ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಅಭಿವೃದ್ಧಿ ಮಂತ್ರದಡಿ 1.73 ಕೋ.ರೂ.
Team Udayavani, Jul 11, 2020, 6:47 AM IST
ಯೋಜನೆಯಿಂದ ಅನುಷ್ಠಾನಗೊಂಡಿರುವ ರುದ್ರಭೂಮಿಯ ಅಭಿವೃದ್ಧಿ ಕಾರ್ಯ.
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೈಯಕ್ತಿಕ ಕುಟುಂಬಗಳ ಅಭಿವೃದ್ಧಿಯೊಂದಿಗೆ ಗ್ರಾಮದ ಅಭಿವೃದ್ಧಿ ಆಗಬೇಕೆಂಬ ಆಶಯದಂತೆ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಎಲ್.ಎಚ್. ಮಂಜುನಾಥ ಅವರ ಶಿಫಾರಸಿನಂತೆ ಸಂಸ್ಥೆಯ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯದ ವಿವಿಧ ಕಾಮಗಾರಿಗಳ ಅಭಿವೃದ್ಧಿಯ ವರದಿಯನ್ನು ಪರಿಶೀಲಿಸಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈವರೆಗೆ 1.73 ಕೋ.ರೂ. ಅನುದಾನ ಮಂಜೂರು ಮಾಡಿದ್ದಾರೆ.
ಗ್ರಾಮ ಕಲ್ಯಾಣ ಯೋಜನೆಯಡಿಯಲ್ಲಿ ಸಮುದಾಯ ಭವನ, ವೃದ್ಧಾಶ್ರಮ ನಿರ್ಮಾಣ, ವ್ಯಾಯಾಮ ಶಾಲೆ, ಸಾರ್ವಜನಿಕ ಶೌಚಾಲಯ ರಚನೆ, ಭಜನ ಮಂದಿರ ನಿರ್ಮಾಣ, ಗೋ ಶಾಲಾ ನಿರ್ವಹಣೆ, ಮಹಿಳಾ ಮಂಡಳಿ ಕಟ್ಟಡ, ಅಂಧರ ಗೀತಗಾಯನ ಕಲಾ ಸಂಘಕ್ಕೆ ಸಹಾಯಧನ, ಸ್ತ್ರೀಶಕ್ತಿ ಭವನದ ಕಟ್ಟಡ ನಿರ್ಮಾಣ ಮುಂತಾದ 33 ಕಾಮಗಾರಿಗಳಿಗೆ 36 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಹಾಲು ಉತ್ಪಾದಕರ ಸಂಘಗಳ ಕಟ್ಟಡ ರಚನೆ ಇನ್ನಿತರ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. 86 ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ 81 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮದಡಿ ದಹನ ಶೆಡ್ ರಚನೆ, ಸಿಲಿಕಾನ್ ಚೇಂಬರ್ ಅಳವಡಿಕೆ, ಆವರಣ ಗೋಡೆ ರಚನೆ, ದಾಸ್ತಾನು ಕೊಠಡಿ ನಿರ್ಮಾಣ, ತ್ಯಾಜ್ಯ ಗುಂಡಿ ನಿರ್ಮಾಣ, ಶೌಚಾಲಯ ನಿರ್ಮಾಣ, ನೀರು ಮತ್ತು ವಿದ್ಯುತ್ ವ್ಯವಸ್ಥೆ ಮುಂತಾದ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ 6 ಹಿಂದೂ ರುದ್ರಭೂಮಿಗಳಿಗೆ 12.50 ಲಕ್ಷ ರೂ. ಮಂಜೂರಾಗಿದೆ.
ಜ್ಞಾನದೀಪ ಕಾರ್ಯಕ್ರಮದಡಿ ಶಾಲಾ ಕಟ್ಟಡ, ಸಭಾಭವನ, ರಂಗಮಂದಿರ, ಶೌಚಾಲಯ, ಆವರಣ ಗೋಡೆ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ 8.25 ಲಕ್ಷ ರೂ. ನೀಡಲಾಗಿದೆ. 1990ರಿಂದ ಇದುವರೆಗೆ 269.37 ಕೋ.ರೂ.ಗಳನ್ನು ಡಾ| ಹೆಗ್ಗಡೆ ಮಂಜೂರು ಮಾಡಿದ್ದಾರೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ಹಿರಿಯ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜನಮಂಗಲ ಕಾರ್ಯಕ್ರಮ
ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಸಂದರ್ಭ ಘೋಷಿಸಿದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷಚೇತನರಿಗೆ ಅವಶ್ಯವಿರುವ ವಿವಿಧ ಬಗೆಯ ಸಲಕರಣೆಯನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜ್ಯದ 1,240 ವಿಶೇಷ ಚೇತನರಿಗೆ 35 ಲಕ್ಷ ರೂ. ಮೌಲ್ಯದ ಸಲಕರಣೆ ವಿತರಣೆಗೆ ಮಂಜೂರಾತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.