ಇಂದಿನಿಂದ ಐತಿಹಾಸಿಕ ಮಹಾಮಸ್ತಕಾಭಿಷೇಕ ವೈಭವ
Team Udayavani, Feb 9, 2019, 5:51 AM IST
ಬೆಳ್ತಂಗಡಿ : ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕಕ್ಕೆ ಸಂತ ಸಮ್ಮೇಳನದ ಮೂಲಕ ಚಾಲನೆ ದೊರಕಿದ್ದು, ಫೆ. 9ರಂದು ಪೂಜಾ ಹಾಗೂ ಜನಕಲ್ಯಾಣ ಕಾರ್ಯ ಕ್ರಮದ ಮೂಲಕ ಉತ್ಸವ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ. ಈ ಐತಿಹಾಸಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಧರ್ಮಸ್ಥಳವು ಪೂರ್ಣ ರೀತಿಯಲ್ಲಿ ಸಿಂಗಾರ ಗೊಂಡು ಭಕ್ತರ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ.
ಈಗಾಗಲೇ ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣ ಕಂಡುಬಂದಿದ್ದು, ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸತೊಡಗಿ ದ್ದಾರೆ. ರತ್ನಗಿರಿ ಬೆಟ್ಟದಲ್ಲಿ ಭಗವಾನ್ ಬಾಹುಬಲಿಯ ಅಟ್ಟಳಿಗೆ ನಿರ್ಮಾಣದ ಕಾರ್ಯವೂ ಪೂರ್ಣಗೊಂಡಿದ್ದು, ಅಭಿಷೇಕದ ವೀಕ್ಷಣೆಗಾಗಿ ಸುಸಜ್ಜಿತ ಗ್ಯಾಲರಿ ಗಳೂ ನಿರ್ಮಾಣಗೊಂಡಿವೆ.
ಮಹಾಮಸ್ತಕಾಭಿಷೇಕವನ್ನು ನಡೆಸಿ ಕೊಡಲಿರುವ ಪೂಜ್ಯ ಮುನಿ ವರ್ಗದವರು ಈಗಾಗಲೇ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಅವರ ಸತ್ಕಾರಕ್ಕೂ ವಿಶೇಷ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಜತೆಗೆ 30ಕ್ಕೂ ಹೆಚ್ಚು ಸಮಿತಿಗಳ ಎರಡು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಮಹಾಮಸ್ತಕಾಭಿಷೇಕದ ಯಶಸ್ಸಿಗಾಗಿ ದುಡಿಯಲಿದ್ದಾರೆ. ಶುಕ್ರವಾರ ಊಟೋಪಚಾರಕ್ಕಾಗಿ ನಿರ್ಮಿಸಲಾದ ಪ್ರತ್ಯೇಕ ಅನ್ನಛತ್ರದಲ್ಲಿ ಸಾವಿರಾರು ಮಂದಿ ಭೋಜನ ಸ್ವೀಕರಿಸಿದ್ದಾರೆ.
ಪ್ರೊಜೆಕ್ಷನ್ ಮ್ಯಾಪಿಂಗ್
ಮಹಾಮಸ್ತಕಾಭಿಷೇಕದ ವಿಶೇಷ ಕಾರ್ಯ ಕ್ರಮದ ಭಾಗವಾಗಿ ಬಾಹುಬಲಿಯ ಜೀವನ ಚರಿತ್ರೆಯನ್ನು ಸಾರುವ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ವಿಶೇಷ ಆಕರ್ಷಣೆಯಾಗಿದೆ. ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ವಿಗ್ರಹದ ಬಳಿಯಲ್ಲಿ ಸೌಂಡ್ ಆ್ಯಂಡ್ ಲೈಟ್ ಶೋ ಹೆಸರಿನಲ್ಲಿ ಬಾಹುಬಲಿಯ ಜೀವನ ಚಿತ್ರಿತವಾಗಲಿದೆ.
ಪ್ರತಿದಿನ ರಾತ್ರಿ ಬೆಟ್ಟದಲ್ಲಿ ಇದು ಪ್ರದರ್ಶನಗೊಳ್ಳಲಿದ್ದು, ಫೆ. 9ರಂದು ರಾತ್ರಿ 7ಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಚಿತ್ರನಟ ರಮೇಶ್ ಅರವಿಂದ್ ಅವರು ಶೋ ಮ್ಯಾಪಿಂಗ್ ಉದ್ಘಾಟಿಸಲಿದ್ದಾರೆ. ಜತೆಗೆ ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವೆ ಜಯಮಾಲಾ ಉದ್ಘಾಟಿಸಲಿದ್ದು, ಉಜಿರೆ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ಅವರು ರೆಂಜಾಳ ಗೋಪಾಲಕೃಷ್ಣ ಶೆಣೈ ಅವರ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ.
ಮಾಧ್ಯಮ ಕೇಂದ್ರದ ವ್ಯವಸ್ಥೆ
ಮಾಧ್ಯಮ ಕೇಂದ್ರದಲ್ಲಿ ಮುದ್ರಣ, ದೃಶ್ಯ, ವೆಬ್ ಮಾಧ್ಯಮಗಳಿಗೆ ಅನುಕೂಲ ವಾಗುಂತೆ 50ಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಜೋಡಿಸಿದ್ದು, ಪ್ರಬಲ ಅಂತರ್ಜಾಲ ಸಂಪರ್ಕವನ್ನೂ ನೀಡಲಾಗಿದೆ. ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ| ಭಾಸ್ಕರ ಹೆಗಡೆ ಅವರ ನೇತೃತ್ವದಲ್ಲಿ ಕೇಂದ್ರವನ್ನು ಸಜ್ಜುಗೊಳಿಸಿದ್ದು, ಮಾಧ್ಯಮ ಸಮಿತಿ ಸಹ ಸಂಚಾಲಕ ಪವಿತ್ರಕುಮಾರ್ ಜೈನ್, ಉಪನ್ಯಾಸಕರಾದ ಸುನಿಲ್ ಹೆಗ್ಡೆ, ಡಾ| ಪದ್ಮನಾಭ, ಹಂಪೇಶ್ ಅವರು ಸೂಕ್ತ ಮಾರ್ಗದರ್ಶನ ನೀಡಲು ಸಿದ್ದರಾಗಿದ್ದಾರೆ. ಹಾಗೆಯೇ ಕಂಪ್ಯೂಟರ್ ತಂತ್ರಜ್ಞರಾದ ಮಾಧವ ಹೊಳ್ಳ, ಆಶ್ರಯ್, ಸಾಗರ್ ಅವರು ತಾಂತ್ರಿಕ ಸಹಾಯಕರಾಗಿರುತ್ತಾರೆ.
ಸಂತರ ಮೆರವಣಿಗೆ
ಶುಕ್ರವಾರ ನಡೆದ ಸಂತರ ಸಮ್ಮೇಳನದ ಪೂರ್ವಭಾವಿಯಾಗಿ ಬಸದಿಯಿಂದ ಹೊರಟ ಮೆರವಣಿಗೆಯಲ್ಲಿ ಮುನಿಗಳು, ಆಚಾರ್ಯರು, ಮಾತಾಜಿಯರು ಪಾಲ್ಗೊಂಡಿದ್ದರು. ಪೂಜ್ಯ ಸ್ವಾಮೀಜಿಗಳು ಕ್ಷೇತ್ರದ ಬೀಡಿನಿಂದ ಸಮ್ಮೇಳನ ನಡೆದ ಅಮೃತರ್ವಣಿ ಸಭಾಂಗಣಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು. ಡೊಳ್ಳು, ಬ್ಯಾಂಡ್, ವಾಲಗ, ಆನೆ ಮೆರವಣಿಗೆಗೆ ಮೆರುಗು ನೀಡಿತು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಸಂಚಾಲಕ ಡಿ. ಸುರೇಂದ್ರಕುಮಾರ್, ಸಂಚಾಲಕ ಡಿ. ಹರ್ಷೇಂದ್ರಕುಮಾರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.