ಪಿಲಿಕುಳ ಮೃಗಾಲಯಕ್ಕೆ ಅಪರೂಪದ “ಧೋಲ್’!
Team Udayavani, Dec 17, 2018, 10:22 AM IST
ಮಂಗಳೂರು: ಅಳಿವಿನ ಅಂಚಿನಲ್ಲಿರುವ ಅಪರೂಪದ “ಧೋಲ್’ ಎಂಬ ಪ್ರಾಣಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಬಂದಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಗಂಡು ಹೆಣ್ಣು ಎರಡು ಜೋಡಿ ಧೋಲ್‌ಗಳನ್ನು ಪಿಲಿಕುಳಕ್ಕೆ ತರಿಸಲಾಗಿದೆ.
“ಧೋಲ್’ ಅನ್ನು ಸಾಮಾನ್ಯವಾಗಿ ಕಾಡುನಾಯಿ, ಚೆನ್ನೆ ನಾಯಿ ಎಂದೂ ಕರೆಯುತ್ತಾರೆ. ಇವು ಹಿಂಡುಗಳಲ್ಲಿ ವಾಸಿಸುತ್ತವೆ ಹಾಗೂ ಬೇಟೆಯಾಡುತ್ತವೆ. ಪಶ್ಚಿಮ ಘಟ್ಟ ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರ ಕಂಡುಬರುತ್ತಿರುವ ಇವುಗಳು ಪ್ರಸ್ತುತ ಅಳಿವಿನಂಚಿನಲ್ಲಿವೆ. ಇವುಗಳು ಜಿಂಕೆ, ಕಡವೆಯಂತಹ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡುತ್ತವೆ. ಒಂಟಿಯಾಗಿ ಸಿಕ್ಕ ಹುಲಿಯನ್ನು ಕೂಡ ಇವುಗಳ ಗುಂಪು ಕೊಂದ ಉದಾಹರಣೆ ಇದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
ಪಿಲಿಕುಳಕ್ಕೆ ತರಿಸಲಾಗಿರುವ “ಧೋಲ್’ ಅನ್ನು ಸಂದರ್ಶಕರಿಗೆ ಒಂದು ವಾರದ ಅನಂತರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಆ ತನಕ ಅವುಗಳಿಗೆ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಅವಕಾಶ ನೀಡಲಾಗಿದೆ. ಜತೆಗೆ, ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಐದು ಪೈಂಟೆಡ್ ಕೊಕ್ಕರೆ, ದೊಡ್ಡ ಜಾತಿಯ ಐದು ಅಲೆಕ್ಸ್ ಜಾಡ್ರಿಯನ್ ಗಿಳಿಗಳನ್ನು ತರಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪ್ರಾಣಿಗಳ ವಿನಿಮಯ ಯೋಜನೆಯನ್ವಯ ಪಿಲಿಕುಳದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಹುಲಿಗಳಲ್ಲಿ ಎರಡು ಗಂಡು, ಕಾಡುಕೋಳಿಗಳ ಪೈಕಿ ನಾಲ್ಕು ಮತ್ತು ಒಂದು ಮೊಸಳೆಯನ್ನು ವಿಶಾಖಪಟ್ಟಣಕ್ಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.