯಲ್ಲಿ ಧನರಾಜ್ ಭಾಗವಹಿಸಿ ಎಲ್ಲರ ಮೆಚ್ಚಗೆಗೆ ಪಾತ್ರರಾಗಿದ್ದಾರೆ. ಆರೋಗ್ಯದಲ್ಲಿ ಉಂಟಾದ ಏರುಪೇರುಗಳನ್ನು ಲೆಕ್ಕಿಸದೆ ಧನರಾಜ್ ಅವರು ಗುರಿಮಟ್ಟಿದ ಕಾರಣಕ್ಕೆ ಅವರಿಗೆ ಶ್ಲಾಘನೆ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್.ಆರ್. ಗವಿಯಪ್ಪ ಒತ್ತಾಯ
ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.