ಧರ್ಮಸ್ಥಳ: ಶಿವಪಂಚಾಕ್ಷರಿ ಜಪ ಅಂತರಂಗ ದರ್ಶನಕ್ಕೆ ಶಿವರಾತ್ರಿ
Team Udayavani, Feb 25, 2017, 10:07 AM IST
ಬೆಳ್ತಂಗಡಿ: ದೇಹ, ಆತ್ಮ ಪ್ರತ್ಯೇಕವಾಗಿ ಯಾವುದು ಎಂದು ಗುರುತಿಸಿಕೊಳ್ಳಲು ದೇವೋಪಾಸನೆ ಸಹಾಯಕ. ನನ್ನೊಳಗಿನ ನಾನು ಯಾರೆಂದು ಗುರುತಿಸಿಧಿಕೊಂಡು ಅಂತರಂಗ ದರ್ಶನ ಮಾಡಿಕೊಳ್ಳಲು ಶಿವರಾತ್ರಿ ಧ್ಯಾನ ಪೂರಕ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶುಕ್ರವಾರ ರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶಿವಪಂಚಾಕ್ಷರಿ ಜಪ ಪಠನ ಉದ್ಘಾಟಿಸಿ ಮಾತನಾಡಿದರು. ಭಗವಂತ ನಮಗೆ ಏನೇ ಕೊಟ್ಟರೂ ನಮಗೆ ಅದರ ಬೆಲೆ ತಿಳಿದಿರಬೇಕು. ಇಲ್ಲದಿದ್ದರೆ ಸದ್ವಿನಿಯೋಗ ಅಸಾಧ್ಯ. ನಮ್ಮ ಬದುಕನ್ನು ದುವ್ಯìಸನಗಳಿಗೆ ಬಲಿ ಕೊಡಧಿಬಾರದು. ನಾವು ಇತರರನ್ನು ಗೌರವಿಸಿ, ಪ್ರೀತಿಸಿದರೆ ನಾವೂ ಗೌರವಕ್ಕೆ ಪಾತ್ರರಾಗುತ್ತೇವೆ. ಸಹಸ್ರಾರು ವರ್ಷಧಿಗಳಿಂದ ಶಿವರಾತ್ರಿ ಬರುತ್ತಿದ್ದರೂ ಅದು ಹಳತಾಗದು, ಮಹಿಮೆ ನಿತ್ಯನೂತನಧಿವಾಗಿರುತ್ತದೆ. ಏಕಾಗ್ರತೆ ಭಕ್ತಿ ಶ್ರದ್ಧೆಯ ಸೇವೆಯಿಂದ ಸತ#ಲ ದೊರೆಯುತ್ತದೆ. 1 ದಿನವನ್ನು ಭಗವಂತನ ಆರಾಧನೆಗೆ ಮೀಸಲಿಡೋಣ. ಹೊಟ್ಟೆ ಪಾಡಿಗಾಗಿ ಆಯುಷ್ಯ ಮೀಸಲಿಟ್ಟ ನಾವು ಕೆಲವು ದಿನವಾದರೂ ಭಗವಂತನ ಸೇವೆ ಮೂಲಕ ಆತೊ¾àನ್ನತಿಧಿಗಾಗಿ ವಿನಿಯೋಗಿಸೋಣ. ಜೀವನ ಅಮೂಲ್ಯಧಿವಾದುದು. ಆಯುಷ್ಯದ ಬೆಲೆ ತಿಳಿದಿದ್ದರೆ ಮಾತ್ರ ಸದ್ವಿನಿಯೋಗ ಸಾಧ್ಯ ಎಂದು ಹೇಳಿದರು.
ಯಾವುದೇ ಪುಣ್ಯ ಕ್ಷೇತ್ರವನ್ನು ಮಲಿನ ಮಾಡಬೇಡಿ. ಈ ಬಾರಿ ಧಾರ್ಮಿಕ ಕೇಂದ್ರ ಸ್ವತ್ಛತಾ ಅಭಿಯಾನದಲ್ಲಿ ರಾಜ್ಯದಲ್ಲಿ 7 ಲಕ್ಷ ಸ್ವಯಂ ಸೇವಕರು 8 ಸಾವಿರ ಧಾರ್ಮಿಕ ಕೇಂದ್ರಗಳ ಸ್ವತ್ಛತೆ ನೆರವೇರಿಸಿದ್ದಾರೆ. ಇದು ನಿರಂತರ ನಡೆಯಬೇಕು. ಪ್ರತಿಯೊಬ್ಬ ಯಾತ್ರಿಯೂ ಸ್ವತ್ಛತಾ ಅಭಿಯಾನದ ಪಣ ತೊಡಬೇಕು. ಸ್ವತ್ಛತೆಯಿಂದ ಕ್ಷೇತ್ರದ ಪಾವಿತ್ರ್ಯ ವೃದ್ಧಿಯಾಗುತ್ತದೆ ಎಂದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹಷೇìಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಹನುಮಂತಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.