ಪಂಚಮಹಾವೈಭವದಲ್ಲಿ ವಿರಾಗಿಯಾದ ಬಾಹುಬಲಿ
Team Udayavani, Feb 15, 2019, 4:21 AM IST
ಬೆಳ್ತಂಗಡಿ: ಪಂಚಮಹಾವೈಭವ ಮಂಟಪದಲ್ಲಿ ಗುರುವಾರ ಬಾಹುಬಲಿ ಪೌದನ ಪುರ ಆಸ್ಥಾನ ವೈಭವದ ವಿಶ್ವರೂಪ ದರ್ಶನ ನಡೆಯಿತು. ಪೌದನಪುರದಲ್ಲಿ 10 ವೇದಿಕೆಗಳಲ್ಲಿ ಸಂಯೋಜಿಸಿದ ಕಲೆ, ಸಂಗೀತ, ನೃತ್ಯ, ಯಕ್ಷಗಾನ, ಜಾನಪದ ಕಲೆ ಕಣ್ಸೆಳೆಯಿತು.
ಭರತ ಮತ್ತು ಬಾಹುಬಲಿ ಅಹಿಂಸಾತ್ಮಕವಾಗಿ ಯುದ್ಧ ಮಾಡುವುದಾಗಿ ನಿರ್ಧರಿಸಿದ ಕ್ಷಣ ನೆರೆದ ಸಭಿಕರಲ್ಲಿ ಧನ್ಯತೆ ಮನೆ ಮಾಡಿತು. ಯುದ್ಧ ಸನ್ನಿವೇಶಕ್ಕಾಗಿ ಪೌದನಪುರ ವೇದಿಕೆ ಮುಂಭಾಗ ನೈಜ ಯುದ್ಧಭೂಮಿಯನ್ನೇ ಸೃಷ್ಟಿಸ ಲಾಗಿತ್ತು. ದೃಷ್ಟಿ ಯುದ್ಧ, ಜಲಯುದ್ಧ ಮತ್ತು ಮಲ್ಲ ಯುದ್ಧದ ಮೂಲಕ ಸೋಲು-ಗೆಲುವು ನಿರ್ಧರಿಸುವ ಸನ್ನಿವೇಶ ಅತ್ಯಮೋಘವಾಗಿತ್ತು.
ಯುದ್ಧದಲ್ಲಿ ಬಾಹುಬಲಿಯೇ ಜಯಿಸುವ ಸನ್ನಿವೇಶಕ್ಕೆ ನೆರೆದಿದ್ದ ಜನ ಸಾಕ್ಷಿಯಾದರಲ್ಲದೆ ಬಾಹುಬಲೀ ಕೀ ಜೈ ಎಂಬ ಘೋಷ ಮೊಳಗಿತು. ಕೊನೆಯ ಮಲ್ಲಯುದ್ಧದಲ್ಲಿ ಗೆದ್ದರೂ ಮೇಲೆತ್ತಿ ಭರತನನ್ನು ಕೆಳಗೆ ಹಾಕ ಬೇಕೆನ್ನುವಷ್ಟರಲ್ಲಿ, ಅಣ್ಣನೆಂಬ ಮಮತೆ ಮೂಡಿ ಕೆಳಕ್ಕಿಳಿಸುವ ದೃಶ್ಯ ಗಮನ ಸೆಳೆಯಿತು. ಕೊನೆಗೆ ಆತ ಕಾಡಿಗೆ ಹೊರಟ ಚಿತ್ರಣ ಕಣ್ಣಾಲಿ ತೇವವಾಗಿಸಿತು. ಸಾಮಂತ ರಾಜರಾಗಿ ಹೆಗ್ಗಡೆ ಕುಟುಂಬಸ್ಥರಾದ ಶ್ರೇಯಸ್ ಡಿ. ಕುಮಾರ್, ನಿಶ್ಚಲ್ ಡಿ. ಕುಮಾರ್, ಅಮಿತ್ ಕುಮಾರ್ ಅಭಿನಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.