ಲಕ್ಷದೀಪೋತ್ಸವದಲ್ಲಿ ಕಣ್ಣಿಗೆ ಬಿದ್ದದ್ದು ; ಶಕುನದ ಹಕ್ಕಿಯೊಂದಿಗೆ ಭವಿಷ್ಯ ನುಡಿವ ಸಿದ್ಧರು


Team Udayavani, Nov 24, 2019, 3:56 PM IST

Gini-Shashtra-730

ಅಲೆಮಾರಿ ಜನಾಂಗದವರು ನಮ್ಮ ಜನಮಾನಸದ ಒಂದು ಭಾಗವಾಗಿಯೇ ಹೋಗಿದ್ದಾರೆ. ಅವರು ತಮ್ಮ ಕುಲ ಕಸುಬನ್ನ ನಿಷ್ಠೆಯಿಂದ ಮಾಡುವಂತವರು. ಇಂತಹ ವೃತ್ತಿಯನ್ನು ಪಾಲಿಸುವವರಲ್ಲಿ ಗಿಣಿ ಶಾಸ್ತ್ರ ಹೇಳುವವರು ಕೂಡಾಒಬ್ಬರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೀಪೋತ್ಸವದ ಆಚರಣೆಯಲ್ಲಿ ಕಂಡು ಬಂದ ಒಂದು ವೈಶಿಷ್ಟ್ಯಎಂದರೆ ಗಿಣಿಶಾಸ್ತ್ರ ಹೇಳುಗರು. ಇಲ್ಲಿಗೆ ಬಂದಿದ್ದ ಗಿಣಿಶಾಸ್ತ್ರದವರು ‘ಸುಡಗಾಡು ಸಿದ್ಧರು’ ಎಂಬ ಅಲೆಮಾರಿ ಜನಾಂಗಕ್ಕೆ ಸೇರಿದವರು. ತಲೆತಲಾಂತರದಿಂದಲೂ ಸಾಗಿ ಬಂದಿರುವ ಕುಲಕಸುಬಾದ ಗಿಣಿಶಾಸ್ತ್ರವನ್ನು ಹೇಳುತ್ತಿದ್ದಾರೆ.

ಲಕ್ಷ ದೀಪೋತ್ಸವದಲ್ಲಿ ಕಾಣಿಸಿಕೊಂಡಿದ್ದ ಗಿಣಿ ಶಾಸ್ತ್ರದವರು ಮೈಲಳ್ಳಿಯ ಚಿಳಿಕೆರೆ ತಾಲೂಕಿನ ಚಿತ್ರದುರ್ಗದವರು. ಪ್ರಸುತ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನೆಲೆಸಿದ್ದಾರೆ. ತೆಲಗು ಹಾಗೂ ಕನ್ನಡ ಭಾಷೆ ಮಾತನಾಡುವ ಇವರು ಕಾಲಕ್ಕೆ ತಕ್ಕಂತೆ ಮುಂದುವರಿದು ಸ್ವಂತ ಮನೆ, ಜಮೀನನ್ನು ಹೊಂದಿದ್ದಾರೆ.

ಇವರದ್ದು ಕೇವಲ ಹೊಟ್ಟೆಪಾಡಿನ ಉದ್ಯೋಗವಷ್ಟೇ ಅಲ್ಲ. ಗಿಣಿ ಶಾಸ್ತ್ರ ಹೇಳುವುದು ತಲೆತಲಾಂತರದ ಸಂಪ್ರದಾಯ ಎನ್ನುವ ಕಾರಣಕ್ಕೆ ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಗಿಣಿ ಭವಿಷ್ಯ ಹೇಳುತ್ತಾರೆ. ಶಾಸ್ತ್ರ ಹೇಳಿ ಸಂಪಾದಿಸಿದ ಮೊತ್ತವನ್ನು ಶ್ರೀ ಸಿದ್ಧಾರೂಢ ಮಠಕ್ಕೆಅರ್ಪಿಸುತ್ತಾರೆ. ಇನ್ನುಳಿದ ಹತ್ತು ತಿಂಗಳು ಹಚ್ಚೆ ಹಾಕುತ್ತಾರೆ ಹಾಗೂ ಸ್ಟೇಷನರಿ ವಸ್ತುಗಳನ್ನು ಮಾರುತ್ತಾರೆ.

ನಾಲ್ಕು ತಲೆಮಾರಿನ ಜನ ಭವಿಷ್ಯ ಹೇಳುವುದನ್ನು ಮುಂದುವರೆಸಿದ್ದಾರೆ. ಜೊತೆಯಲ್ಲಿ ಮನೆಯ ಒಬ್ಬನೇ ಸದಸ್ಯ ಈ ವೃತ್ತಿಯಲ್ಲಿರಬಹುದು. ತಮ್ಮ ವೃತ್ತಿಯ ಪಾಲುದಾರನಾದ ಗಿಣಿಯನ್ನ ಚಿಕ್ಕಮರಿ ಇದ್ದಾಗಲೇ ಪಡೆದು ಅದಕ್ಕೆ ತರಬೇತಿ ನೀಡಲಾಗುತ್ತದೆ. ಭವಿಷ್ಯ ಹೇಳುವಾಗ ಗಿಣಿ ತನ್ನ ಯಜಮಾನನ ಆದೇಶದಂತೆ ಹಲವು ಕಾರ್ಡ್‌ಗಳಲ್ಲಿ ಒಂದನ್ನು ಆಯ್ದು ನೀಡಿ ಮತ್ತೆ ಪಂಜರ ಸೇರುತ್ತದೆ.

ಲಕ್ಷದೀಪೊತ್ಸವಕ್ಕೆ ಆಗಮಿಸಿದ್ದ ಜನರು ಗಿಣಿಶಾಸ್ತ್ರ  ಕೇಳಲು ಸಾಲಾಗಿ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಗಿಣಿರಾಮನ ಭವಿಷ್ಯ ಕೇಳಿ ತೃಪ್ತರಾಗಿ ಹೋದರೆ, ಇನ್ನು ಕೆಲವರು ಚಿಂತೆಯಲ್ಲಿ ಸಾಗಿದರು. ಸಾಲಾಗಿ ಕುಳಿತಿರುವ ಗಿಣಿಗಳು ನೋಡಲು ಆಕರ್ಷಕವಾಗಿತ್ತು.

ಗಿಣಿ ಶಾಸ್ತ್ರ ಹೇಳುವ ಸಂಪ್ರದಾಯ ನಮ್ಮ ಪೀಳಿಗೆಗೆ ಮುಕ್ತಾಯವಾಗುತ್ತದೆ. ನಾವು ಅನಕ್ಷರಸ್ಥರು. ಆದರೆ ನಮ್ಮ ಮಕ್ಕಳು ವಿದ್ಯೆ ಕಲಿತು ದೊಡ್ಡ ವ್ಯಕ್ತಿಗಳಾಗಬೇಕು. ಆದ್ದರಿಂದ ಅವರಿಗೆ ಈ ಕಸುಬನ್ನ ನಾವು ಹಸ್ತಾಂತರಿಸುವುದಿಲ್ಲ ಎಂಬುದು ಗಿಣಿ ಶಾಸ್ತ್ರ ಹೇಳುವವರ ಅಭಿಪ್ರಾಯವಾಗಿದೆ.

ವರದಿ: ವಾಣಿ ಭಟ್ ; ಚಿತ್ರಗಳು: ಸುರ್ವಣಾ ಹೆಗಡೆ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.