ಧರ್ಮಸ್ಥಳ : ದಲಿತರ ಕುಂದುಕೊರತೆ ಸಭೆ
Team Udayavani, Apr 26, 2017, 3:56 PM IST
ಬೆಳ್ತಂಗಡಿ : ದಲಿತರ ಕುಂದುಕೊರತೆ ಸಭೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕನಗರದ ಸೂರ್ಯ ಸಭಾಭವನದಲ್ಲಿ ಜರಗಿತು.ಠಾಣಾಧಿಕಾರಿ ರಾಮ ನಾಯ್ಕ ಅವರು ಮಾಹಿತಿ ನೀಡಿ, ಆರ್ಥಿಕ ಬಡತನಕ್ಕೆ ಪ್ರಮುಖ ಕಾರಣ ಶೈಕ್ಷಣಿಕವಾಗಿ ಹಿಂದುಳಿದಿರುವುದು. ಮಹಿಳೆಯರು ಜಾಗೃತರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಶ್ರಮ ವಹಿಸಬೇಕು. ಆ ಮೂಲಕ ಕಾನೂನಿನ ಅರಿವಿನೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಆಗ ನಮ್ಮ ಸಮಾಜವೂ ಅಭಿವೃದ್ಧಿಯಾಗುತ್ತದೆ ಎಂದರು.
ಕಾನೂನಿನ ಅರಿವು ಇಲ್ಲದಿರುವುದರಿಂದ ಮನೆ ಹಾಗೂ ಸಮಾಜ ಅವನತಿಯತ್ತ ಸಾಗುತ್ತದೆ. ಕಾನೂನಿನ ಅರಿವು ಎಲ್ಲರಿಗೂ ಬಹಳ ಅಗತ್ಯವಾಗಿ ಇರಬೇಕು. ದಲಿತ ದೌರ್ಜನ್ಯ ತಡೆ ಕಾಯಿದೆ, ಮಹಿಳಾ ದೌರ್ಜನ್ಯ ತಡೆ ಕಾಯಿದೆ ಹಾಗೂ ಇನ್ನಿತರ ಕಾನೂನಿನ ಬಳಕೆಯ ಕುರಿತು ಹಾಗೂ ದುರುಪಯೋಗವಾಗದಂತೆ ಎಚ್ಚರ ವಹಿಸುವ ಕುರಿತು ಮಾಹಿತಿ ನೀಡಿದರು.
ಪೋಲಿಸ್ ಸಿಬಂದಿಗಳಾದ ರವೀಂದ್ರ ಹಾಗೂ ಗೋಪಾಲ, ಗ್ರಾ. ಪಂ. ಸದಸ್ಯೆ ಹೊನ್ನಮ್ಮ, ಧರ್ಮಸ್ಥಳ ಒಕ್ಕೂಟದ ಉಪಾಧ್ಯಕ್ಷ ಶರತ್, ಅಕ್ಕು ಮತ್ತಿತರರು ಉಪಸ್ಥಿತರಿದ್ದರು.ಶ್ರೀ ಧ.ಗ್ರಾ. ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರು, ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸುನೀತಾ ಸ್ವಾಗತಿಸಿ, ನವ್ಯಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.