ಲಕ್ಷ ದೀಪೋತ್ಸವದ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ ಯಾಂತ್ರೀಕೃತ ಭತ್ತ ಬೇಸಾಯ ಮಾದರಿ
Team Udayavani, Nov 26, 2019, 6:01 PM IST
ಲಕ್ಷ ದೀಪೋತ್ಸವದ ವಸ್ತು ಪ್ರದರ್ಶನ ಪ್ರಾಂಗಣದಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ವಿಧಾನಗಳನ್ನು ವಿವರಿಸುವ ಮಾದರಿ ಯುಜನತೆಯ ಮನ್ನಣೆಗೆ ಪಾತ್ರವಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಭತ್ತ ಬೇಸಾಯದ ಯಾಂತ್ರೀಕೃತ ವಿಧಾನವನ್ನು ಜನರಿಗೆ ತಿಳಿಸುವ ಕಾರ್ಯ ಮಾಡುತ್ತಿದೆ.
ಪ್ರಸ್ತುತ ಹೆಚ್ಚುತ್ತಿರುವ ಬೇಸಾಯದ ಖರ್ಚು ಹಾಗೂ ವಾಣಿಜ್ಯ ಬೆಳೆಗಳ ಮೇಲಿನ ಆಕರ್ಷಣೆಯಿಂದ ರೈತರು ಭತ್ತ ಬೇಸಾಯದಿಂದ ವಿಮುಖರಾಗುತ್ತಿರುವ ಹಿನ್ನಲೆಯಲ್ಲಿ ಪರಿಹಾರವೆಂಬಂತೆ ಬೇಸಾಯ ವೆಚ್ಚವನ್ನು ನಿಯಂತ್ರಿಸಿ, ಇಳುವರಿಯನ್ನು ಹೆಚ್ಚಳ ಮಾಡುವುದಷ್ಟೇ ಅಲ್ಲದೆ ಭೂಮಿ ಹದಗೊಳಿಸುವುದರಿಂದ ಹಿಡಿದು ಬೆಳೆ ಕೊಯ್ಲಿನವರೆಗೆ ಯಾಂತ್ರೀಕೃತ ವಿಧಾನದಲ್ಲಿ ಬೇಸಾಯ ಮಾಡುವ ವಿನೂತನ ಮಾದರಿಯ ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಹಸಿರೆಲೆ ಗೊಬ್ಬರಕ್ಕಾಗಿ ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ನೇಗಿಲು, ಭೂಮಿ ತಯಾರಿಗಾಗಿ ಟ್ರ್ಯಾಕ್ಟರ್‌ಚಾಲಿತ ಕಲ್ಟಿವೇಟರ್, ಟಿಲ್ಲರ್, ನರ್ಸರಿ ತಯಾರಿಗಾಗಿ ಟ್ರೇಗಳು, ಸಸಿಗಳ ನಾಟಿಗಾಗಿ ನಾಟಿಯಂತ್ರ, ಕಳೆ ನಿರ್ವಹಣೆಗಾಗಿ, ಮಾನವ ಚಾಲಿತ ಅಥವಾ ಯಾಂತ್ರೀಕೃತ ಕೋನೋವೀಡರ್ ಕೊಯ್ಲಿಗಾಗಿ ರೀಪರ್ ಅಥವಾ ಯಾಂತ್ರೀಕೃತ ಕೋನೋವೀಡರ್, ಒಕ್ಕಣೆಗಾಗಿ ಒಕ್ಕಣೆಯಂತ್ರ ಇವೆಲ್ಲಜನರಿಗೆ ಸಹಕಾರಿಯಾಗುತ್ತದೆ.
ಸಾಂಪ್ರದಾಯಿಕ ವಿಧಾನವನ್ನುಅನುಸರಿಸುವವರಿಗೆ ಸಮಯಕ್ಕೆ ಸರಿಯಾಗಿ ಕೆಲಸಗಾರರು ಸಿಗದೆ ನಾಟಿ ವಿಳಂಬವಾಗುವುದರ ಜೊತೆಗೆ ಕೈಯಿಂದ ನಾಟಿ ಮಾಡಿ ಆಳ ಮತ್ತು ಅಂತರ ಸರಿಯಾಗದೆ ಇಳುವರಿ ಕಡಿಮೆಯಾಗುತ್ತದೆ. ಆದರೆ ಯಾಂತ್ರೀಕೃತ ವಿಧಾನದಲ್ಲಿ ಕಡಿಮೆ ಸಮಯ ಹಾಗೂ ವೆಚ್ಚದಲ್ಲಿ ನಾಟಿ ಮಾಡಬಹುದಾಗಿರುವುದರಿಂದ ಭತ್ತ ಕೃಷಿಕರಿಗೆ ಈ ಯಂತ್ರಗಳು ಹೆಚ್ಚು ಲಾಭದಾಯಕವಾಗಿವೆ.
ವರದಿ: ತಾರುಣ್ಯ ಸನಿಲ್ ; ಚಿತ್ರ: ಗಾಯತ್ರಿಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.